October 5, 2024

ಸುಮಾರು 140 ಕೇಜಿ ಗೋಮಾಂಸವನ್ನು ಅಕ್ರಮವಾಗಿ ಆಟೋವೊಂದರಲ್ಲಿ ಇಬ್ಬರು ಯುವಕರು ಬುಧವಾರ ಸಂಜೆ ಹಾಸನದಿಂದ ಮೂಡಿಗೆರೆಗೆ ತರುತ್ತಿದ್ದಾಗ ಮೂಡಿಗೆರೆ ಪಟ್ಟಣದ ಸಮೀಪ ಬೀಜವಳ್ಳಿಯಲ್ಲಿ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಮೂಡಿಗೆರೆಯಲ್ಲಿ ಗೋಮಾಂಸ ಮಾರಾಟ ಮಾಡುವ ಸಲುವಾಗಿ ಇಬ್ಬರು ಯುವಕರು ಹಾಸನದಿಂದ ಬೇಲೂರು, ಗೆಂಡೇಹಳ್ಳಿ ಮಾರ್ಗವಾಗಿ ಆಟೋದಲ್ಲಿ 140 ಕೇಜಿ ಗೋಮಾಂಸವನ್ನು ತರುತ್ತಿದ್ದರು. ಆಟೋದಲ್ಲಿ ದಾರಿಯುದ್ದಕ್ಕೂ ರಕ್ತ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಅದನ್ನು ಗಮನಿಸಿದ ಸಾರ್ವಜನಿಕರು ಮೂಡಿಗೆರೆ ಬಜರಂಗದಳದ ಕಾರ್ಯಕರ್ತರು ಹಾಗೂ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಬೀಜವಳ್ಳಿ ಸಮೀಪ ಆಟೋವನ್ನು ಅಡ್ಡ ಹಾಕಿ ಪರಿಶೀಲಿಸಿದಾಗ ಗೋಮಾಂಸ ಸಾಗಿಸುತ್ತಿರುವುದು ಕಂಡು ಬಂದಿದೆ.

ಬಳಿಕ ಪೊಲೀಸರು ಆಟೋವನ್ನು ವಶಕ್ಕೆ ಪಡೆದು ಆರೋಪಗಳಾದ ಜಾಫರ್ ಸಾಧಿಕ್ (26), ಮಹಮ್ಮದ್ ಫರ್‍ಮಾನ್ ಸಾಧಿಕ್ (25) ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ