October 5, 2024

ಕೇಂದ್ರ ತನಿಖಾ ದಳ(ಸಿ.ಬಿ.ಐ)ದ ನೂತನ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ನೇಮಕವಾಗಿದ್ದಾರೆ.

ಸಿ.ಬಿ.ಐ. ಹಾಲಿ ನಿರ್ದೇಶಕರಾದ ಸುಬೋದ್ ಕುಮಾರ್ ಜೈಸ್ವಾಲ್ ಅವರ ಅಧಿಕಾರ ಅವಧಿ ಇದೇ ಮೇ 25ಕ್ಕೆ ಕೊನೆಗೊಳ್ಳಲಿದ್ದು, ಮುಂದಿನ ನಿರ್ದೇಶಕಾಗಿ ಪ್ರವೀಣ್ ಸೂದ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭಾ ವಿರೋಧ ಪಕ್ಷ ನಾಯಕರನ್ನೊಳಗೊಂಡ ವಿಶೇಷ ಸಮಿತಿ ಪ್ರವೀಣ್ ಸೂದ್ ಅವರ ಹೆಸರನ್ನು ಶಿಪಾರಸ್ಸು ಮಾಡಿದೆ.

ಹಿಮಾಚಲ ಪ್ರದೇಶ ಮೂಲದ ಪ್ರವೀಣ್ ಸೂದ್ ಕರ್ನಾಟಕ ಕೇಡರ್ ನ 1986 ರ ಐ.ಪಿ.ಎಸ್. ಅಧಿಕಾರಿಯಾಗಿ ರಾಜ್ಯದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರವೀಣ್ ಸೂದ್ ಇದೇ ಮೇ 24ಕ್ಕೆ ನಿವೃತ್ತರಾಗಬೇಕಿತ್ತು. ಆದರೆ ಈಗ ಸಿ.ಬಿ.ಐ. ನಿರ್ದೇಶಕರಾಗಿ ನೇಮಕಗೊಂಡಿರುವುದರಿಂದ ಎರಡು ವರ್ಷಗಳ ನಿಶ್ಚಿತ ಸೇವಾ ಅವಧಿಯನ್ನು ಪಡೆಯುತ್ತಾರೆ. ಕನಿಷ್ಠ ಮೇ 2025ರ ವರೆಗೆ ಅಧಿಕಾರದಲ್ಲಿ ಇರುತ್ತಾರೆ. ಅವರ ಸೇವಾ ಅವಧಿಯನ್ನು ಐದು ವರ್ಷಗಳ ವರೆಗೂ ವಿಸ್ತರಿಸಲು ಅವಕಾಶವಿದೆ ಎನ್ನಲಾಗಿದೆ.

ಈ ಮೂಲಕ ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿ.ಬಿ.ಐ.ನ ನಿರ್ದೇಶಕರಾಗಿ ನಮ್ಮ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಯೊಬ್ಬರು ನೇಮಕವಾಗುತ್ತಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ