October 5, 2024

ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಆವತಿ ಹೋಬಳಿಯ ಕಣತಿ ಗ್ರಾಮದ ಮತಗಟ್ಟೆ ವ್ಯಾಪ್ತಿಯಲ್ಲಿರುವ 103 ವರ್ಷ ಪ್ರಾಯದ ಬೀಬಿ ಜಾನ್ ಮೈದೀನ್ ಅವರ ಮನೆಗೆ, ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಚುನಾವಣಾಧಿಕಾರಿಗಳಾದ ಎಚ್.ಡಿ.ರಾಜೇಶ್ ಭೇಟಿ ನೀಡಿ, ಬೀಬಿ ಜಾನ್ ಮೈದೀನ್ ಬಿನ್ ಮೈದೀನ್ ರವರಿಗೆ ಹೂಗುಚ್ಛ ನೀಡಿ ಗೌರವಿಸುವ ಮೂಲಕ ಮನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು.

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ  ವ್ಯಾಪ್ತಿಯ  ಬಣಕಲ್ ಹೊಬಳಿ, ಹಳೇಹಳ್ಳಿ (ಭಾರತಿ ಬೈಲು) ಗ್ರಾಮದ ಹಿರಿಯ ಮತದಾರರಾದ 104 ವರ್ಷ ವಯಸ್ಸಿನ ಶ್ರೀಮತಿ ಪುಟ್ಟಮ್ಮ ಇವರ ಮನೆಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿ ರವರು ಶ್ರೀಮತಿ ಪುಟ್ಟಮ್ಮ ರವರಿಗೆ ಹೂಗುಚ್ಛ ನೀಡಿ ಗೌರವಿಸಿ ಅವರ ಮನೆಯಿಂದಲೇ ಅವರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು.

ಈ ಬಾರಿ ಚುನಾವಣಾ ಆಯೋಗ ಹಿರಿಯ ನಾಗರೀಕರು, ವಿಕಲಚೇತನರು ಮತ್ತು ಕೋವಿಡ್ ಸೋಂಕಿತರು ತಾವು ಇಚ್ಚಿಸಿದಲ್ಲಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ. ನಮೂನೆ 12-ಡಿ ಅಡಿಯಲ್ಲಿ ಸಹಿ ಹಾಕಿ ಮನಯಿಂದಲೇ ಮತದಾನ ಮಾಡಲು ಒಪ್ಪಿಗೆ ಸೂಚಿಸಿದವರ ಮನೆಗೆ ಚುನಾವಣಾ ಆಯೋಗ ನೇಮಿಸಿದ ವ್ಯಕ್ತಿಗಳು ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರತಿನಿಧಿಗಳು ಹಾಜರಿರಲು ಸಹ ಅವಕಾಶ ಮಾಡಿಕೊಟ್ಟಿದೆ.

ಹಿರಿಯ ನಾಗರೀಕರು, ವಿಕಲ ಚೇತನ ಹಾಗೂ ಕೋವಿಡ್ ಸೋಂಕಿತ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ