October 5, 2024

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಕಾಫಿ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಬೆಳೆಗಾರರರೊಂದಿಗೆ ಎಸ್ಪಿ ಉಮಾಪ್ರಶಾಂತ್ ರವರು ಸಭೆ ನೆಡೆಸಿದರು.

ಬಾಂಗ್ಲಾ ವಲಸಿಗರು ಮತ್ತು ಅಸ್ಸಾಂ ಕೂಲಿ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಅಲ್ಲಿ ಕೊಲೆ, ಸುಲಿಗೆ ದರೋಡೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿ ಇಲ್ಲಿನ ಕಾಫೀತೋಟಗಳಲ್ಲಿ ತಲೆಮಾರೆಸಿಕೊಂಡು ಇರುವುದು ಬೆಳಕಿಗೆ ಬಂದಿದೆ. ಹಾಗೂ ಕಾಫೀತೋಟದ ಮಾಲೀಕರ ಮನೆಗಳಲ್ಲಿ ದರೋಡೆ ಮಾಡಿ ಅಸ್ಸಾಂಗೆ ತೆರಳಿ ಅಲ್ಲಿ ತಲೆಮರೆಸಿಕೊಂಡಿರುವ ಘಟನೆಗಳು ನಡೆಯುತ್ತಿವೆ.

ಹಾಗೆಯೇ ಬೆಳೆಗಾರರಿಂದ ಮುಂಗಡ ಹಣ ಪಡೆದು ಹಣಕ್ಕೆ ಮೋಸ ಮಾಡುವ ದೊಡ್ಡ ಜಾಲ ಮಲೆನಾಡಿನಲ್ಲಿ ಬೀಡುಬಿಟ್ಟಿದೆ. ಆದ್ದರಿಂದ ಎಲ್ಲಾ ಬೆಳೆಗಾರರು ತಮ್ಮ, ತಮ್ಮ ತೋಟಗಳಿಗೆ ಬರುವ ಎಲ್ಲಾ ಮಾದರಿಯ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್, ಫೋಟೋ, ವಿಳಾಸ ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದರ ಜೊತೆಗೆ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿರುವ ಆಪ್ ಮುಖಾಂತರ ಕಡ್ಡಾಯವಾಗಿ ಕಾರ್ಮಿಕರ ನೋಂದಣಿ ಮಾಡಿಸಬೇಕೆಂದು ಮನವಿ ಮಾಡಿದರು.

ಕಾರ್ಮಿಕರ ಆಧಾರ್ ಕಾರ್ಡ್ ಅಸಲಿಯತ್ತನ್ನು ಪರೀಕ್ಷಿಸಲು myaadhar. uidai. gov. in/chee k-aadhar -validity ಇದನ್ನು ಬಳಸಬೇಕೆಂದು ಸಲಹೆ ನೀಡಿದರು. ಇದನ್ನು ಹೋಬಳಿ ಮಟ್ಟದಲ್ಲಿ ಕಾರ್ಯಗತಗೊಳಿಸಲು ಬೆಳೆಗಾರ ಸಂಘಟನೆಗಳು ಸಭೆ ನೆಡೆಸಬೇಕೆಂದು ಪದಾಧಿಕಾರಿಗಳಿಗೆ ಸಲಹೆ ನೀಡಿದರು. ಆ ಸಭೆಯಲ್ಲಿ ತಾವು ಬಾಗವಹಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ವಿವಿಧ ಬೆಳೆಗಾರರ ಸಂಘದ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ