October 5, 2024

ರೋಗಿಗಳಿಗೆ ಮರು ಜನ್ಮ ನೀಡುವ ವೃತ್ತಿವೊಂದಿದ್ದರೆ ಅದು ವೈದ್ಯಕೀಯ ವೃತ್ತಿಯಿಂದ ಮಾತ್ರ ಸಾಧ್ಯ. ಹಾಗಾಗಿ ವೈದ್ಯರು ದೇವರ ಸಮಾನ ಎಂದರೆ ತಪ್ಪಾಗಲಾರದು ಎಂದು ಸಾಹಿತಿ ಹಳೆಕೋಟೆ ರಮೇಶ್ ಹೇಳಿದರು.

ಅವರು ಶನಿವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಹೆಚ್ಚಾಗಿ ಬಡ ವರ್ಗದ ಜನರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸರಕಾರಿ ಆಸ್ಪತ್ರೆಯೇ ಅವರಿಗೆ ಜೀವದಾನ ನೀಡುವ ದೇಗುಲವಾಗಿದೆ. ಹಾಗಾಗಿ ಬಡಜನರ ಅರೋಗ್ಯಕ್ಕಾಗಿ ಸರಕಾರಿ ವೈದ್ಯರಿಂದ ಉತ್ತಮ ಸೇವೆ ದೊರಕುವಂತಾಗಬೇಕು. ಅಲ್ಲದೇ ಉತ್ತಮ ಸೇವೆ ಸಲ್ಲಿಸುವ ವೈದ್ಯರನ್ನು ಗುರುತಿಸು ಕಾರ್ಯ ಕೂಡ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯ ವೈದ್ಯರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷೆ ಸವಿತಾ ರವಿ ವಹಿಸಿದ್ದರು.

ಹಿರಿಯ ವೈದ್ಯರಾದ ಡಾ.ರಾಮಚಂದ್ರ ಅಡ್ಯಂತಾಯ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸುಂದರೇಶ್, ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಾಂಭವಿ, ಜೇಸಿ ಕಾರ್ಯದರ್ಶಿ ಕೆ.ಕೆ.ಪ್ರದೀಪ್, ಕವಿತಾ ಸಂತೋಷ್, ರೇಖಾ ನಾಗರಾಜ್   ಸೇರಿದಂತೆ  ಜೆಸಿ, ಲೇಡಿ ಜೇಸಿ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/IkFCXal7O5ODMBHsmKv9ak

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ