October 5, 2024

ಅರಣ್ಯದಲ್ಲಿ ದಾರಿತಪ್ಪಿ ಕಣ್ಮರೆಯಾಗಿದ್ದ ವ್ಯಕ್ತಿಯೋರ್ವರನ್ನು ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಪತ್ತೆಹಚ್ಚಿದ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಕುಂದೂರು-ಸಾರಗೋಡು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ವ್ಯಕ್ತಿ ಮೂಡಿಗೆರೆ ಪಟ್ಟಣದ ಬಿಳಗುಳ ವಾಸಿ ಚಂದ್ರು. ಶುಕ್ರವಾರ ಕುಂದೂರು ಗ್ರಾಮದ ಹರೀಶ್ ಗೌಡ ಎಂಬುವವರ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದ ಚಂದ್ರು ಕೆಲಸ ಬಿಟ್ಟ ಮೇಲೆ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಗಾಬರಿಗೊಂಡಿದ್ದರು.

ನಾಪತ್ತೆಯಾಗಿದ್ದ ಚಂದ್ರು ಅವರು ಅರಣ್ಯದೊಳಗೆ ದಾರಿತಪ್ಪಿಹೋಗಿರುವ ಶಂಕೆಯ ಮೇಲೆ ಎಸಿಎಫ್ ಬಿ.ಎಲ್. ಸ್ವಾಮಿಯವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆಯ ಉಪವಲಯ ಅರಣ್ಯ ಅಧಿಕಾರಿ ವಿಜಯಕುಮಾರ್ ನೇತೃತ್ವದಲ್ಲಿ ಆನೆ ಟಾಸ್ಕ್ ಪೋರ್ಸ್ ಸಿಬ್ಬಂದಿ ಮತ್ತು ಸ್ಥಳಿಯರು ಸುತ್ತಮುತ್ತಲ ಅರಣ್ಯದಲ್ಲಿ ಹುಡಕಾಟ ನಡೆಸಿದ್ದರು.

ಈ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಕಳೆದ ವರ್ಷ ಈ ಭಾಗದ ಕೆಂಜಿಗೆ ಎಂಬಲ್ಲಿ ಅರಣ್ಯದಲ್ಲಿ ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಹಾಗಾಗಿ ನಾಪತ್ತೆಯಾಗಿದ್ದ ಚಂದ್ರು ಅವರ ಕುಟುಂಬದವರು ತೀವ್ರ ಆತಂಕಗೊಂಡಿದ್ದರು.

ಇಂದು ಮಧ್ಯಾಹ್ನದ ಹೊತ್ತಿಗೆ ಅರಣ್ಯದಲ್ಲಿ ಚಂದ್ರು ಅವರನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ. ರಾತ್ರಿಯಿಡೀ ಕಾಡಿನಲ್ಲೇ ಕಳೆದಿದ್ದ ಚಂದ್ರು ಅವರ ಕೈಕಾಲುಗಳಿಗೆ ಜಿಗಣೆಗಳು ಕಚ್ಚಿದ್ದು, ಮೈಕೈಗೆಲ್ಲಾ ಮುಳ್ಳುಗಳು ತರಚಿವೆ. ತೀವ್ರ ನಿತ್ರಾಣ ಸ್ಥಿತಿಯಲ್ಲಿದ್ದ ಅವರನ್ನು ಕಾಡಿನಿಂದ ಹೊರತಂದು ಕುಟುಂಬದ ಸುಪರ್ದಿಗೆ ವಹಿಸಲಾಗಿದೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ