October 5, 2024

ತನ್ನ ತೋಟದಲ್ಲಿ ಮರದ ಕೊಂಬೆ ಕಡಿಯುವಾಗ ಮರಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ ಕೃಷಿಕರೊಬ್ಬರು ಪ್ರಾಣಬಿಟ್ಟ ಘಟನೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಳೂರು ಹೋಬಳಿ ಹುಯಿಲುಮನೆ ಗ್ರಾಮದ ಲೋಕಪ್ಪಗೌಡ (56 ವರ್ಷ) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದುರ್ದೈವಿ.

ಭಾನುವಾರ ತಮ್ಮ ತೋಟದಲ್ಲಿ ಮರದ ಕೊಂಬೆಗಳನ್ನು ಕಡಿಯುವ ಸಂದರ್ಭದಲ್ಲಿ ಮರದ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ಮರದ ಕೊಂಬೆ ತಾಗಿದ್ದು, ಇದರಿಂದ ಮರದಲ್ಲಿದ್ದ ಲೋಕಪ್ಪಗೌಡರ ದೇಹದಲ್ಲಿ ವಿದ್ಯುತ್ ಪ್ರವಹಿಸಿದ್ದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಲೋಕಪ್ಪಗೌಡರ ದೇಹ ಸುಮಾರು ಹೊತ್ತು ಮರದಲ್ಲಿಯೇ ನೇತಾಡುತ್ತಿತ್ತು.

ವಿಷಯ ತಿಳಿದ ಬಾಳೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಬಣಕಲ್ ಸಮಾಜ ಸೇವಕ ಸ್ನೇಕ್ ಆರೀಫ್ ಸಹಕಾರದಿಂದ ಶವವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಿನ್ನೆ ತಡರಾತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಇಂದು ಸ್ವಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ.

ಮೃತ ಲೋಕಪ್ಪಗೌಡರು ಉತ್ತಮ ಕೃಷಿಕರಾಗಿದ್ದರು, ಶ್ರಮಜೀವಿಯಾಗಿದ್ದರು. ಮೃತರು ಪತ್ನಿ, ಮಗ, ಮಗಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೆಸ್ಕಾಂ ನಿರ್ಲಕ್ಷ್ಯ ಆರೋಪ :

ವಿದ್ಯುತ್ ಲೈನಿಗೆ ಮರದ ಕೊಂಬೆ ತಾಗುತ್ತಿದ್ದರೂ ಮೆಸ್ಕಾಂ ಸಿಬ್ಬಂದಿ ಗಮನಿಸದೇ ನಿರ್ಲಕ್ಷ್ಯ ವಹಿಸಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಭಾಗದಲ್ಲಿ ಅನೇಕ ಕಡೆ ವಿದ್ಯುತ್ ಲೈನ್ ರೈತರ ತೋಟದೊಳಗೆ ಹಾದು ಹೋಗಿದೆ. ಮೆಸ್ಕಾಂ ನವರು ಲೈನ್ ಕ್ಲಿಯರ್ ಮಾಡುವಾಗ ಸರಿಯಾಗಿ ಗಮನಿಸದೇ ಅನೇಕ ಕಡೆ ಮರದ ಕೊಂಬೆಗಳು ವಿದ್ಯುತ್ ಲೈನಿಗೆ ತಾಗುತ್ತಿವೆ.

ಲೋಕಪ್ಪಗೌಡರ ತೋಟದಲ್ಲಿಯೂ ಹೀಗೆ ಮರದ ಕೊಂಬೆ ವಿದ್ಯುತ್ ಲೈನಿಗೆ ತಾಗಿತ್ತು. ಮೆಸ್ಕಾಂನವರು ಇದರ ಕಡೆ ಗಮನ ಹರಿಸದೇ ಇದ್ದಾಗ ನಿನ್ನೆ ವಿದ್ಯುತ್ ನಿಲುಗಡೆ ಆಗಿದ್ದ ಸಮಯದಲ್ಲಿ ತಾವೇ ಕೊಂಬೆ ಕಡಿಯಲು ಮುಂದಾಗಿದ್ದಾರೆ. ಆದರೆ ಅವರು ಮರದಲ್ಲಿ ಇದ್ದಾಗಲೇ ವಿದ್ಯುತ್ ಬಂದಿದ್ದು ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸೂಕ್ತ ಪರಿಹಾರಕ್ಕೆ ಆಗ್ರಹ : ಮೃತ ರೈತರ ಕುಟುಂಬಕ್ಕೆ ಮೆಸ್ಕಾಂ ನವರು ಸೂಕ್ತ ಪರಿಹಾರ ನೀಡಬೇಕು ಮತ್ತು ತೋಟದೊಳಗೆ ಹಾದುಹೋಗಿರುವ ಎಲ್ಲಾ ಕಡೆ ಲೈನ್ ಕ್ಲಿಯರ್ ಮಾಡಬೇಕು. ಆದಷ್ಟು ವಿದ್ಯುತ್ ಲೈನ್ ರಸ್ತೆ ಪಕ್ಕದಲ್ಲಿ ಎಳೆಯುವ ಪ್ರಯತ್ನ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ