October 5, 2024

ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ಗುರುವಾರ ಸಿಕ್ಕಿದ್ದ ಅಪರಿಚಿತ ಪುರುಷನ ಶವ ತಮ್ಮದೆಂದು ಬಂಟ್ವಾಳ ಮೂಲದ ಕುಟುಂಬದವರು ಹೇಳುತ್ತಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಯುವಕ ಫವಾಜ್ ನದ್ದು ಎಂದು ಅವರ ಕುಟುಂಬದವರು ಗುರುತಿಸಿದ್ದಾರೆ.

ಫವಾಜ್ ಕಳೆದ ಹತ್ತು ದಿನದಿಂದ ನಾಪತ್ತೆಯಾಗಿದ್ದ, ಆತನನ್ನು ಯಾರೋ ಅಪಹರಿಸಿದ್ದರು ಎಂದು ಹೇಳಲಾಗುತ್ತಿತ್ತು.

ಫವಾಜ್ ಮಾದಕವಸ್ತು ವ್ಯಸನಿಯಾಗಿದ್ದ ಮತ್ತು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈತನ ನಡವಳಿಕೆಯಿಂದ ಬೇಸತ್ತು ಕುಟುಂಬದವರು ಈತನನ್ನು ಮನೆಯಿಂದ ಹೊರಹಾಕಿದ್ದರು ಮತ್ತು ಮದುವೆಯಾಗಿ ಪತ್ನಿಯನ್ನು ಬಿಟ್ಟಿದ್ದ ಎನ್ನಲಾಗುತ್ತಿದೆ.

ಈತನ ಮೇಲೆ ಮಂಗಳೂರು ಮತ್ತು ಬಂಟ್ವಾಳ ಠಾಣೆಗಳಲ್ಲಿ ಅನೇಕ ಪ್ರಕರಣಗಳಿದ್ದು, ಪೊಲೀಸ್ ಇಲಾಖೆಗೆ ನೋಟೆಡ್ ಆಗಿದ್ದ ಎಂದು ತಿಳಿದುಬಂದಿದೆ.

ಫವಾಜ್ ನನ್ನು ಅಕ್ರಮ ವ್ಯವಹಾರ ಮತ್ತು ಹಣಕಾಸು ವಿಚಾರದಲ್ಲಿ ಆತನ ಗಾಂಜಾ ಗ್ಯಾಂಗ್ ಸ್ನೇಹಿತರೆ ಕೊಲೆ ಮಾಡಿ ಹೆಣವನ್ನು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.

ಶವದ ಮುಖ ಸಂಪೂರ್ಣ ಕೊಳೆತುಹೋಗಿದೆ. ಆತ ಧರಿಸಿದ್ದ ಬಟ್ಟೆಗಳ ಆಧಾರದಲ್ಲಿ ಇದು ಫವಾಜ್ ನ ಶವವೆಂದು ಅವರ ಕುಟುಂದವರು ಹೇಳುತ್ತಿದ್ದಾರೆ.

ಮೂಡಿಗೆರೆಗೆ ಅವರ ಕುಟುಂಬದ ಸದಸ್ಯರು ಆಗಮಿಸಿದ್ದಾರೆ. ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಫವಾಜ್ ನದ್ದೇ ಶವ ಎಂದು ದೃಢಪಟ್ಟ ನಂತರವಷ್ಟೇ ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಡಿಗೆರೆ ಮತ್ತು ಬಣಕಲ್ ಠಾಣೆಯ ಪೋಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು ಫವಾಜ್ ಹಂತಕರ ಪತ್ತೆಗಾಗಿ ಶೋಧ ನಡೆಸಿದ್ದರೆ.

ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆಯಾ ದೇವರಮನೆ :

ಪಶ್ಚಿಮಘಟ್ಟದ ಪ್ರಶಾಂತ ವಾತಾವರಣದಲ್ಲಿ‌ ಕಾಲಭೈರವನ ಸುಂದರ ತಾಣವಾಗಿದ್ದ ದೇವರಮನೆ ಇತ್ತೀಚಿನ ವರ್ಷಗಳಲ್ಲಿ ಅಕ್ರಮಗಳ ತಾಣವಾಗಿ ಬದಲಾಗುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಲ್ಲಿ ಕೆಲವರು ಇಲ್ಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಅವಶೇಷಗಳು ತುಂಬಿಹೋಗಿವೆ. ಮಾದಕವಸ್ತು ಸೇವನೆ, ಯುವಜನರ ಅಶ್ಲೀಲ ವರ್ತನೆಗಳು ಮೇರೆಮೀರುತ್ತಿವೆ.

ಇದೇ ಮೊದಲ ಬಾರಿಗೆ ದೇವರಮನೆ ಪರಿಸರದಲ್ಲಿ ಕೊಲೆಯಂತಹ ಕೃತ್ಯವು ನಡೆದಿದೆ.

ಇದೆಲ್ಲ ಸ್ಥಳೀಯರಲ್ಲಿ ಆತಂಕ ಮೂಡಿಸುತ್ತಿದೆ.

ಪ್ರವಾಸೋದ್ಯಮ ಬೆಳವಣಿಗೆಯ ಹೆಸರಿನಲ್ಲಿ ಇಂತಹ ಅಪಸವ್ಯಗಳನ್ನು ಕಂಡು ತುಂಬಾ ಬೇಸರವಾಗುತ್ತದೆ.

ಈ ಬಗ್ಗೆ ಸ್ಥಳೀಯ ಆಡಳಿತ, ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿದೆ.

ದೇವರಮನೆ ಸಮೀಪ ಅಪರಿಚಿತ ಪುರುಷನ ಶವ ಪತ್ತೆ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ