October 5, 2024

ಮಾನವ ವಿರೋಧಿ ಕಾರ್ಯ ದೇಶದ ಮಣಿಪುರದಲ್ಲಿ ನಡೆದಿದ್ದು, ಇದಕ್ಕೆ ಡಬಲ್ ಎಂಜಿನ್ ಸರಕಾರವಾಗಿರುವ ಕೇಂದ್ರ ಮತ್ತು ಮಣಿಪುರದ ರಾಜ್ಯ ಸರಕಾರ ಗಲಭೆ ನಿಯಂತ್ರಣಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿ ಹಿಂಸಾಚಾರವನ್ನು ತಡೆಯಬೇಕೆಂದು ಮಾಜಿ ಸಚಿವೆ ಮೋಟಮ್ಮ ಒತ್ತಾಯಿಸಿದರು.

ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಣಿಪುರ ಹಿಂಸಾಚಾರ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬೇಟಿ ಬಚೋವೊ, ಬೇಟಿ ಪಡಾವೋ ಎನ್ನುವ ಪ್ರಧಾನಿಗಳು ಮಣಿಪುರದಲ್ಲಿ ಮಹಿಳೆಯರ ಮೇಲೆ ಆದಂತಹ ದೌರ್ಜನ್ಯದ ಬಗ್ಗೆ ಇಲ್ಲಿಯವರೆಗೂ ಚಕಾರವೆತ್ತಿಲ್ಲ. ಮಣಿಪುರದಲ್ಲಿರುವವರು ಭಾರತೀಯರೆ. ಹಾಗಾಗಿ ಮಹಿಳೆಯರ ರಕ್ಷಣ ಮಾಡುವುದು ಪ್ರಧಾನಿ ಅವರ ಕರ್ತವ್ಯವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಣಿಪುರದಲ್ಲಿ ಹಿಂಸಾಚಾರ ಘಟನೆ ಇಂದಿಗೂ ಮುಂದುವರೆದಿರುವುದು ಆಘಾತಕಾರಿ ಹಾಗೂ ನೋವಿನ ಸಂಗತಿಯಾಗಿದೆ. ಘಟನೆಯಿಂದ ಈಗಾಗಲೇ ಅನೇಕರು ಜೀವ ಕಳೆದುಕೊಂಡಿದ್ದಾರೆ. ಚೆರ್ಚ್, ಮಂದಿರ, ಮನೆಗಳು ಸೇರಿದಂತೆ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಕೂಡಲೇ ಹಿಂಸಾಚಾರವನ್ನು ತಡೆಗಟ್ಟಿ ಶಾಂತಿ ನೆಲೆಸಲು ಅಲ್ಲಿನ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಮೂಡಿಗೆರೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು.

ಚಿಕ್ಕಮಗಳೂರಿನ ಕ್ರೈಸ್ತ ದರ್ಮಕ್ಷೇತ್ರದ ಬಿಷಪ್ ಡಾ.ಟಿ.ಅಂತೋನಿ ಸ್ವಾಮಿ, ಮಂಗಳೂರು ಮಾಜಿ ಶಾಸಕ ಜೆ.ಆರ್.ಲೋಬೋ, ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಮೂಡಿಗೆರೆ ಸಂತ ಅಂತೋನಿ ಚರ್ಚ್ ದರ್ಮಗುರು ಸುನಿಲ್ ರೊಡ್ರಿಗಸ್,ಬಣಕಲ್ ಬಾಲಿಕಾ ಮರಿಯ ಚರ್ಚ್ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ,ಬಸ್ಕಲ್ ಸಂತ ಜೋಸೆಪರ ಚರ್ಚ್ ಧರ್ಮಗುರು ಫಾ.ಜೇಮ್ಸ್ ಚಾರ್ಲಿ,ಕೂವೆ ಪವಿತ್ರ ಶಿಲುಭೆ ಚರ್ಚ್ ದರ್ಮಗುರು ಫಾ.ಲ್ಯಾನ್ಸಿ ಪಿಂಟೊ,ಹಿರೇಬೈಲ್ ಸಂತ ಜೋಸೆಫರ ಚರ್ಚಿನ ದರ್ಮಗುರು ಫಾ.ಡೇವಿಡ್ ಪ್ರಕಾಶ್,ಕೂದುವಳ್ಳಿ ಲೂರ್ದು ಚರ್ಚಿನ ದರ್ಮಗುರು ಫಾ.ಡೆನ್ಜಿಲ್ ಲೋಬೊ,ಮಾಗುಂಡಿ ಲೂರ್ದು ಮಾತೆ ಚರ್ಚ್ ದರ್ಮಗುರು ಫಾ.ಜೋಸೆಫ್ ಮಾಡ್ತಾ,ಬಣಕಲ್ ವಿಮುಕ್ತಿ ಮಹಿಳಾ ಸಂಘಟನೆಯ ನಿರ್ದೇಶಕ ಫಾ.ಎಡ್ವಿನ್ ರಾಕೇಶ್ ಡಿಸೋಜ, ಗೋಣಿಬೀಡು ಚರ್ಚಿನ ಫಾ.ಪೀಟರ್ ಬ್ರ್ಯಾಂಕ್ ,ಹಾಸನ ಸಂತ ಜೋಸೆಫರ ಚರ್ಚಿನ ಫಾ.ಮೆಲ್ವಿನ್ ಮೆಂಡೋನ್ಸಾ,ಚಿಕ್ಕಮಗಳೂರು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮೆಲ್ವಿನ್ ಹರ್ಷ ಲಸ್ರಾದೊ, ಜೆರೋಮ್ ನೊರೋನಾ, ಮಹಮ್ಮದ್, ಲೋಕವಳ್ಳಿ ರಮೇಶ್, ಅಂಗಡಿ ಚಂದ್ರು ಮತ್ತಿತರರಿದ್ದರು.

 

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ