October 5, 2024

ಭಾರತದಲ್ಲಿ ನಡೆಯಲಿರುವ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿದೆ.

ಈ ಟೂರ್ನಿಯು ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ದೇಶದ 10 ನಗರಗಳಲ್ಲಿ ನಡೆಯಲಿದ್ದು, ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಆಯೋಜನೆಗೊಳ್ಳಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ಸ್ ಅಪ್ ನ್ಯೂಜಿಲೆಂಡ್ ಕಣಕ್ಕಿಳಿಯಲಿವೆ.

ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ ಅಕ್ಟೋಬರ್ 8ರಂದು ತನ್ನ ಮೊದಲ ಪಂದ್ಯ ಆಡಲಿದೆ. ಈ ಹಣಾಹಣಿಯು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ನಡೆಯಲಿದೆ. ಈ ಹೈ-ವೋಲ್ಟೇಜ್‌ ಹಣಾಹಣಿ ಅಕ್ಟೋಬರ್ 8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಜರುಗಲಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್‌ 15ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ.

 

10 ತಂಡಗಳು ಭಾಗಿ

ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಮೊದಲ ಎಂಟು ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಜಿಂಬಾಬ್ಬೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಉಳಿದೆರಡು ತಂಡಗಳು ಯಾವುವು ಎಂಬುದು ಗೊತ್ತಾಗಲಿದೆ.

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನೇರವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ಬೆ ಹಾಗೂ ಇತರ ತಂಡಗಳು ಪೈಪೋಟಿ ನಡೆಸುತ್ತಿವೆ.

ಪ್ರತಿ ತಂಡ ತಲಾ 9 ಪಂದ್ಯಗಳನ್ನು ಆಡಲಿದೆ. ಅಗ್ರ 4 ಸ್ಥಾನಗಳಲ್ಲಿ ಉಳಿಯುವ ತಂಡಗಳು ಸೆಮಿಫೈನಲ್ ಟಿಕೆಟ್ ಗಿಟ್ಟಿಸಲಿವೆ.

2023 ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಲಿರುವ ಪಂದ್ಯಗಳ ವೇಳಾಪಟ್ಟಿ

ಟೂರ್ನಿಯ 5ನೇ ಪಂದ್ಯ

ಭಾರತ vs ಆಸ್ಟ್ರೇಲಿಯಾ
ಅಕ್ಟೋಬರ್ 8, 2023 (ಭಾನುವಾರ)

ಟೂರ್ನಿಯ 8ನೇ ಪಂದ್ಯ

ಭಾರತ vs ಅಫಘಾನಿಸ್ತಾನ
ಅಕ್ಟೋಬರ್ 11, 2023 (ಬುಧವಾರ)

ಟೂರ್ನಿಯ 13ನೇ ಪಂದ್ಯ

ಭಾರತ vs ಪಾಕಿಸ್ತಾನ
ಅಕ್ಟೋಬರ್ 15, 2023 (ಭಾನುವಾರ)

ಟೂರ್ನಿಯ 17ನೇ ಪಂದ್ಯ

ಭಾರತ vs ಬಾಂಗ್ಲಾದೇಶ
ಅಕ್ಟೋಬರ್ 19, 2023 (ಗುರುವಾರ)

ಟೂರ್ನಿಯ 21ನೇ ಪಂದ್ಯ

ಭಾರತ vs ನ್ಯೂಜಿಲೆಂಡ್‌
ಅಕ್ಟೋಬರ್ 22, 2023 (ಭಾನುವಾರ)

ಟೂರ್ನಿಯ 29ನೇ ಪಂದ್ಯ

ಭಾರತ vs ಇಂಗ್ಲೆಂಡ್‌
ಅಕ್ಟೋಬರ್ 29, 2023 (ಭಾನುವಾರ)

ಟೂರ್ನಿಯ 33ನೇ ಪಂದ್ಯ

ಭಾರತ vs ಕ್ವಾಲಿಫೈಯರ್‌ 2
ನವೆಂಬರ್ 2, 2023 (ಗುರುವಾರ)

ಟೂರ್ನಿಯ 37ನೇ ಪಂದ್ಯ

ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 5, 2023 (ಭಾನುವಾರ)

ಟೂರ್ನಿಯ 43ನೇ ಪಂದ್ಯ

ಭಾರತ vs ಕ್ವಾಲಿಫೈಯರ್‌ 1
ನವೆಂಬರ್ 11, 2023 (ಶನಿವಾರ)

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ