October 5, 2024

ಇಡೀ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವೆಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕದ ಬಿ.ಜೆ.ಪಿ. ಸರ್ಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಮತದಾರರು ಜಾಗೃತ ಮನಸ್ಥಿತಿಯಿಂದ ಮತಚಲಾಯಿಸುವ ಮೂಲಕ ಈ ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಭಾರತ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಅವರು ನಿನ್ನೆ ಚಿಕ್ಕಮಗಳೂರಿನಲ್ಲಿ ನಡೆದ ಚಿಕ್ಕಮಗಳೂರು, ಶೃಂಗೇರಿ ಮತ್ತು ಮೂಡಿಗೆರೆ ಕ್ಷೇತ್ರಗಳ ಕಾಂಗ್ರೇಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ನಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಲಂಚ ತಿಂದು ತೇಗುತ್ತಿರುವವರ ಪರ ಪ್ರಚಾರ ಮಾಡುತ್ತಿದ್ದೀರಿ. ಬಿ.ಜೆ.ಪಿ. ಸರ್ಕಾರದಿಂದ ಯಾವುದೇ ಯೋಜನೆಗಳು ಕರ್ನಾಟಕಕ್ಕೆ ಬಂದಿಲ್ಲ. ಕೇವಲ ಘೋಷಣೆಗಳಲ್ಲಿಯೇ ಕಾಲಾಹರಣ ಮಾಡುತ್ತಿದ್ದಾರೆ.

ಬಿ.ಜೆ.ಪಿ.ಯವರು ಎಪ್ಪತ್ತು ವರ್ಷದಲ್ಲಿ ಕಾಂಗ್ರೇಸ್ ನವರು ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. 70 ವರ್ಷದಲ್ಲಿ ಕಾಂಗ್ರೇಸ್ ಏನು ಮಾಡದಿದ್ದರೆ ದೇಶ ಇಷ್ಟು ಅಭಿವೃದ್ಧಿ ಹೊಂದಿತ್ತಿತ್ತ. ದೇಶ ಸ್ವಾತಂತ್ರ್ಯ ಬಂದಾಗ ದೇಶ ಬಡತನ, ಅನಕ್ಷರತೆಯಿಂದ ಬಳಲುತ್ತಿತ್ತು. ಕಾಂಗ್ರೇಸ್ ಸರ್ಕಾರ ಜನರನ್ನು ಶಿಕ್ಷಿತರನ್ನಾಗಿ ಮಾಡಿದ್ದೇವೆ, ಜನರ ಜೀವನ ಮಟ್ಟ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗಿದೆ. ದೇಶವನ್ನು ಸುಭದ್ರವಾದ ಅಡಿಪಾಯದೊಂದಿಗೆ ಕಟ್ಟಿ ಬೆಳೆಸಿದ್ದೇವೆ.

ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಆರೋಗ್ಯ ಸೇವೆಯನ್ನು ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ಮೂಲಕ ಕಾಂಗ್ರೇಸ್ ಪಕ್ಷ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಬಿ.ಜೆ.ಪಿ.ಯವರಿಗೆ ಸುಳ್ಳು ಹೇಳುವುದು, ಮಾತಿನಲ್ಲೇ ಮರುಳು ಮಾಡುವುದು ಕರಗತವಾಗಿದೆ.
ಇಂದು ಗ್ಯಾಸ್, ಪೆಟ್ರೋಲ್, ಡೀಸೆಲ್, ರಸಗೊಬ್ಬರ, ದಿನಸಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ದಿನನಿತ್ಯದ ಬದುಕು ದುಸ್ತರವಾಗಿದೆ.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರಗಳು ಉತ್ತಮ ಆಡಳಿತ ನೀಡಿ ರಾಜ್ಯವು ದೇಶದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಪಡೆಯುವಂತೆ ಮಾಡಿತ್ತು. ಆದರೆ ಈಗ ಬಿ.ಜೆ.ಪಿ. ರಾಜ್ಯವನ್ನು 40 ಪರ್ಸೆಂಟ್ ಸರ್ಕಾರ ಎಂಬ ಹಣೆಪಟ್ಟಿ ಪಡೆಯುವಂತೆ ಮಾಡಿದೆ. ರಾಜ್ಯದಲ್ಲಿ ಜನರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಜನಪರ ಸರ್ಕಾರ ರಾಜ್ಯದಲ್ಲಿ ಆಡಳಿತ ಅಧಿಕಾರ ತರಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮೂರು ಕ್ಷೇತ್ರಗಳ ಕಾಂಗ್ರೇಸ್ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅಂಶುಮಂತ್, ಮುಖಂಡರಾದ ಬಿ.ಲ್. ಶಂಕರ್, ಶ್ರೀಮತಿ ಮೋಟಮ್ಮ, ಗಾಯತ್ರಿ ಶಾಂತೇಗೌಡ, ಎಂ.ಎಲ್. ಮೂರ್ತಿ, ಡಿ.ಎಲ್. ವಿಜಯಕುಮಾರ್, ಬಿ.ಎಂ. ಸಂದೀಪ್, ಎಂ.ಸಿ. ಶಿವಾನಂದಸ್ವಾಮಿ ಮುಂತಾದವರು ಇದ್ದರು.

ಈ ಸರ್ತಿ ನೀವೆಲ್ಲಾ ಸೇರಿ ಕಾಂಗ್ರೇಸ್ ಗೆ ಓಟ್ ಹಾಕ್ಬೇಕು : ಜೆ.ಡಿ.ಎಸ್. ನ ಎಸ್.ಎಲ್. ಬೋಜೇಗೌಡರ ವಿಡಿಯೋ ವೈರಲ್

 

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ