October 5, 2024

ಮುಂಬರುವ ಲೋಕಸಭೆ ಮತ್ತು ಜಿ.ಪಂ.ತಾ.ಪಂ. ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ಉತ್ತಮ ಸಾಧನೆ ತೋರಲಿದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಆ ಸರ್ಕಾರವನ್ನುಕಿತ್ತೊಗೆಯಲು ತೀರ್ಮಾನಿಸಿದ್ದ ಮತದಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದು ಜನರ ತೀರ್ಮಾನಕ್ಕೆ ಇತರೆ ಪಕ್ಷಗಳು ತಲೆಬಾಗಬೇಕಾಯಿತು. ಮುಂಬರುವ ಎಲ್ಲ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ನೀಡಲು ಬಿಎಸ್ಪಿ ಪಕ್ಷ ಈಗಾಗಲೇ ಸಿದ್ದತೆ ನಡೆಸಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ತಿಳಿಸಿದರು.

ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ನಡೆದ ಬಿಎಸ್ಪಿ ಕ್ಷೇತ್ರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ವಿಧಾನಸಭೆಯಲ್ಲಿ ಬಿಎಸ್ಪಿಯ ಶಾಸಕರಿಲ್ಲದಿದ್ದರೂ ಹಿಂದಿನ ಸರ್ಕಾರದ ಜನವಿರೋದಿ ಆಡಳಿತವನ್ನು ಮತ್ತು ಆಡಳಿತ ವೈಫಲ್ಯವನ್ನೂ ವಿರೋದಿಸಿ ರಾಜ್ಯದ ಜನತೆಯ ದ್ವನಿಯಾಗಿ ಪಕ್ಷ ಕರ್ತವ್ಯ ನಿರ್ವಹಿಸಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಮುಂದಿನ ಚುನಾವಣೆ ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು ಭೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿಗೆ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. ಸೋಲುಗೆಲುವು ಸರ್ವೇಸಮಾನ್ಯ. ಕಾರ್ಯಕರ್ತರು ಜನರೊಂದಿಗೆ ಬೆರೆತು ಕಷ್ಟಗಳಲ್ಲಿ ಭಾಗಿಯಾದಲ್ಲಿ ಅವರು ನಮ್ಮೊಂದಿಗೆ ಯಾವ ತ್ಯಾಗಕ್ಕೂ ಸಿದ್ದರಾಗುತ್ತಾರೆ. ಜನರಿಗಾಗಿ ಬೀದಿಗಿಳಿದು ಹೋರಾಟಮಾಡಿ ನ್ಯಾಯದೊರಕಿಸಲು ಕಾರ್ಯಕರ್ತರು ಹಿಂಜರಿಯಬಾರದು. ಹೋರಾಟವೇ ಪಕ್ಷದ ಆಶಯ ಹೊರತು ಅಧಿಕಾರ ಪಡೆಯುವುದಲ್ಲ. ಹಾಗಾಗಿ ಸರ್ಕಾರದ ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸಿ ಅದರ ವಿರುದ್ದ ಹೋರಾಟ ನಡೆಸಲು ಕಾರ್ಯಕರ್ತರು ಸದಾ ಸಿದ್ದವಾಗಿರಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಕ್ಷೇತ್ರ ಸಮಿತಿ ಅಧ್ಯಕ್ಷರನ್ನಾಗಿ ಲೋಕವಳ್ಳಿ ರಮೇಶ್ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಬ್ಬೀರ್ ಹುಸೇನ್, ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಉದುಸೆ ಮಹೇಶ್, ಉಸ್ತುವಾರಿಯಾಗಿ ವಸಂತಕುಮಾರ್, ಸಂಯೋಜಕರಾಗಿ ಬಿ.ರಾಮು, ಖಜಾಂಚಿಯಾಗಿ ಸಯ್ಯದ್ ಹುಸೇನ್, ಕಛೇರಿ ಕಾರ್ಯದರ್ಶಿಯಾಗಿ ಹಮೀದ್‍ಬಿಳಗುಳ, ಆಲ್ದೂರು ಬ್ಲಾಕ್‍ಅಧ್ಯಕ್ಷರಾಗಿ ಬಿ.ಡಿ.ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ.

ಈ ವೇಳೆ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಅಲಿ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್, ಮುಖಂಡರಾದ ಲೋಕವಳ್ಳಿ ರಮೇಶ್, ಯು.ಬಿ.ಮಂಜಯ್ಯ, ಬಿ.ಎಂ.ಶಂಕರ್, ಬಕ್ಕಿ ಮಂಜುನಾಥ್, ಹಮೀದ್, ಎಂ.ಡಿ.ಶಂಕರ್,ರಾಮು, ಮಹೇಶ್, ಕೆ.ಬಿ.ಸುಧಾ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ