October 5, 2024

ಸಾಂದರ್ಭಿಕ ಚಿತ್ರ

ಮೂಡಿಗೆರೆ ಚಿಕ್ಕಮಗಳೂರು ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಬೃಹತ್ ಗಾತ್ರದ ಕಾಡುಕೋಣವೊಂದು ಪ್ರತ್ಯಕ್ಷವಾಗಿ ಪ್ರಯಾಣಿಕರನ್ನು ಗಲಿಬಿಲಿಗೊಳಿಸಿತು.

ಮೂಡಿಗೆರೆ ಹಾಗೂ ಚಿಕ್ಕಮಗಳೂರು ಮಾರ್ಗವಾದ ಕುದುರೆಗುಂಡಿ ಎಸ್ಟೇಟ್ ಬಳಿ ಶನಿವಾರ ಬೆಳಿಗ್ಗೆ ಕಾಡುಕೋಣವೊಂದು ರಸ್ತೆಬದಿಯಲ್ಲಿ  ಮೇಯುತ್ತಾ ನಿಂತಿತ್ತು. ಸುಮಾರು ಹೊತ್ತು ಅದು ಅಲ್ಲಿಯೇ ಅತ್ತಿಂದಿತ್ತ ತಿರುಗುತ್ತ ಇದ್ದುದ್ದರಿಂದ ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕಿದರು. ಕೆಲ ಹೊತ್ತಿನ ನಂತರ ಅದು ತೋಟದೊಳಗೆ ನುಸುಳಿ ಕಣ್ಮರೆಯಾಯಿತು.

ಕುದುರೆಗುಂಡಿ, ಕೊಲ್ಲಿಬೈಲ್ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಾಡುಕೋಣಗಳು ಹಿಂಡುಹಿಂಡಾಗಿ ಇದ್ದು ಕೆಲವೊಮ್ಮೆ ರಸ್ತೆಗೆ ಬಂದುಬಿಡುತ್ತವೆ. ಇತ್ತೀಚೆಗೆ ಅನೇಕ ಕಡೆ ಕಾಡುಕೋಣಗಳು ಜನರ ಮೇಲೆ ಎರಗಿ ಬಂದಿರುವ ಉದಾಹರಣೆ ಇದ್ದು, ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಎಚ್ಚರದಿಂದ ಇರಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ