October 5, 2024

ಅಟ್ಲಾಂಟಿಕ್ ಸಾಗರದಲ್ಲಿ ಶತಮಾನದ ಹಿಂದೆ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗಾಗಿ ಐದು ದಿನಗಳ ಹಿಂದೆ ತೆರಳಿದಾಗ ಕಣ್ಮರೆಯಾಗಿದ್ದ ಟೈಟನ್ ಹೆಸರಿನ ಸಬ್ ಮರ್ಸಿಬಲ್ ಪುಟ್ಟ ನೌಕೆ ಸ್ಫೋಟಗೊಂಡಿದ್ದು, ನೌಕೆಯಲ್ಲಿದ್ದ ಎಲ್ಲ ಐವರು ಸಾಹಸಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ಅಮೇರಿಕಾದ ಕರಾವಳಿ ಕಾವಲು ಪಡೆ ಖಚಿತಪಡಿಸಿದೆ.

ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಓಷನ್‍ಗೇಟ್ ಎಕ್ಷ್‍ಪೆಡಿಷನ್ ಕಂಪನಿಯ ಸಿಇಓ ಸ್ಟಾಕ್‍ಟನ್ ರಷ್,  ಬ್ರಿಟಿಷ್ ಉದ್ಯಮಿ ಹಮೀಷ್ ಹಾರ್ಡಿಂಗ್,ಪಾಲ್ ಹೆನ್ರಿ,ಪಾಕಿಸ್ತಾನಿ ಉದ್ಯಮಿ ಶಹಝಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಅವರು ಈ ಸಬ್ ಮರ್ಸಿಬಲ್ ಟೈಟನ್ ನೌಕೆಯಲ್ಲಿ, 1912ರಲ್ಲಿ ದುರಂತಕ್ಕೀಡಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಭಾನುವಾರ ಅಟ್ಲಾಂಟಿಕ್ ಆಳ ಸಮುದ್ರದತ್ತ ಪ್ರಯಾಣಿಸಿದ್ದರು.

ಓಷನ್‍ಗೇಟ್ ಎಕ್ಷ್‍ಪೆಡಿಷನ್ ಕಂಪನಿಯೇ ತನ್ನ ಟೈಟನ್ ನೌಕೆಯ ಮೂಲಕ ಈ ದುಬಾರಿ ಪ್ರವಾಸವನ್ನು ಮೂರನೇ ಬಾರಿಗೆ ಆಯೋಜಿಸಿತ್ತು.
ನಿರಂತರ ಶೋಧದ ನಂತರ, ಟೈಟನ್ ನೌಕೆಯ ಅವಶೇಷಗಳು ಪತ್ತೆಯಾಗಿವೆ. ಸಾಗರದ ಒಳಗಡೆ ಟೈಟಾನಿಕ್ ಹಡಗಿನ ಅವಶೇಷಗಳ
ಬಳಿಯೇ ಟೈಟನ್ ನೌಕೆಯು ಸ್ಫೋಟಗೊಂಡಿದೆ ಎಂದು ಅಮೇರಿಕ ಕರಾವಳಿ ಕಾವಲು ಪಡೆಯ ರಿಯರ್ ಅಡ್ಮಿರಲ್ ಜಾನ್ ಮೌಗರ್ ತಿಳಿಸಿದ್ದಾರೆ.

ಟೈಟನ್ ನೌಕೆಯ ಅವಶೇಷಗಳನ್ನು ಆಳ ಸಮುದ್ರದಲ್ಲಿ ಕಾರ್ಯಚರಣೆ ನಡೆಸುವ ರೋಬೊಟ್ ಮೂಲಕ ಪತ್ತೆಹಚ್ಚಲಾಗಿದೆ. ಈ ನೌಕೆಗೆ ನೀರಿನಾಳದಲ್ಲಿ ಏನಾಯಿತು ಎನ್ನುವದನ್ನು ತಿಳಿಯುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಟೈಟನ್ ನೌಕೆ ಆಳ ಸಮುದ್ರಕ್ಕೆ ಧುಮುಕಿದ ಕೇವಲ ಒಂದುಮುಕ್ಕಾಲು ತಾಸಿನಲ್ಲಿ ಮಾತೃ ನೌಕೆಯ ನಿಯಂತ್ರಣ ಸಂಪರ್ಕ ಕಳೆದುಕೊಂಡಿತ್ತು. ಕೇವಲ 96 ತಾಸು ಉಸಿರಾಡಲು ಆಗುವಷ್ಟು ಆಮ್ಲಜನಕವನ್ನಷ್ಟೇ ಹೊಂದಿದ್ದ ಈ ಪುಟ್ಟ ನೌಕೆಯಲ್ಲಿರುವವರನ್ನು ಸುರಕ್ಷಿತವಾಗಿ ಪಾರು ಮಾಡಲು ಅಮೇರಿಕಾ, ಕೆನಡಾ, ಫ್ರಾನ್ಸ್, ಬ್ರಿಟನ್‍ನ ರಕ್ಷಣಾ ತಂಡಗಳು ತೀವ್ರ ಶೋಧ ನಡೆಸಿದ್ದವು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ