October 5, 2024

ಕರ್ನಾಟಕ ಸರಕಾರದ ಆದೇಶದನ್ವಯ ಮೈಸೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ನಂಜುಂಡ ಹಾಗೂ ಡಾ.ಮಹದೇವ ಶಾಕ್ಯ ಅವರ ನೇತೃತ್ವದ ತಂಡದಿಂದ ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಭಾಂಗಣದಲ್ಲಿ ವಿಶ್ವ ಕರ್ಮ ಸೇವಾ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಪ್ರಗತಿಗಾಗಿ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಮಹಿಳಾ ವಿಶ್ವಕರ್ಮದ ಪದಾಧಿಕಾರಿಗಳು ಪಾಲ್ಗೊಂಡು ವಿಶ್ವ ಕರ್ಮ ಮತ್ತು ಅದರ 41 ಉಪ ಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನದ ಬಗ್ಗೆ ಗಂಭೀರ ಚರ್ಚೆ ನಡೆಸುವ ಮೂಲಕ ವಿಚಾರಗಳನ್ನು ವರದಿಯಲ್ಲಿ ಸೇರ್ಪಡೆಗೊಳಿಸಲಾಯಿತು. ಕಾರ್ಯಕ್ರಮದ ನಂತರ ಪಟ್ಟಣದಲ್ಲಿರುವ ವಿಶ್ವಕರ್ಮ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಕುಂದು ಕೊರೆತೆಗಳನ್ನು ಆಲಿಸಿದರು.

ವಿಶ್ವಕರ್ಮ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಿ.ಜೆ.ಚೇತನ್, ಉಪಾಧ್ಯಕ್ಷರಾದ ಉಮೇಶ್ ಆಚಾರ್ಯ ಕೊಪ್ಪ, ಸುರೇಶ್ ಸುಣ್ಣದಳ್ಳ, ತಾಲೂಕು ಅಧ್ಯಕ್ಷ ಎಂ.ಕೆ.ಮಂಜುನಾಥ್ ಆಚಾರ್ಯ, ಗೌರವಾಧ್ಯಕ್ಷ ಬಾಸ್ಕರಚಾರ್, ಸಲಹ ಸಮಿತಿಯ ಪರಮೇಶ್ವರ ಆಚಾರ್ಯ, ತಾಲೂಕು ಸಚೇತಕ ರಘುಪತಿ ಆಚಾರ್ಯ, ನಿರ್ದೇಶಕರಾದ ರಘು ಬಾಳೆಹೊನ್ನೂರು, ರಮೇಶ್ ಕಡಿದಾಳ್, ವಿಠಲ್ ಆಚಾರ್ಯ, ಮಹೇಶ್ವರ ಆಚಾರ್ಯ ಕಡೂರು, ನಾಗರತ್ನ ನಾಗಭೂಷಣ್ ಕೊಪ್ಪ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ