October 5, 2024

ಚಿಕ್ಕಮಗಳೂರು ಸಮೀಪದ ಇಂದಾವರ ಗ್ರಾಮ ಕಳೆದ ಒಂದು ವಾರದಿಂದ ಸುಗ್ಗಿ ಉತ್ಸವದ ಸಂಭ್ರಮದಲ್ಲಿ ಮಿಂದೆದ್ದಿತು.

ಗ್ರಾಮದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸುಗ್ಗಿ ಉತ್ಸವವನ್ನು ಈ ಬಾರಿ ಗ್ರಾಮದ ಜನರು ಬಹು‌ ಸಡಗರ, ಸಂಭ್ರಮ ಮತ್ತು ಭಕ್ತಿಭಾವದಲ್ಲಿ ಆಚರಿಸಿದರು.

ಗ್ರಾಮವನ್ನು ತಳಿರು ತೋರಣ, ಬಾವುಟ, ಬಂಟಿಗ್ಸ್ ಗಳಿಂದ ಅಲಂಕರಿಸಿ ದೇವಸ್ಥಾನಗಳನ್ನು ಸಿಂಗರಿಸಿ, ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲಾಗಿತ್ತು.

ಮೂರು ದಿನಗಳ ಕಾಲ ವಿವಿಧ ದೇವರ ಉತ್ಸವಗಳು, ಉಪವಾಸ ವೃತ ಆಚರಿಸಿ, ಸಾಂಪ್ರದಾಯಿಕ ಉಡುಗೆಗಳೊಂದಿಗೆ ಉತ್ಸವ ಮೂರ್ತಿಗಳ ಅಡ್ಡೆಗಳನ್ನು ಹೊತ್ತ ಗ್ರಾಮದ ಪುರುಷರು, ಯುವಕರ ಉತ್ಸಾಹ ಮೇರೆಮೀರಿತ್ತು.

ಗ್ರಾಮದಿಂದ ಪರವೂರು, ಹೊರದೇಶಗಳಲ್ಲಿ ನೆಲೆಸಿದ್ದವರೆಲ್ಲ ಹಬ್ಬಕ್ಕೆ ಆಗಮಿಸಿ ಆನಂದಿಸಿದರು.

ಮನೆಮನೆಗಳನ್ನು ಸಿಂಗರಿಸಿ, ಮನೆಬಾಗಿಲಿಗೆ ಬಂದ ದೇವರ ಉತ್ಸವ ಮೂರ್ತಿಗಳಿಗೆ ಆರತಿ ಬೆಳಗಿ, ಕಾಯಿ ಒಡೆದು ಧನ್ಯರಾದರು.

ಜಾತಿಮತ, ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರು ಒಟ್ಟಾಗಿ ಕಲೆತು ಬಂಧು ಬಾಂಧವರೊಂದಿಗೆ  ಸುಗ್ಗಿಯನ್ನು ಸಂಭ್ರಮಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ