October 5, 2024

ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ಕಾರಣ ನಾನು ನಯನ ಮೋಟಮ್ಮ ಎಂದು ಕರೆಯಲ್ಪಡುತ್ತಿರುವುದರ ಬಗ್ಗೆ ಮತ್ತು ನಾನು ಪರವೂರಿನವಳು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಮೂಡಿಗೆರೆಯಲ್ಲಿಯೇ ಹುಟ್ಟಿ ಇಲ್ಲಿಯೇ ವಿದ್ಯಾಭ್ಯಾಸ ಮಾಡಿ ಇಲ್ಲಿನ ಜನರ ಕಷ್ಟಸುಖಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ನಾನು ಎಂದಿದ್ದರೂ ಮೂಡಿಗೆರೆಯ ಮಣ್ಣಿನ ಮಗಳು. ಮೂಡಿಗೆರೆ ನನ್ನ ಜನ್ಮಭೂಮಿ ಮತ್ತು ನನ್ನ ಕರ್ಮಭೂಮಿಯಾಗಿದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ನಯನ ಮೋಟಮ್ಮ ಹೇಳಿದರು.

ಅವರು ಇಂದು ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ತಾಯಿ ಮೋಟಮನವರ ಹೆಸರಿಗೆ ಒಂದು ತೂಕವಿದ್ದು ನಾನು ಅವರ ಮಗಳಾಗಿರುವುದರಿಂದ ಜನರೇ ನನ್ನನ್ನು ನಯನ ಮೋಟಮ್ಮ ಎಂದು ಕರೆಯುತ್ತಿದ್ದಾರೆ, ಅವರ ಮಗಳಾಗಿ ನಾನು ಅವರ ಅಭಿವೃದ್ದಿ ಚಿಂತನೆಗಳಿಂದ ಪ್ರಭಾವಿತಳಾಗಿದ್ದೇನೆ ಎಂದಿದ್ದಾರೆ.

ಸದ್ಯ ದೇಶದಲ್ಲಿ 40% ಸರ್ಕಾರ ಎಂದು ಹೆಸರಾಗಿರುವ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನೆನ್ನೆ ಮೊನ್ನೆಯವರೆಗೂ ಪಾಲುದಾರನಾಗಿದ್ದು ಈಗ ಜೆಡಿಎಸ್ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ 40% ನ ಪಾಲುದಾರ ಎಂಬುದನ್ನು ಜನತೆ ಮರೆಯಬಾರದು ಎಂದು ಹೇಳಿದರು. ಕ್ಷೇತ್ರದಲ್ಲಿ ನಡೆದ ಕಳಪೆ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ಮತ್ತು ಸರ್ಕಾರ ಮತ್ತು ಎಂಎಲ್ಎ ಇಬ್ಬರು ಸಮಾನ ಪಾಲುದಾರರು ಆಗಿರುವುದರಿಂದ ಎರಡನ್ನು ಜನತೆ ತಿರಸ್ಕರಿಸಬೇಕೆಂದು ಹೇಳಿದರು.

ಕಳೆದ 20 ವರ್ಷಗಳ ಹಿಂದೆತಮ್ಮ ತಾಯಿ ಮೊಟ್ಟಮ್ಮನವರು ಮಾಡಿದ ಅಭಿವೃದ್ಧಿ ಕೆಲಸಗಳ ನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ಕಾಂಗ್ರೇಸ್ಸೇತರ ಶಾಸಕರು ಆಡಳಿತ ನಡೆಸಿದ್ದು ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅನುದಾನದ ಕೊರತೆ ಮತ್ತು ಕಳಪೆ ಕಾಮಗಾರಿಯಿಂದ ಅಭಿವೃದ್ಧಿ ಕುಂಠಿತವಾಗಿದ್ದು ಈ ಬಾರಿ ಹೊಸಮುಖವಾಗಿರುವ ತಮಗೆ ಅವಕಾಶ ಮಾಡಿಕೊಡಬೇಕೆಂದು ಜನರನ್ನು ಕೇಳಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್ ಜಯರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ .ಜಿ ಸುರೇಂದ್ರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಣಜೂರು ಸುಬ್ರಾಯಗೌಡ, ವಕ್ತರರಾದ ಮರುಗುಂದ ಪ್ರಸನ್ನ, ಯುವ ಕಾಂಗ್ರೆಸ್ ಅಧ್ಯಕ್ಷ ದೀಕ್ಷಿತ್ ಕಣಚೂರು. ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಎಂ ಎನ್ ಅಶ್ವತ್ ,ವಸಂತಮ್ಮ ಮತ್ತಿತರರು ಹಾಜರಿದ್ದರು.

ಒಂದು ನಿಗೂಢ ಸಾವಿನ ಸುತ್ತ : ಗೃಹಪ್ರವೇಶಕ್ಕೆ ಕರೆಯಲು ಬಂದವರು ಹೆಣವಾಗಿದ್ದಾದರೂ ಹೇಗೆ ?

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ