October 5, 2024

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ರಾಜ್ಯದ ರೈತರಿಗೆ ಸಹಕಾರ ಸಂಘದಲ್ಲಿ 10 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ಈಗ ಭರವಸೆ ಈಡೇರಿಸುವ ಯೋಚನೆ ಮಾಡುತ್ತಿಲ್ಲ ಎಂದು ರೈತ ಸಂಘದ ಮೂಡಿಗೆರೆ ತಾಲ್ಲೂಕು ಮುಖಂಡ ಡಿ.ಎಸ್. ರಮೇಶ್ ದಾರದಹಳ್ಳಿ ಆರೋಪಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕೆಗೆ ಹೇಳಿಕೆ ನೀಡಿದ್ದು, ಕಾಂಗ್ರೇಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಮರೆತಂತೆ ತೋರುತ್ತಿದೆ. ಇತ್ತೀಚೆಗೆ ಸಹಕಾರ ಸಚಿವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ 5 ಲಕ್ಷದವರೆಗೂ 0% ಸಾಲ ಕೊಡುವ ಹೇಳಿಕೆ ನೀಡಿ ರೈತರಿಗೆ ಸಾಲ ಕೊಡುವ ಸಮಯವನ್ನು ತಿಳಿಸಿಲ್ಲ ಮತ್ತು ಸಾಲ ಕೊಡುವುದಕ್ಕೆ ಕಂಡೀಷನ್ ಹಾಕಿದ ರೀತಿಯಲ್ಲಿ ಮಾತನಾಡಿದ್ದಾರೆ.

ಆದರೆ ಕಾಂಗ್ರೇಸ್ 2023ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಹಕಾರಿ ಸಂಘಗಳಲ್ಲಿ ರೈತರಿಗೆ ಬಡ್ಡಿರಹಿತ ಸಾಲದ ಮೊತ್ತವನ್ನು ಈಗಿನ ರೂ. 3 ಲಕ್ಷದಿಂದ ರೂ. 10ಲಕ್ಷಕ್ಕೆ ಏರಿಸುವ ಮತ್ತು ಶೇಕಡಾ 3 ರ ಬಡ್ಡಿಯಲ್ಲಿನ ಸಾಲದ ಮೊತ್ತವನ್ನು ರೂ. 15 ಲಕ್ಷಕ್ಕೆ ಏರಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ತನ್ನ ಭರವಸೆಯನ್ನು ಸರ್ಕಾರ ಮರೆತಿದೆ.

 

ಹಿಂದಿನ ಸರ್ಕಾರ 08/03/2023 ರಲ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ 5 ಲಕ್ಷದವರೆಗೂ ಸಹಕಾರ ಸಂಘದಲ್ಲಿ 0% ಸಾಲ ನೀಡುವುದಾಗಿ ಘೋಷಣೆ ಮಾಡಿದ್ದರು ರೈತರಿಗೆ ಸಾಲ ನೀಡಲು ಸಹಕಾರ ಸಂಘದಿಂದ ಇಲ್ಲಿಯವರೆಗೂ ಸರ್ಕಾರ ಹಣವನ್ನು ನೀಡಿಲ್ಲ, ರಾಜ್ಯದ ರೈತರಿಗೆ ಈ ಮುಂಗಾರು ಹಂಗಾಮಿನಲ್ಲಿ ಸಾಲ ನೀಡಬೇಕಾಗಿದೆ, ರೈತರಿಗೆ ಕೃಷಿ ಅಭಿವೃದ್ಧಿಗೆ ಸಾಲ ನೀಡಿದರೆ ದೇಶದಲ್ಲಿ ಆಹಾರ ಭದ್ರತೆ ಆಗಲಿದೆ ಮತ್ತು ದೇಶದ ಅಭಿವೃದ್ಧಿಗೆ ನೆರವಾಗಲಿದೆ ಆದರೆ ಎಲ್ಲಾ ಸರ್ಕಾರಗಳು ರೈತರಿಗೆ ಸಾಲ ನೀಡುವುದನ್ನು ಓಟಿನ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತೇವೆ.

ಹಿಂದಿನ ಸರ್ಕಾರ ಕೂಡ ಸಹಕಾರ ಸಂಘದಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ನೀಡಿಲ್ಲ ಕಾರಣ ಸಂಘಕ್ಕೆ ಸಾಲ ಕೊಡುವುದಕ್ಕೆ ಡಿ.ಸಿ.ಸಿ.ಬ್ಯಾಂಕುಗಳು ಮಧ್ಯಸ್ಥಿಕೆ ವಹಿಸುತ್ತಿವೆ ಆದರೆ ಡಿ.ಸಿ.ಸಿ.ಬ್ಯಾಂಕ್‍ಗಳು ರೈತರ ಸಾಲ ನೀಡುವ ವಿಚಾರದಲ್ಲಿ ದಲ್ಲಾಳಿಗಳ ರೀತಿಯಲ್ಲಿ ಸಾಲ ಕೊಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಡಿ.ಸಿ.ಸಿ.ಬ್ಯಾಂಕ್‍ಗಳಲ್ಲಿ ರಾಜಕೀಯ ಒತ್ತಡ ಗುಂಪುಗಾರಿಕೆಯಿಂದ ಗೊಂದಲ ಉಂಟಾಗಿದೆ ಆದ್ದರಿಂದ ಈಗಿನ ಕಾಂಗ್ರೇಸ್ ಸರ್ಕಾರ ಕೂಡಲೇ ಸಹಕಾರ ಸಂಘದಲ್ಲಿ ರೈತರಿಗೆ ಕೊಡುವ ಬೆಳೆಯ ಸಾಲವನ್ನು ಚುನಾವಣಾ ಪ್ರಣಾಳಿಕೆ ಭರವಸೆಯಂತೆ 10 ಲಕ್ಷದವರೆಗಿನ 0% ಸಾಲವನ್ನು ಕೊಡುವ ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದಲ್ಲಿ ರಾಜ್ಯದ ರೈತರು ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಪ್ರಕಾಶ್ ಸತ್ತಿಗನಹಳ್ಳಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ