October 5, 2024

ರಷ್ಯಾ ಅಧ್ಯಕ್ಷ ಪುಟಿನ್ ಅವರ ಅತ್ಯಾಪ್ತ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಸೇನೆ ಇದೀಗ ಪುಟೀನ್ ವಿರುದ್ಧವೇ ತಿರುಗಿಬಿದ್ದಿದ್ದಾನೆ.

ಪ್ರಿಗೋಜಿನ್ ನೇತೃತ್ವದಲ್ಲಿ ವ್ಯಾಗ್ನರ್ ಎಂಬ ಖಾಸಗಿ ಸೇನೆ 2014ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಸೇನೆ ರಷ್ಯಾ ಸೇನೆಗೆ ಸಹಾಯಕವಾಗಿ ಕೆಲಸ ಮಾಡುತ್ತಿತ್ತು.

ಉಕ್ರೇನ್ ಯುದ್ಧದಲ್ಲಿಯೂ ಈ ವ್ಯಾಗ್ನರ್ ಪಡೆ ರಷ್ಯಾ ಪರ ಹೋರಾಟ ಮಾಡುತ್ತಿತ್ತು. ಸುಮಾರು 50 ಸಾವಿರ ಸೈನಿಕರನ್ನು ಒಳಗೊಂಡಿರುವ ವ್ಯಾಗ್ನರ್ ಸೇನೆ ಕ್ರೌರ್ಯತೆಗೆ ಕುಖ್ಯಾತಿ ಪಡೆದಿದೆ.

ಉಕ್ರೇನ್ ಯುದ್ಧದಲ್ಲಿ ವ್ಯಾಗ್ನರ್ ಪಡೆಯ ಸಾವಿರಾರು ಸೈನಿಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ರಷ್ಯಾ ಅಧ್ಯಕ್ಷ ಮತ್ತು ಅಲ್ಲಿನ ರಕ್ಷಣಾ ಸಚಿವರ ಕೆಟ್ಟ ನಿರ್ಧಾರಗಳೇ ಕಾರಣ ಎಂದು ವ್ಯಾಗ್ನರ್ ಪಡೆಯ ಪ್ರಿಗೋಜಿನ್ ಇದೀಗ ಪುಟಿನ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಇದರಿಂದ ರಷ್ಯಾದಲ್ಲಿ ಅಂತರ್ಯುದ್ಧ ಭುಗಿಲೇಳುವ ಸಾಧ್ಯತೆಗಳು ಕಂಡು ಬರುತ್ತಿವೆ. ಈಗಾಗಲೇ ವ್ಯಾಗ್ನರ್ ಪಡೆ ರಷ್ಯಾದ ಅನೇಕ ನಗರಗಳಲ್ಲಿ ತನ್ನ ಸೇನೆಯನ್ನು ನುಗ್ಗಿಸಿದೆ. ರಷ್ಯಾ ಪಡೆಯ ಹೆಲಿಕಾಪ್ಟರ್ ಮತ್ತು ಯುದ್ಧ ನೌಕೆಗಳ ಮೇಲೆ ವ್ಯಾಗ್ನರ್ ಪಡೆ ದಾಳಿ ಮಾಡುತ್ತಿದೆ, ಕೆಲವು ಕಡೆ ರಷ್ಯಾ ಸೇನೆಯ ಸೈನಿಕರು ವ್ಯಾಗ್ನರ್ ಸೇನೆಗೆ ಶರಣಾಗುತ್ತಿದ್ದಾರೆ ಎಂಬ ವರದಿಗಳು ಬಿತ್ತರವಾಗುತ್ತಿದೆ.

ಉಕ್ರೇನ್ ಮೇಲೆ ಯುದ್ಧ ಸಾರಿ ಐನೂರು ದಿನಗಳು ಕಳೆದರೂ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣದೇ ಸಾಗುತ್ತಿದೆ. ಉಕ್ರೇನ್ ಗೆ ಈಗಾಗಲೇ ವಿಶ್ವದ ಅನೇಕ ಬಲಿಷ್ಠ ರಾಷ್ಟ್ರಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಸುಲಭವಾಗಿ ಶರಣಾಗುತ್ತದೆ ಎಂದು ಅಂದಾಜಿಸಿದ್ದ ಉಕ್ರೇನ್ ರಷ್ಯಾಕ್ಕೆ ಪ್ರಬಲ ಪ್ರತಿದಾಳಿ ಸಂಘಟಿಸುತ್ತಿದೆ.

ಇದರಿಂದ ಈಗಾಲೇ ವಿಚಲಿತರಾಗಿರುವ ರಷ್ಯಾ ಅಧ್ಯಕ್ಷ ಪುಟಿನ್ ಗೆ ಇದೀಗ ತಮ್ಮ ದೇಶದ ಒಳಗೆಯೇ ಸೇನಾದಂಗೆ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ