October 5, 2024

ಗುಂಪಿನಿಂದ ಬೇರ್ಪಟ್ಟಿರುವ ಕಾಡಾನೆ ಮರಿಯೊಂದನ್ನು ಮರಳಿ ಗುಂಪಿಗೆ ಸೇರಲು ಸಾಧ್ಯವಾಗದೇ ಪರದಾಡುತ್ತಿರುವ ಘಟನೆ ನಡೆದಿದೆ.

ಮೂಡಿಗೆರೆ ಬೇಲೂರು ರಸ್ತೆಯಲ್ಲಿ ಇರುವ ಚೀಕನಹಳ್ಳಿ ಗ್ರಾಮದಲ್ಲಿ ಪುಟ್ಟ ಕಾಡಾನೆ ಮರಿ ತನ್ನ ತಾಯಿ ಮತ್ತು ಗುಂಪಿನಿಂದ ಬೇರ್ಪಟ್ಟಿದೆ.

ಕಾಡಾನೆ ಮರಿ ಹೆದ್ದಾರಿ ಪಕ್ಕದ ಕಾಫಿ ತೋಟವೊಂದರಲ್ಲಿ ದಿಕ್ಕು ತೋಚದೇ ಅತ್ತಿಂದಿತ್ತ ಸುತ್ತಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಬೇಲೂರು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಟಾಸ್ಕ್ ಫೋರ್ಸ್‌ ಸಿಬ್ಬಂದಿ ಕಾಡಾನೆ ಮರಿಗೆ ಅಪಾಯವಾಗದಂತೆ ಅದರ ಚಲನ ವಲನಗಳನ್ನು ಗಮನಿಸುತ್ತಾ, ಕುಡಿಯಲು ನೀರು ನೀಡುವ ಪ್ರಯತ್ನ ನಡೆಸಿದರು.

ಇಂದು ಬೆಳಗ್ಗೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯನ್ನು ಮರಳಿ ಗುಂಪಿಗೆ ಸೇರಿಸಲು ಪ್ರಯತ್ನ ನಡೆಸಿದರು. ತಾಯಿ ಆನೆ ಇರುವ ಗುಂಪು ಸ್ಥಳದಿಂದ ದೂರ ಹೋಗಿವೆ ಎನ್ನಲಾಗಿದೆ. ಅಲ್ಲದೇ ಒಮ್ಮೆ ಬೇರ್ಪಟ್ಟ ಮರಿಯನ್ನು ತಾಯಿ ಆನೆ ಮರಳಿ ತನ್ನ ಬಳಿ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತದೆ ಎನ್ನಲಾಗಿದೆ.

ಇದರಿಂದ ಅರಣ್ಯ ಇಲಾಖೆ ಪೇಚಿಗೆ ಸಿಲುಕಿತ್ತು. ಪತ್ರಿಕೆಗೆ ಬಂದಿರುವ ಮಾಹಿತಿಯಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿ ಅನುಮತಿ ಪಡೆದು ಆನೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ತಾಯಿ ಆನೆ ಗುಂಪಿಗೆ ಬಿಡಲು ಕೊಂಡೊಯ್ಯಲಾಗಿದೆ.

ಮೂಡಿಗೆರೆ ಬೇಲೂರು ಸಕಲೇಶಪುರ ಗಡಿಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳ ಗುಂಪೊಂದು ಸಂಚರಿಸುತ್ತಿದ್ದು ಈ ಮರಿಯು ಅದೇ ಗುಂಪಿನಲ್ಲಿ ಇತ್ತು ಎನ್ನಲಾಗಿದೆ.

ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವಾಗ ಗಾಬರಿ ಬಿದ್ದ ಆನೆಗಳು ಮರಿಯನ್ನು ಬಿಟ್ಟು ಮುಂದೆ ಸಾಗಿರಬಹುದು ಎಂದು ಊಹಿಸಲಾಗಿದೆ.

ಈ ಸಂದರ್ಭದಲ್ಲಿ ಬೇಲೂರು ವಲಯ ಅರಣ್ಯ ಅಧಿಕಾರಿ ವಿನಯ್ ಕುಮಾರ್, ವನ್ಯಜೀವಿ ತಜ್ಞ ವಿಕ್ರಂ ಹುರುಡಿ, ಫಾರೆಸ್ಟರ್ ಮಂಜೇಗೌಡ, ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರಸ್ತೆ ಪಕ್ಕದಲ್ಲಿ ಬೆಳಗ್ಗೆಯಿಂದ ಆನೆ ಮರಿ ಬೀಡುಬಿಟ್ಟಿತ್ತು. ಆನೆ ಮರಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಜನರನ್ನು ನಿಯಂತ್ರಣ ಮಾಡಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ