October 5, 2024

ಕಾಫಿ ಉದ್ದಿಮೆಯಲ್ಲಿ ತನ್ನದೇ ಛಾಪು ಮೂಡಿಸಿರುವ ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ (WCPC) ನ 22ನೇ ವಾರ್ಷಿಕ ಮಹಾಸಭೆಯೂ ಮಂಗಳವಾರ ನೆರವೇರಿತು.

ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಸಮಾನಮನಸ್ಕ ಆಸಕ್ತ ಮಹಿಳೆಯರು ಒಟ್ಟುಗೂಡು ಸ್ಥಾಪಿಸಿದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಮಹಿಳೆಯರಿಗೆ ತನ್ನದೇ ಆದ ಒಂದು ಸಂಘಟನೆ ಬೇಕು ಎಂದು ಪ್ರಾರಂಭಿಸಿದ ಸಂಸ್ಥೆಯು ಈಗ 194 ಸಕ್ರಿಯ ಸದಸ್ಯರನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ.

ಕಾಫಿ ಉದ್ದಿಮೆಯಲ್ಲಿ ಮಹಿಳೆಯರು ಹೇಗೆ ಪೂರಕವಾಗಿ ತೊಡಗಿಸಿಕೊಳ್ಳಬಹುದು ಎಂಬುದನ್ನು (WCPC) ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ನಿರೂಪಿಸಿ ತೋರಿಸಿದೆ. ವಿವಿಧ ರೀತಿಯ ರುಚಿಕರ ಕಾಫಿ ತಯಾರಿಸುವುದು, ಕಾಫಿಯಿಂದ ವೈವಿದ್ಯಮಯ ತಿನಿಸುಗಳನ್ನು ತಯಾರಿಸುವುದು, ಅವುಗಳನ್ನು ವ್ಯವಸ್ಥಿತವಾಗಿ ಮಾರುಕಟ್ಟೆ ಮಾಡಿರುವುದು. ಮಹಿಳೆಯರು ಕಾಫಿ ಉದ್ದಿಮೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು, ಕಾಫಿಗೆ ಸಂಬಂಧಿಸಿದ ಯಾವುದೇ ಸಭೆ ಸಮಾರಂಭ, ವಿಚಾರಸಂಕಿರಣ, ಸಮ್ಮೇಳನಗಳಲ್ಲಿ ತಮ್ಮದೇ ಕೌಂಟರ್ ಸ್ಥಾಪಿಸಿ ಅಲ್ಲಿ ಕಾಫಿಯನ್ನು ಪ್ರಮೋಷನ್ ಮಾಡುವುದು ಹೀಗೆ ವ್ಯವಸ್ಥಿತ ರೀತಿಯಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ. ಸಂಸ್ಥೆಯ ಅನೇಕ ಸದಸ್ಯರು ಸ್ವತಃ ಕಾಫಿ ಎಷ್ಟೇಟ್ ಗಳನ್ನು ಸಹ ನಿರ್ವಹಣೆ ಮಾಡುತ್ತಿದ್ದಾರೆ.

WCPC ಸಂಸ್ಥೆಯ 22ನೇ ವಾರ್ಷಿಕ ಸಭೆಯು ಸಕಲೇಶಪುರದ ಎಚ್. ಡಿ. ಪಿ. ಎ ಸಭಾಂಗಣದಲ್ಲಿ ಶ್ರೀಮತಿ  ಶೈಲಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯು ಶ್ರೀಮತಿ ದಿವ್ಯ ಸಂಜಯ್ ರವರ ಪಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಶೃತಿ ರಂಜನ್ ಸ್ವಾಗತ ಕೋರಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ವಿಶ್ವೇಶ್ವರ್ ಸಭೆಗೆ ಸೂಚನಾ ಪತ್ರವನ್ನು ಓದಿ   ದಾಖಲಿಸಿದರು ಮತ್ತು 2021 – 2023 ನೇ ಸಾಲಿನ ಕಾರ್ಯದರ್ಶಿ ವರದಿಯನ್ನು ಸಭೆಗೆ ತಿಳಿಸಿ ಸಭೆಯ ಅನುಮೋದನೆ ಪಡೆದರು. ಖಜಾಂಚಿ ಶ್ರೀಮತಿ ನಂದಿತಾ ಧರ್ಮರಾಜ್ 2021 – 23 ನೇ ಸಾಲಿನ ಆಡಿಟ್ ವರದಿಯನ್ನು  ಸಭೆಗೆ ಮಂಡಿಸಿ ಸಭೆಯ ಅನುಮೋದನೆ ಪಡೆದರು. ಸಂಸ್ಥೆಯ ಪಿ. ಅರ್. ಓ ಶ್ರೀಮತಿ ಕೃತಿ ಪ್ರಜ್ವಲ್  ಅಚ್ಚುಕಟ್ಟಾಗಿ ಸಭೆಯ ನಿರೂಪಣೆ ಮಾಡಿದ್ದರು.

ಉಪಾಧ್ಯಕ್ಷರಾದ ಶ್ರೀಮತಿ ಸಾಗರಿಕಾ ಲಕ್ಷ್ಮಣ್ ರವರು ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ್ದು, ಆ ಸ್ಥಾನಕ್ಕೆ  ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಜಯಶ್ರೀ ವಿಶ್ವೇಶ್ವರ್ ರವರನ್ನು ಉಪಾಧ್ಯಕ್ಷರನ್ನಾಗಿ ಮಾಡುವಂತೆ ಸಂಸ್ಥೆಯು   ಅನುಮೋದಿಸಿದ್ದು ಅಂತೆಯೇ ಅವರನ್ನು ಉಪಾದ್ಯಕ್ಷ ಸ್ಥಾನಕ್ಕೆ ನೇಮಿಸಲಾಯಿತ್ತು.

ತೆರವಾದ ಸಂಘಟನಾ ಕಾರ್ಯದರ್ಶಿಯ ಹುದ್ದೆಗೆ ಸಂಸ್ಥೆಯ ಖಜಾಂಚಿ ಶ್ರೀಮತಿ ನಂದಿತಾ ಧರ್ಮರಾಜ್ ರವರನ್ನು ನೇಮಿಸಿ ಸಭೆಯ ಅನುಮೋದನೆ ಪಡೆಯಲಾಯಿತು.

 

WCPC ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸಾಗರಿಕಾ ಲಕ್ಷ್ಮಣ್ ರವರು ಆಯ್ಕೆಯಾಗಿರುತ್ತಾರೆ. ಖಜಾಂಚಿಯಾಗಿ ಶ್ರೀಮತಿ ಕೃತಿ ಪ್ರಜ್ವಲ್ ಆಯ್ಕೆಯಾಗಿರುತ್ತಾರೆ. ಸಾರ್ವಜನಿಕ ಸಂಪರ್ಕ ಪ್ರತಿನಿಧಿಯಾಗಿ ಶ್ರೀಮತಿ ಶೃತಿ ರಂಜನ್ ರವರು ಆಯ್ಕೆಯಾಗಿರುತ್ತಾರೆ.

ಸಹ ಕಾರ್ಯದರ್ಶಿಯಾಗಿ ಶ್ರೀಮತಿ ನಂದ ರಾಜಶೇಖರ್, ಖಜಾಂಚಿಯಾಗಿ ಶ್ರೀಮತಿ ಕೃತಿ ಪ್ರಜ್ವಲ್ ಹಾಗೂ ಸಹ ಖಜಾoಚಿಯಾಗಿ ಶ್ರೀಮತಿ ಸುಪ್ರಿಯಾ ರತನ್ ರವರು ಆಯ್ಕೆಯಾಗಿರುತ್ತಾರೆ.

ಕಾರ್ಯಕಾರಿ ಸಮಿತಿ ಸದ್ಯಸ್ಯೆಯರಾಗಿ ಶ್ರೀಮತಿ ದಿವ್ಯ ಉದಯ್, ಶ್ರೀಮತಿ ಹೇಮಾ ಗುರಪ್ಪ, ಶ್ರೀಮತಿ ದಿವ್ಯ ಉದಯ್ ಮತ್ತು ಶ್ರೀಮತಿ ಕಾವ್ಯ ಸೂರಜ್ ರವರು ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ  ಶೈಲಾ ಪ್ರಕಾಶ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅಧ್ಯಕ್ಷ ಅವಧಿಯಲ್ಲಿ ನೆಡೆಸಿದ  ಕಾರ್ಯಚಟುವಟಿಕೆಗಳ ಬಗ್ಗೆ ಹೇಳಿದರು.  ನೂತನ ಅದಕ್ಷೆ ಯಾದ ಶ್ರೀಮತಿ ಸಾಗರಿಕ ಲಕ್ಷ್ಮಣ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ದರು.ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಸಭೆಯು ಶ್ರೀಮತಿ ಜಯಶ್ರೀ ವಿಶ್ವೇಶರ್ ರವರ ವಂದನಾರ್ಪಣೆ ,ನಂತರ ರಾಷ್ಟ್ರಗೀತೆ ಯೊಂದಿಗೆ ಮುಕ್ತಾಯಗೊಳ್ಳಿಸಲಾಯಿತು.

ಸಭೆಯಲ್ಲಿ ಸಂಸ್ಥೆಯ ಗೌರವಾನ್ವಿತ ಮಾಜಿ ಅಧ್ಯೆಕ್ಷೆಯರು ಹಾಗೂ ಬಹುತೇಕ ಹಿರಿಯ ಹಾಗೂ ಕಿರಿಯ ಸದಸ್ಯೆಯರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ