October 5, 2024

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ರಾಜಕೀಯ ಪಕ್ಷಗಳು ಪ್ರಬಲ ಪೈಪೋಟಿಗೆ ಇಳಿದಿವೆ. ಬಿ.ಜೆ.ಪಿ.ಯಿಂದ ಮಾಜಿ ಶಾಸಕ ಡಿ.ಎನ್. ಜೀವರಾಜ್, ಕಾಂಗ್ರೇಸ್‍ನಿಂದ ಹಾಲಿ ಶಾಸಕ ಟಿ.ಡಿ. ರಾಜೇಗೌಡ, ಜೆ.ಡಿ.ಎಸ್‍ನಿಂದ ಸುಧಾಕರ್ ಶೆಟ್ಟಿ ಅಭ್ಯರ್ಥಿಗಳಾಗಿದ್ದಾರೆ.

ಬಿ.ಜೆ.ಪಿ.ಯ ಜೀವರಾಜ್ ಸತತ ಮೂರು ಚುನಾವಣೆಗಳಲ್ಲಿ ಗೆದ್ದು, ಕಳೆದ ಚುನಾವಣೆಯಲ್ಲಿ ಕೂದಲೆಳೆಯ ಅಂತರದಿಂದ ಕಾಂಗ್ರೇಸ್‍ನ ಟಿ.ಡಿ.ರಾಜೇಗೌಡರ ಎದುರು ಸೋಲನುಭವಿಸಿದ್ದರು. ಈ ಬಾರಿ ಮತ್ತೆ ಗೆಲ್ಲಬೇಕು ಎಂಬ ಹಂಬಲದೊಂದಿಗೆ ಕಣದಲ್ಲಿದ್ದಾರೆ. ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಜೀವರಾಜ್ ಶಾಸಕರಲ್ಲದ್ದಿದ್ದರೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸದಾ ಅಧಿಕಾರದ ಸ್ಥಾನದಲ್ಲಿಯೇ ಮುಂದುವರೆದು ಜನರೊಂದಿಗೆ ನೇರ ಸತತ ಸಂಪರ್ಕದಲ್ಲಿದ್ದಾರೆ. ಜೀವರಾಜ್‍ರವರು ಈ ಚುನಾವಣೆಯಲ್ಲಿ ಗೆಲ್ಲುವ ಭರವಸೆಯೊಂದಿಗೆ ಚುನಾವಣಾ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಕಾಂಗ್ರೇಸ್‍ನ ಟಿ.ಡಿ. ರಾಜೇಗೌಡರು ಕ್ಷೇತ್ರದಲ್ಲಿ ಶಾಸಕರಾಗಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಪಕ್ಷ ಸಂಘಟನೆಯನ್ನು ಪ್ರಬಲವಾಗಿ ಇಟ್ಟುಕೊಂಡು ಮತ್ತೊಮ್ಮೆ ಗೆದ್ದು ಬರುವ ವಿಶ್ವಾಸ ಹೊಂದಿದ್ದಾರೆ. ಇಲ್ಲಿ ಕಾಂಗ್ರೇಸ್ ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ ರಾಜೇಗೌಡರ ವೈಯುಕ್ತಿ ವರ್ಚಸ್ಸಿನ ಮತಗಳು ಸಹ ಗಣನೆಗೆ ಬರುತ್ತಿವೆ. ಕ್ಷೇತ್ರದಲ್ಲಿ ಟಿ.ಡಿ. ರಾಜೇಗೌಡರ ವಿರುದ್ಧ ದೊಡ್ಡ ಮಟ್ಟದ ಯಾವುದೇ ಹಗರಣಗಳು, ವಿವಾದಗಳು ಇಲ್ಲದೇ ಇರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಾಗಾಗಿ ಅವರನ್ನು ಈ ಬಾರಿಯೂ ಫೆವರೇಟ್ ಅಭ್ಯರ್ಥಿಯನ್ನಾಗಿಸಿದೆ.

ಜೆ.ಡಿ.ಎಸ್. ಅಭ್ಯರ್ಥಿಯಾಗಿರುವ ಸುಧಾಕರ ಶೆಟ್ಟಿಯವರು ಈ ಬಾರಿ ಇಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಉದ್ಯಮಿಯಾಗಿರುವ ಸುಧಾಕರ ಶೆಟ್ಟಿಯವರು ಕಳೆದೆರಡು ವರ್ಷಗಳಿಂದ ಶೃಂಗೇರಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಟಿಕೆಟ್ ಆಕಾಂಕ್ಷಿಯಾಗಿ ಜನಸಂಪರ್ಕದಲ್ಲಿದ್ದಾರೆ. ಸಾಕಷ್ಟು ಹಣವನ್ನು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಖರ್ಚು ಮಾಡಿದ್ದಾರೆ. ಈ ಬಾರಿ ಜೆ.ಡಿ.ಎಸ್.ಗೆ ಅವಕಾಶ ಕೊಟ್ಟು ನೋಡೋಣ ಎಂಬ ಮನೋಭಾವನೆಯೂ ಕ್ಷೇತ್ರದ ಮತದಾರರ ನಡುವೆ ಬಹುಚರ್ಚೆಯ ವಿಷಯವಾಗಿದೆ.

ಕಳೆದ ಬಾರಿ ಇಲ್ಲಿ ಜೆ.ಡಿ.ಎಸ್. ಕೇವಲ 9799 ಮತಗಳನ್ನಷ್ಟೇ ಪಡೆದಿತ್ತು. ಆದರೆ ಈ ಬಾರಿ ಅದು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು, ತ್ರಿಕೋನ ಸ್ಪರ್ಧೆಯ ಹಂತಕ್ಕೆ ಬೆಳವಣಿಗೆ ಕಂಡಿದೆ. ಜೆ.ಡಿ.ಎಸ್. ಅಭ್ಯರ್ಥಿ ಯಾವ ಪಕ್ಷದ ಮತಗಳನ್ನು ಹೆಚ್ಚು ಸೆಳೆಯುತ್ತಾರೆ ಎಂಬುದು ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.ಹಾಗಾಗಿ ಸುಧಾಕರ ಶೆಟ್ಟಿಯವರ ಸ್ಪರ್ಧೆ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ರಾಜಕೀಯ ಚಿತ್ರಣ ಮತ್ತು ಲೆಕ್ಕಾಚಾರವನ್ನು ಬದಲಿಸುವಂತೆ ಮಾಡುತ್ತಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ