October 5, 2024

ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿಕೊಂಡು ವಿದ್ಯುತ್ ಪ್ರವಹಿಸಿ ಮಗುವೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಕಾರಾವಾರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಕಾರಾವಾರದ ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿರುವ ಸಂತೋಷ್ ಎಂಬುವವರ ಎಂಟು ತಿಂಗಳ ಮಗು ಸಾನಿಧ್ಯ ಆಕಸ್ಮಿಕವಾಗಿ ವಿದ್ಯುತ್ ಚಾರ್ಜರ್ ಬಾಯಿಗೆ ಹಾಕಿಕೊಂಡು ಮೃತಪಟ್ಟಿದೆ.

ಪೋಷಕರು ಮೊಬೈಲ್ ಚಾರ್ಜಿಗೆ ಹಾಕಿ ತೆಗೆದ ನಂತರ ಚಾರ್ಜರ್ ಅನ್ನು ಸ್ವಿಚ್ ಆಫ್ ಮಾಡಿರಲಿಲ್ಲ. ಮಗು ಚಾರ್ಜರ್ ಪಿನ್ನನ್ನು ಬಾಯಿಗೆ ಹಾಕಿಕೊಂಡಿದ್ದು ಆಗ ಮಗುವಿನ ದೇಹದಲ್ಲಿ ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಪೋಷಕರೇ ಎಚ್ಚರ :

ಇಂತಹ ಘಟನೆಗಳು ಅನೇಕ ಕಡೆ ನಡೆದಿದೆ. ಚಿಕ್ಕ ಮಕ್ಕಳು ಮನೆಯಲ್ಲಿ ಇದ್ದಾಗ ಮೊಬೈಲ್ ಚಾರ್ಜರ್ ವಿಷಯದಲ್ಲಿ ತುಂಬಾ ಎಚ್ಚರದಿಂದ ಇರಬೇಕು. ಮೊಬೈಲ್ ಚಾರ್ಜ್ ಆದ ನಂತರ ಕಡ್ಡಾಯವಾಗಿ ಚಾರ್ಜರ್ ಅನ್ನು ಸ್ವಿಚ್ ಆಫ್ ಮಾಡಬೇಕು. ಕೆಲವೊಮ್ಮೆ ಚಾರ್ಜರ್ ಪಿನ್ ನೆಲಕ್ಕೆ ತಾಗಿ ಬಿದ್ದಾಗಲೂ ವಿದ್ಯುತ್ ಪ್ರವಹಿಸುವ ಸಾಧ್ಯಗೆ ಇರುತ್ತದೆ. ಆದಷ್ಟು ಮೊಬೈಲ್ ಚಾರ್ಜ್ ಆದ ನಂತರ ಚಾರ್ಜರ್ ಅನ್ನು ವಿದ್ಯುತ್ ಪ್ಲಗ್ ನಿಂದ ಬೇರ್ಪಡಿಸಿ ಇಡುವುದು ಕ್ಷೇಮಕರ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ