October 5, 2024

ಚಿಕ್ಕಮಗಳೂರಿನ ಹೆಸರಾಂತ ಲೈಫ್ ಲೈನ್ ಫೀಡ್ಸ್ ಪ್ರೈ.ಲಿ.(ಟೆಂಡರ್ ಚಿಕನ್) ಸಂಸ್ಥೆಯು ತನ್ನ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿದ್ದು, ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ. ಸರ್ಕಾರಿ ಪದವಿ ಕಾಲೇಜಿಗೆ 50ಲಕ್ಷ ವೆಚ್ಚದಲ್ಲಿ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದೆ.

ಸಂಸ್ಥೆಯ ಸಂಸ್ಥಾಪಕರಾದ ಕಿಶೋಕ್ ಕುಮಾರ್ ಹೆಗ್ಡೆಯವರು ಪೀಠೋಪಕರಣಗಳನ್ನು ಕಾಲೇಜಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದಾನಶೀಲತೆಯಿಂದ ಸದೃಢ, ಸಮರ್ಥ, ನೆಮ್ಮದಿಯ ರಾಷ್ಟ್ರ ನಿರ್ಮಾಣ ಸಾಧ್ಯ, ದಾನ ನೀಡುವುದರಿಂದ, ಸಮಾಜಸೇವೆಯಿಂದ ಸಿಗುವ ಸಂತೋಷ ಮತ್ತಾವುದರಿಂದಲೂ ಸಿಗುವುದಿಲ್ಲ ಎಂದರು. ವಿದ್ಯಾರ್ಥಿಗಳು ಮುಂದೆ ವೃತ್ತಿಜೀವನಕ್ಕೆ ಹೋದಾಗ ತಾವು ದುಡಿಮೆ ಮಾಡಿದ್ದರಲ್ಲಿ ಒಂದಂಶವನ್ನು ರಾಷ್ಟ್ರಕ್ಕಾಗಿ ವಿನಿಯೋಗಿಸಿಬೇಕು. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಕೊಠಡಿ ಮತ್ತು ಪೀಠೋಪಕರಣಗಳ ಕೊರತೆಯಿಂದ ಎರಡು ಪಾಳಿಗಳಲ್ಲಿ ತರಗತಿಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿತು. ಇಲ್ಲಿ ಬಂದು ನೋಡಿದಾಗ 380 ಡೆಸ್ಕ್ ಗಳ ಅವಶ್ಯಕತೆ ಇದೆ ಎಂದು ತಿಳಿದುಬಂದಿತು. ಉತ್ತಮ ಗುಣಮಟ್ಟದ ಮರದಲ್ಲಿ ತಯಾರಿಸಿದ 380 ಡೆಸ್ಕ್ ಗಳನ್ನು ಸಂಸ್ಥೆಯಿಂದ ಕೊಡುಗೆಯಾಗಿ ನೀಡಲಾಗಿದೆ. ಇದಕ್ಕೆ ರೂ. 50 ಲಕ್ಷ ವೆಚ್ಚವಾಗಿದೆ ಎಂದರು. ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಕಿಶೋರ್ ಕುಮಾರ್ ಹೆಗ್ಡೆಯವರ ಸಾಮಾಜಿಕ ಕಳಕಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್. ರಮೇಶ್, ಲೈಫ್ ಲೈನ್ ಸಂಸ್ಥೆಯ ನಿರ್ದೇಶಕರುಗಳಾದ ಅರ್ಜುನ್ ಹೆಗ್ಡೆ, ನಂದನ್ ಹೆಗ್ಡೆ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ನಿರಂತರ ಸಮಾಜ ಕಾರ್ಯ :

ಲೈಫ್ ಲೈನ್ ಸಂಸ್ಥೆಯ ಕಿಶೋಕ್ ಕುಮಾರ್ ಹೆಗ್ಡೆಯವರು ಹೆಸರಾಂತ ಉದ್ದಿಮೆದಾರರಾಗಿದ್ದು, ಕುಕ್ಕುಟ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಲೈಪ್ ಲೈನ್ ಫೀಡ್ಸ್ ಹೆಸರಿನಲ್ಲಿ ಕೋಳಿಗಳ ಆಹಾರ ಉತ್ಪಾದನೆ, ಟಂಡರ್ ಚಿಕನ್ ಬ್ರಾಂಡ್ ನಲ್ಲಿ ಕೋಳಿ ಮಾಂಸದ ಹೋಲ್ ಸೇಲ್ ಮತ್ತು ರೀಟೆಲ್ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅವರು ನಿರಂತರವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಚಿಕ್ಕಮಗಳೂರಿನ ನೂತನ ಮೆಡಿಕಲ್ ಕಾಲೇಜಿಗೆ ಬಸ್ ಕೊಡುಗೆ ನೀಡಿದ್ದರು. ಇದೀಗ ಸರ್ಕಾರಿ ಕಾಲೇಜಿಗೆ 50ಲಕ್ಷ ವೆಚ್ಚದಲ್ಲಿ ಪೀಠೋಪಕರಗಳನ್ನು ನೀಡಿದ್ದಾರೆ.

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಬಸ್ ಕೊಡುಗೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ