October 5, 2024

ಮೂಡಿಗೆರೆ ಪಟ್ಟಣದ  ಲೋಕವಳ್ಳಿ ಸಮೀಪದ ಎನ್.ಎನ್. ರಾಜೀವ್ ಎನ್ನುವವರ ಕಾಫಿ ಎಸ್ಟೇಟ್‍ನಲ್ಲಿ ಶುಕ್ರವಾರ ಬೆಳಿಗ್ಗೆ ಅಪರಿಚಿತ ಶವವೊಂದು ಪತ್ತೆಯಾಗಿತ್ತು.

ಶುಕ್ರವಾರ ಬೆಳಗ್ಗೆ ತೋಟದಲ್ಲಿ ಕಾರ್ಮಿಕರು ಔಷಧಿ ಸಿಂಪಡಣೆ ಮಾಡುವ ಸಂದರ್ಭದಲ್ಲಿ ದುರ್ವಾಸನೆ ಬೀರುತ್ತಿದ್ದರಿಂದ ಏನಿರಬಹುದೆಂದು ಹುಡುಕಾಟ ನಡೆಸಿದ್ದಾರೆ. ಆಗ ತೋಟದ ಕೆರೆಯ ಸಮೀಪದ ಆಳವಾದ ಕಣಿವೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಮತ್ತು ಸ್ಥಳೀಯರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪರಿಶೀಲಿಸಲಾಗಿ ಶವವು ಸ್ಥಳೀಯ ಲೋಕವಳ್ಳಿ ಗ್ರಾಮದ ತೇಜು ಎಂಬ ವ್ಯಕ್ತಿಯದ್ದು ಎಂದು ಗುರುತಿಸಲಾಯಿತು.

ಲೋಕವಳ್ಳಿ ನಿವಾಸಿ ಸುಮಾರು 40 ವರ್ಷದ ತೇಜು ಈಗ್ಗೆ ಹತ್ತುದಿನಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಟಿಂಬರ್ ಕೆಲಸ ಮಾಡಿಕೊಂಡಿದ್ದ ತೇಜು ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿಯೂ ದುರ್ಬಲನಾಗಿದ್ದ ಎಂದು ತಿಳಿದುಬಂದಿದೆ. ಆಗಾಗ ವಾರಗಟ್ಟಲೇ ಮನೆ ಬಿಟ್ಟು ಹೋಗುತ್ತಿದ್ದುದರಿಂದ ಎಲ್ಲೋ ಹೋಗಿರಬೇಕು ವಾಪಾಸ್ಸು ಬರುತ್ತಾನೆ ಎಂದು ಮನೆಯವರು ಕಾಣೆಯಾಗಿರುವ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ತೇಜು ವಿವಾಹವಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದರು.

ಆದರೆ ನಿನ್ನೆ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಸಂಶಯಾಸ್ಪದ ಸಾವು ಎಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರಗೆ ಸಾಗಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮೃತರ ತಾಯಿ ಮತ್ತು ಮಡದಿ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಡಿಗೆರೆ ಠಾಣಾಧಿಕಾರಿ ಆದರ್ಶ ಅವರು ತಿಳಿಸಿದ್ದಾರೆ.

ಕೊಳೆತ ಸ್ಥಿತಿಗೆ ತಲುಪಿದ್ದ ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೊನು ಗೌರಧ್ಯಕ್ಷರಾದ ಅಬ್ದುಲ್ ರಹಿಮಾನ್ ಉಪಾಧ್ಯಕ್ಷರಾದ ಆರಿಫ್ ಬಣ್ಕಲ್, ರಹಿಮಾನ್ ಅಂಬುಲೆನ್ಸ್, ಸಹ ಕಾರ್ಯದರ್ಶಿ ಆಶಿಕ್ ಬಿಜುವಳ್ಳಿ ತಂಡದವರು ಮೇಲತ್ತಿ ಪ್ಯಾಕ್ ಮಾಡಲು ಸಹಕರಿಸಿದರು.

ಮೂಡಿಗೆರೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಚಿಕ್ಕಮಗಳೂರು ಎಸ್ಪಿ ಕಛೇರಿಯ ಕ್ರೈಂ ಅಧಿಕಾರಿಗಳು ಇವರ ಸಮ್ಮುಖದಲ್ಲಿ ಮೃತ ದೇಹವನ್ನು ಮೇಲೆಕ್ಕೆ ಎತ್ತಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ