October 5, 2024

ದೇಶದ ಖ್ಯಾತ ನೇತ್ರ ತಜ್ಞರಾಗಿದ್ದ, ಬೆಂಗಳೂರಿನ ಪ್ರತಿಷ್ಟಿತ ನಾರಾಯಣ ನೇತ್ರಾಲಯದ ಅಧ್ಯಕ್ಷರೂ ಆಗಿದ್ದ ಡಾ. ಭುಜಂಗ ಶೆಟ್ಟಿಯವರು ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ.

ಭುಜಂಗ ಶೆಟ್ಟಿ (69 ವರ್ಷ) ನಿನ್ನೆ ನಾರಾಯಣ ನೇತ್ರಾಲಯದಲ್ಲಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಎದೆನೋವು ಕಾಣಿಸಿಕೊಂಡಿದ್ದು ಆವರನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಕೊನೆಯುಸಿರೆಳೆದಿದ್ದರು.

ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಅವರು ನಿಪುಣರಾಗಿದ್ದರು.

ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಅವರು ಮುಂಚೂಣಿ ಪ್ರಯತ್ನ ನಡೆಸಿದ್ದರು. ನೇತ್ರದಾನದ ಮೂಲಕ ಸುಮಾರು 70 ಸಾವಿರಕ್ಕೂ ಅಧಿಕ ಮಂದಿಗೆ ದೃಷ್ಟಿ ಮರಳುವಂತೆ ಮಾಡಿದ್ದರು. ಸ್ವತಃ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇವರ ಪ್ರಯತ್ನದಿಂದ ಕರ್ನಾಟಕದಲ್ಲಿ ಕಾರ್ನಿಯಲ್ ಕುರುಡುತನ ಗಣನೀಯವಾಗಿ ಕಡಿಮೆಯಾಗಿತ್ತು.

ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಂಡು ತಮ್ಮ ದೇಹವನ್ನೇ ಪ್ರಯೋಗಾಲಯವನ್ನಾಗಿಸಿಕೊಂಡು ಮಧುಮೇಹವನ್ನು ಸಂಪೂರ್ಣವಾಗಿ ಗೆದ್ದಿದ್ದರು. ರಿವರ್ಸಿಂಗ್ ಡಯಾಬಿಟೀಸ್ ಎಂಬ ಕ್ಲಿನಿಕ್ ಸಹ ತೆರೆದಿದ್ದರು. ಅದರ ಮೂಲಕ ಸಾವಿರಾರು ಜನರಿಗೆ ರಿವರ್ಸ್ ಡಯಬಿಟೀಸ್ ಅಳವಡಿಸಿಕೊಂಡು ಮಧುಮೇಹದಿಂದ ಮುಕ್ತಿ ಹೊಂದಲು ಮಾರ್ಗದರ್ಶಕರಾಗಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ