October 5, 2024

ಇದೊಂದು ವಿಚಿತ್ರ ಪ್ರಕರಣ, ನಿನ್ನೆ ಸಂಜೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲೇ ಇರುವ ಹೆಬ್ರಿಗೆ ಎಂಬಲ್ಲಿ ರಸ್ತೆಗೆ ಅನತಿ ದೂರದಲ್ಲಿ ಓರ್ವ ಪುರುಷನ ಮೃತದೇಹ ಪತ್ತೆಯಾಗಿತ್ತು.

ಅಪರಿಚಿತ ವ್ಯಕ್ತಿಯ ಮೃತದೇಹ ಅನಾಥ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡು ದಾರಿಹೋಕರು ಬಣಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಆದರಿಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್ ಮೂಲಕ ಮಾಹಿತಿ ಕಲೆಹಾಕುತ್ತಾ ಹೋದಂತೆ ಪ್ರಕರಣ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳತೊಡಗಿತು.

ಮೃತಪಟ್ಟ ವ್ಯಕ್ತಿ ಚಿಕ್ಕಮಗಳೂರು ಸಮೀಪದ ತೇಗೂರು ಮೂಲದ ದಿಲೀಪ(36 ವರ್ಷ) ಎಂದು ತಿಳಿದುಬಂದಿದ್ದು, ದಿಲೀಪ ಅವರು ಧರ್ಮಸ್ಥಳದಲ್ಲಿ ಮುಡಿತೆಗೆಯುವ ವೃತ್ತಿ ಮಾಡುತ್ತಿದ್ದು, ಕುಟುಂಬ ಸಮೇತ ಉಜಿರೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಅವರು ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಮೇ 5 ರಂದು ನಿಗದಿಯಾಗಿತ್ತು. ಗೃಹಪ್ರವೇಶಕ್ಕೆ ಆಹ್ವಾನ ನೀಡಲು ಹಳೇಬೀಡಿನ ತನ್ನ ಹೆಂಡತಿ ಮನೆಗೆ ಮತ್ತು ಹಾಸನದಲ್ಲಿರುವ ಹೆಂಡತಿಯ ಅಕ್ಕನ ಮನೆ ಗೃಹಪ್ರವೇಶಕ್ಕೆಂದು ಸ್ಕೂಟಿಯಲ್ಲಿ ಹೆಂಡತಿ ಮಗುವಿನೊಂದಿಗೆ ಹೋಗಿದ್ದರು ಎನ್ನಲಾಗಿದೆ.

ನಿನ್ನೆ ವಾಪಾಸ್ಸು ಉಜಿರೆಗೆ ಹೋಗುವಾಗ ಸಂಜೆ ಸುಮಾರು 3 ಗಂಟೆಯ ಸಮಯದಲ್ಲಿ ಕೊಟ್ಟಿಗೆಹಾರ ಸಮೀಪ ಬಂದಾಗ ಜೋರಾಗಿ ಮಳೆಸುರಿಯಲಾರಂಭಿಸಿದ್ದರಿಂದ ಹೆಂಡತಿ ಮಗುವನ್ನು ಧರ್ಮಸ್ಥಳ ಬಸ್ಸಿಗೆ ಹತ್ತಿಸಿದ್ದು ತಾನು ಹಿಂದಿನಿಂದ ಸ್ಕೂಟಿಯಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.
************
ಆದರೆ ಸಂಜೆ ಹೊತ್ತಿಗೆ ದಿಲೀಪ ಅವರ ಮೃತದೇಹ ಕೊಟ್ಟಿಗೆಹಾರ ಬಣಕಲ್ ಮಧ್ಯದಲ್ಲಿರುವ ಹೆಬ್ರಿಗೆ ಎಂಬಲ್ಲಿ ಪತ್ತೆಯಾಗಿದೆ. ನಂತರ ಬಂದ ಮಾಹಿತಿಯಂತೆ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಾಲಯದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಕಂಡುಬಂದಿದೆ.

ಇದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅವರ ಸ್ಕೂಟಿ ಚಾರ್ಮಾಡಿಯಲ್ಲಿದ್ದು, ಮೃತದೇಹ ಸುಮಾರು 10 ಕಿ.ಲೋ. ಮೀಟರ್ ದೂರದ ಹೆಬ್ರಿಗೆ ಎಂಬಲ್ಲಿ ದೊರಕಿದೆ. ದಿಲೀಪ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡುತ್ತಿದ್ದು, ಬಣಕಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೇಲ್ನೋಟಕ್ಕೆ ಇವರ ಸ್ಕೂಟಿಗೆ ಯಾವುದೋ ವಾಹನದಿಂದ ಅಪಘಾತವಾಗಿದ್ದು, ವಾಹನ ಮಾಲೀಕರು ಗಾಯಗೊಂಡಿದ್ದ ದಿಲೀಪ ಅವರನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ವಾಹನದಲ್ಲಿ ಕರೆತಂದಿರಬಹುದು, ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ ಗಾಬರಿಯಾಗಿ ರಸ್ತೆ ಬದಿ ಎಸೆದು ಹೋಗಿರಬಹುದು, ಅರೆಜೀವವಾಗಿದ್ದ ದಿಲೀಪ ಒದ್ದಾಟ ನಡೆಸಿ ಪ್ರಾಣ ಬಿಟ್ಟಿರಬಹುದು. ಮೃತದೇಹದ ತುಂಬೆಲ್ಲಾ ಮಣ್ಣಾಗಿದ್ದು, ಅವರು ಸಾಯುವ ಮುನ್ನ ಸಾಕಷ್ಟು ಒದ್ದಾಟ ನಡೆಸಿರಬಹುದು.

ಯಾವುದಕ್ಕೂ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕು.

ದಿಲೀಪ ಅವರ ಸಾವಿಗೆ ಕಾರಣವಾಗಿ ಅವರ ಮೃತದೇಹವನ್ನು ಅಮಾನವೀಯವಾಗಿ ರಸ್ತೆಬದಿ ಎಸೆದು ಹೋಗಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

*****

ದಿಲೀಪ ಅವರಿಗೆ ಈಗ್ಗೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಒಂದೂವರೆ ವರ್ಷದ ಮಗುವಿದೆ. ಗೃಹಪ್ರವೇಶದ ಸಂಭ್ರದಲ್ಲಿದ್ದ ಮನೆಯಲ್ಲೀಗ ಸೂತಕದ ವಾತಾವರಣ ಸೃಷ್ಟಿಯಾಗಿದ್ದು, ಮಗನನ್ನು  ಕಳೆದುಕೊಂಡ ಪೋಷಕರು, ಗಂಡನನ್ನು ಕಳೆದುಕೊಂಡ ಪತ್ನಿ ದಿಕ್ಕುತೋಚದಂತಾಗಿದ್ದು, ತಂದೆಯನ್ನು ಕಳೆದುಕೊಂಡ ಮಗು ತಬ್ಬಲಿಯಾಗಿದೆ.

ದ್ವಿತೀಯ ಪಿಯುಸಿ ಯಲ್ಲಿ ಅನುತ್ತೀರ್ಣ ; ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ, ಓರ್ವ ವಿದ್ಯಾರ್ಥಿನಿ ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ