October 5, 2024

ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಇಂದು ಸಂಜೆ  ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದಾರೆ.

ಬಿ.ಸಿ.ಎಂ. (ಬಿ) ಕೆಟಗರಿಗೆ ಮೀಸಲಾಗಿದ್ದ ನಗರ ಸಭೆಯ 30 ತಿಂಗಳ ಅಧ್ಯಕ್ಷ ಅವಧಿಯಲ್ಲಿ ಮೊದಲ 15 ತಿಂಗಳು ವರಸಿದ್ಧಿ ಅಧ್ಯಕ್ಷರಾಗಿ ಉಳಿದ 15 ತಿಂಗಳಿಗೆ ಮಧುಕುಮಾರ್ ಅರಸ್ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂದು ಮಾತುಕತೆ ಆಗಿತ್ತು ಎನ್ನಲಾಗಿದೆ. ಈ ನಡುವೆ ಚುನಾವಣೆ ಬಂದು ಬಿ.ಜೆ.ಪಿ. ಸೋಲನುಭವಿಸಿದ್ದರಿಂದ ವರಸಿದ್ಧಿ ರಾಜೀನಾಮೆ ನೀಡುವುದು ತಡವಾಗಿತ್ತು. ರಾಜೀನಾಮೆ ನೀಡಬೇಕೆಂದು ಆಡಳಿತ ಪಕ್ಷದವರೇ ಕಳೆದ ಮೂರು ತಿಂಗಳಿನಿಂದ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಅಸಮಧಾನಗೊಂಡಿದ್ದ ಸದಸ್ಯರು ಒಟ್ಟಾಗಿ ಧರ್ಮಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.

ಮಧುಕುಮಾರ್ ಅರಸ್

ಕೆಲ ದಿನಗಳ ಹಿಂದೆ ನಗರಸಭೆಗೆ ಆಯ್ಕೆಯಾಗಿರುವ ಬಿಜೆಪಿಯ  17 ಜನ  ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡಿ  ಮಧುಕುಮಾರ್ ರಾಜ ಅರಸ್  ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ತಾವೆಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸುತ್ತೇವೆಂದು ದೇವರ ಮುಂದೆ ಪ್ರಮಾಣ ಮಾಡಿ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದ ಮುಂದೆ ನಿಂತು ಛಾಯಾಚಿತ್ರ ತೆಗೆಸಿಕೊಂಡು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ  ಎಂಬ ಸಂದೇಶವನ್ನು ಬಿ.ಜೆ.ಪಿ. ಹೈಕಮಾಂಡ್ ಗೆ ನೀಡಿದ್ದರು.

ಈ ನಡುವೆ  ಕ್ಷೇತ್ರದಲ್ಲಿ ಕಾಂಗ್ರೇಸ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕೆಲ ಬಿ.ಜೆ.ಪಿ. ಸದಸ್ಯರನ್ನು ಸೇರಿಸಿಕೊಂಡು ಕಾಂಗ್ರೇಸ್ – ಜೆಡಿಎಸ್ ಮೈತ್ರಿಯಾಗಿ ನಗರಸಭೆ ಅಧಿಕಾರ ಹಿಡಿಯಲು ಕಸರತ್ತು ನಡೆಸಲಾಗುತ್ತಿದೆ ಎಂದು ತಿಳಿದುಬಂದಿತ್ತು.

ಅಧ್ಯಕ್ಷರು ರಾಜೀನಾಮೆ ನೀಡುವುದು ತಡವಾದರೆ ಅಸಮಧಾನಗೊಂಡಿರುವ ಸದಸ್ಯರನ್ನು ಕಾಂಗ್ರೇಸ್ ತನ್ನತ್ತ ಸೆಳೆದು ಅಧಿಕಾರ ಹಿಡಿಯಲು ಪ್ರಯತ್ನಿಸಬಹುದು ಎಂದು ಬಿ.ಜೆ.ಪಿ. ಮುಖಂಡರು ವರಸಿದ್ಧಿಯವರ ಮೇಲೆ ಒತ್ತಡ ಹೇರಿ ರಾಜೀನಾಮೆ ಕೊಡಿಸಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷರು ತಮ್ಮ   ರಾಜೀನಾಮೆ ಪತ್ರವನ್ನು ಪ್ರಧಾನ ಕಾರ್ಯದರ್ಶಿ  ದೇವರಾಜ್ ಶೆಟ್ಟಿ  ಮುಖಾಂತರ ಜಿಲ್ಲಾಧಿಕಾರಿಗಳಿಗೆ ಇಂದು ನೀಡಿದ್ದಾರೆ.

ಒಟ್ಟಾರೆ    30 ತಿಂಗಳ ಅವಧಿಯಲ್ಲಿ 18 ತಿಂಗಳು ಮುಗಿದಿದ್ದು  12 ತಿಂಗಳ ಅವಧಿ ಉಳಿದಿದೆ.   ಬಿ.ಜೆ.ಪಿ. ಒಗ್ಗಟ್ಟಿನಿಂದ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದಾ ? ಅಥವಾ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ಪಡೆಯಲು ನಡೆಸುತ್ತಿರುವ ಕಸರತ್ತಿನಲ್ಲಿ ಯಶಸ್ವಿಯಾಗುತ್ತಾ ? ಕಾದು ನೋಡಬೇಕು.

ಒಂದು ಮೂಲದ ಪ್ರಕಾರ ಇದೀಗ ಸ್ವಪಕ್ಷದ ಸದಸ್ಯರೇ ತಿರುಗಿ ಬಿದ್ದಿದ್ದರಿಂದ ವರಸಿದ್ಧಿ ವೇಣುಗೋಪಾಲ್ ಅಸಮಧಾನದಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಶಾಸಕ ಸಿ.ಟಿ.ರವಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವರಸಿದ್ಧಿ ವೇಣುಗೋಪಾಲ್ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡರಾಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ