October 5, 2024

ಇತ್ತೀಚಿಗೆ ಬಾರಿ ಮಳೆಯಿಂದಾಗಿ ಮೂಡಿಗೆರೆ ಕ್ಷೇತ್ರದ ಕಸಬಾ ಹೋಬಳಿಯ ದಾರದಹಳ್ಳಿ ಗ್ರಾಮದ ಶ್ರೀಮತಿ ದೇವಮ್ಮ ಇವರು ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿರುತ್ತಾರೆ.

ಇಂದು ಮೂಡಿಗೆರೆ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮರವರು ಭೇಟಿ ಮಾಡಿ, ಅವರ ಮನೆಯವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಇದೆ ಸಂದರ್ಭದಲ್ಲಿ ಶಾಸಕರ ಪ್ರಯತ್ನದ ಮೇರೆಗೆ ಸರ್ಕಾರದಿಂದ ಮೃತರ ಕುಟುಂಬಕ್ಕೆ ಮಂಜೂರಾದ ಐದು ಲಕ್ಷ ರೂ. ಗಳ ಚೆಕ್ ನ ಆದೇಶ ಪ್ರತಿಯನ್ನು  ವಿತರಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಾದ  ರಾಜೇಶ್, ಮೂಡಿಗೆರೆ ತಹಸೀಲ್ದಾರ್  ತಿಪ್ಪೇಸ್ವಾಮಿ, ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು  ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮೃತ ದೇವಮ್ಮ ಅವರ ಕಟುಂಬದವರು ಉಪಸ್ಥಿತರಿದ್ದರು.

ಈಗ್ಗೆ ಮೂರು ದಿನಗಳ ಹಿಂದೆ ದಾರದಹಳ್ಳಿ ಗ್ರಾಮದ ದೇವಮ್ಮ ಅವರು ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಆಕಸ್ಮಿಕವಾಗಿ ಹೇಮಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆ ಎಂದು ದೂರು ದಾಖಲಾಗಿತ್ತು. ಇದೀಗ ಮೃತರ ಕುಟುಂಬಕ್ಕೆ ಸ್ಪಂದಿಸಿರುವ ಶಾಸಕಿ ನಯನ ಮೋಟಮ್ಮ ಅವರು ಅವರ ಕುಟುಂಬಕ್ಕೆ ಶೀರ್ಘವಾಗಿ ಪರಿಹಾರ ಮಂಜೂರು ಆಗುವಂತೆ ನೋಡಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ