October 5, 2024

PAN ಕಾರ್ಡ್ ನೊಂದಿಗೆ Aadhaar ಸಂಖ್ಯೆ ಲಿಂಕ್ ಮಾಡಲು ಜೂನ್ 30 ಕೊನೆಯ ದಿನವಾಗಿದೆ. ರೂ. ಒಂದು ಸಾವಿರ ದಂಡದೊಂದಿಗೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನವೆಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.

ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ಲಿಂಕ್ ಮಾಡದೇ ಹೋದರೆ ಜೂನ್ 30ರ ನಂತರ ದಂಡದ ಮೊತ್ತ ಹೆಚ್ಚುವ ಜೊತೆಗೆ ಪಾನ್ ಮೂಲಕ ನಡೆಸುವ ಎಲ್ಲಾ ವ್ಯವಹಾರಗಳಲ್ಲಿ ತೊಡಕನ್ನು ಎದುರಾಗಲಿದೆ. ಹಾಗಾಗಿ ಯಾರೆಲ್ಲಾ ಪಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಲ್ಲವೋ ಅವರು ಇದೇ ಜೂನ್ 30ರ ಒಳಗೆ ಲಿಂಕ್ ಮಾಡಿಸುವುದು ಹೆಚ್ಚು ಸುರಕ್ಷಿತ.

ಬಹುತೇಕರ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆ. ಪಾನ್ ಮತ್ತು ಆಧಾರ್ ಲಿಂಕ್ ಆಗಿದೆಯೋ ಎಂದು ಈ ಕೆಳಗಿನ ಲಿಂಕ್ ನಲ್ಲಿ ಆಧಾರ್ ಮತ್ತು ಪಾನ್ ನಂಬರ್ ನಮೂದಿಸಿ ತಿಳಿಯಬಹುದು.

https://eportal.incometax.gov.in/iec/foservices/#/pre-login/link-aadhaar-status
ಒಂದು ವೇಳೆ ಲಿಂಕ್ ಆಗಿಲ್ಲ ಎಂದಾದರೆ ಗ್ರಾಹಕರೇ ಸ್ವಯಂ ಈ ಕೆಳಗಿನ ಲಿಂಕ್ ಬಳಸಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಸಾಧ್ಯವಿದೆ.

https://eportal.incometax.gov.in/iec/foservices/#/pre-login/bl-link-aadhaar
ಸ್ವಯಂ ಲಿಂಕ್ ಮಾಡಲು ಸಾಧ್ಯವಾಗದೇ ಇದ್ದರೆ ಸಮೀಪದ ಆನ್ ಲೈನ್ ಸೆಂಟರ್ ಗಳಲ್ಲಿ ತಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಸಂಖ್ಯೆಗಳನ್ನು ನೀಡಿ ಲಿಂಕ್ ಮಾಡಿಸಬಹುದು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ