October 5, 2024

ದೇವಸ್ಥಾನ ಎಂದರೆ ಅದು ಭಕ್ತರ ಇಷ್ಟಾರ್ಥ ಬೇಡಿಕೆಯ ಕೇಂದ್ರವಲ್ಲ, ಅದೊಂದು ಆದ್ಯಾತ್ಮಿಕ ಶಕ್ತಿ ಕೇಂದ್ರ ಎಂದು ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನಮ್ ಇಲ್ಲಿಯ ಶ್ರೀ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಜಿ ಹೇಳಿದರು.

ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಇಂದು ಪರಕೀಯರ ದಾಳಿಯಿಂದ ಭಾರತೀಯ ವಿದ್ಯಾಲಯ, ವೈದ್ಯಾಲಯ, ಗ್ರಂಥಾಲಯ ಅನಾಥಲಯ, ದೇವಾಲಯಗಳನ್ನು ನಮ್ಮ ಸಂಸ್ಕøತಿಯನ್ನು ನಾಶಪಡಿಸಿ ಪಾಶ್ಚಾತ್ಯ ಸಂಸ್ಕøತಿಯನ್ನು ಬಿತ್ತಿದ್ದಾರೆ. ಆಂಗ್ಲ ವ್ಯಾಮೋಹದಿಂದ ನಮ್ಮ ಸಂಸ್ಕøತಿಯನ್ನು ಮರೆಯುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕøತಿಯನ್ನು ಬೆಳೆಸಿಕೊಳ್ಳುವ ಬದಲು ನಮ್ಮ ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸಿ ಎಂದು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ಕೇಂದ್ರೀಯ ಸಂಸ್ಕøತ ವಿಶ್ವವಿದ್ಯಾನಿಲಯ ರಾಜೀವಗಾಂಧಿ ಪರಿಸರ ಶೃಂಗೇರಿ ಇಲ್ಲಿಯ ಮೀಮಾಂಸ ವಿಭಾಗಾಧ್ಯಕ್ಷರು ಡಾ.ಸುಭ್ರಾಯ ವಿ.ಭಟ್ ಮಾತನಾಡಿ ಧರ್ಮ ಅನ್ನುವುದು ನಿತ್ಯ ಸುಖಕ್ಕೆ ಬುನಾಧಿ, ಧರ್ಮದಿಂದ ಯಾವುದನ್ನು ಸಾಧನೆ ಮಾಡುತ್ತೇವೆಯೇ ಅದು ಸುಖ. ನಮ್ಮ ಇಂದ್ರೀಯಗಳಿಗೆ ಸಂಸ್ಕಾರವನ್ನು ಕೊಡುವ ವ್ಯವಸ್ಥೆ ಇಂದಿನ ಶಿಕ್ಷಣ ಕ್ರಮದಲ್ಲಿ ಇಲ್ಲ. ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ನಮ್ಮ ಪ್ರವೃತವಾಗುತ್ತದೆ. ಆದ್ದರಿಂದ ನಮ್ಮ ಸಂಪಾದನೆ ಪ್ರಾಮಾಣಿಕವಾಗಿರಬೇಕು ಎಂದು ಹೇಳಿದರು.

ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ ದೇವಸ್ಥಾನಗಳು ಬದುಕಿನ ಕೇಂದ್ರ ಬಿಂದುಗಳು. ಶಿಕ್ಷಣ, ಕಲೆ, ಸಂಗೀತಗಳು ಹುಟ್ಟಿಕೊಂಡು ಬೆಳೆದು ಬಂದಿದ್ದು ದೇವಸ್ಥಾನಗಳಲ್ಲಿ. ದೇವಸ್ಥಾನಗಳೂ ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಿವೆ. ಸಂಸ್ಕøತಿ ಅನ್ನುವುದು ನೈತಿಕ ಮೌಲ್ಯಗಳಿಗೆ ಬೆಲೆಕೊಟ್ಟಿದೆ, ಆದರ್ಶಗಳಿಗೆ ಬೆಲೆ ಕೊಟ್ಟಿದೆ ಹೊರತು ಯಾವುದೇ ಜಾತಿಗೆ ಬೆಲೆ ಕೊಟ್ಟಿಲ್ಲ. ಇಂದು ನಾವು ಭಾರತೀಯತೆಯ ಪುನರುತ್ಥಾನದಲ್ಲಿ ಇದ್ದೇವೆ. ಇದೇ ವೇಗದಲ್ಲಿ ಭಾರತೀಯ ಪುನರುತ್ಥಾನ ಮುಂದುವರೆಯಬೇಕು ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್ ನಿವೃತ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಮಾತನಾಡಿ ದೇವಸ್ಥಾನಕ್ಕೆ ಬಂದ ಭಕ್ತಾಧಿಗಳು ತಮ್ಮ ಬೇಡಿಕೆಯ ಪ್ರಾರ್ಥನೆಯೊಂದಿಗೆ ಪರಿಸರ ಕಾಳಜಿಯೂ ಇರಲಿ. ಪರಿಸರ ಪ್ರೇಮಿ ನಾಗರೀಕ ಭಕ್ತರಾಗಬೇಕು ಎಂದು ಹೇಳಿದರು.

ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ 50 ವರ್ಷಗಳ ಹಿಂದೆ ಇದ್ದ ಕಷ್ಟದ ದಿನಗಳು ಜೀವನದಲ್ಲಿ ನಷ್ಟಗಳು ಆಗದೆ ರೀತಿಯಲ್ಲಿ ಅನ್ನಪೂರ್ಣೇಶ್ವರಿ ಕಾಪಾಡಿದ್ದಾಳೆ. ಆದ್ದರಿಂದ ಇಂದು ಪುನಃ ಪ್ರತಿಷ್ಠಾ ಸ್ವರ್ಣಾಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹೊರನಾಡು ಕ್ಷೇತ್ರಕ್ಕೆ ತಾಯಿಯ ದರ್ಶನ ಪಡೆದು ಹೊರಟವರಲ್ಲಿ ತಮ್ಮ ಜೀವನದಲ್ಲಿ ಹೊಸತನ ಬರಲಿ ಎಂದು ಹೇಳಿದರು.

ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮಾತನಾಡಿ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಅಂತಿಮವಾಗಿ ಸಂತೋಷವನ್ನು ಕಾಣಲು ಆಧ್ಯಾತ್ಮಿಕ ಮುಖ್ಯವಾಗಿದೆ. ದೇಶದಲ್ಲಿ ಸಂಸ್ಕøತಿ, ಧಾರ್ಮಿಕತೆ, ರಾಷ್ಟ್ರೀಯತೆಯನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರದ ಸೇವಾ ಸಾಧಕರಾದ ಕೃಷ್ಣಮೂರ್ತಿ, ವೆಂಕಟೇಶ್ ಭಟ್, ಸಾವಿತ್ರಿಯಮ್ಮ, ನಾಗವೇಣಿಯಮ್ಮ, ಸುಬ್ಬಣ್ಣ, ಶರತ್, ಗಿರಿಜಮ್ಮ ಇವರನ್ನು ಗೌರವಿಸಲಾಯಿತು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜೇಂದ್ರ ಹಿತ್ಲುಮಕ್ಕಿ, ಚಿಕ್ಕನಕುಡಿಗೆ ಶ್ರೀಕ್ಷೇತ್ರ ದೇವಗಿರಿ ಜೈನ ಬಸದಿ ಅಧ್ಯಕ್ಷ ಸುಕುಮಾರ್ ಜೈನ್ ನಡ್ಲುಮನೆ, ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷನ್, ದೇವಸ್ಥಾನದ ಟ್ರಸ್ಟಿಗಳಾದ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ರಾಜಲಕ್ಷ್ಮೀ ಬಿ ಜೋಷಿ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ