October 5, 2024

ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಬಿಜೆಪಿ ಕಾರ್ಯಕರ್ತರ ಪ್ರೇರಿತ ಪಕ್ಷ. ಹಾಗಾಗಿ ಕಾರ್ಯಕರ್ತರ ಶಕ್ತಿಯಿಂದಲೇ ಚುನಾವಣೆ ಗೆಲ್ಲುತ್ತಿರುವಾಗ ಪಕ್ಷದಿಂದ ಹೊರ ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮೂಡಿಗೆರೆಯಲ್ಲಿ ಪಕ್ಷನಿಷ್ಠ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ದೀಪಕ್ ದೊಡ್ಡಯ್ಯನವರು ಅನೇಕ ವರ್ಷಗಳಿಂದ ಬಿ.ಜೆ.ಪಿ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಎಂಎಲ್‍ಸಿ ಚುನಾವಣೆಯಲ್ಲಿ ಎಂ.ಪಿ. ಕುಮಾರಸ್ವಾಮಿಯವರು ಪಕ್ಷ ವಿರೋಧಿ ಚುಟುವಟಿಕೆ ನಡೆಸಿದ್ದಾರೋ ಇಲ್ಲವೋ ಎಂಬುದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಟಿಕೇಟ್ ತಪ್ಪಲು ನಾನು ಮತ್ತು ಸಿ.ಟಿ.ರವಿಯವರು ಕಾರಣ ಎಂದು ಆರೋಪಿಸುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿ ಪಕ್ಷದ ತತ್ವ ಸಿದ್ದಾಂತದ ಬಗ್ಗೆ ಅರಿವಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಕಚೇರಿಗೆ ಬರುತ್ತಲೇ ಇರಲಿಲ್ಲ. ಪಕ್ಷಕ್ಕೆ ಮುಜುಗರ ಆಗುವಂತಹ ಚಟುವಟಿಕೆಯನ್ನು ಗಮನಿಸಿ, ನಿಷ್ಟೆಯಿಂದ ಕೆಲಸ ಮಾಡಿದ ದೀಪಕ್ ದೊಡ್ಡಯ್ಯ ಅವರಿಗೆ ಹೈ ಕಮಾಂಡ್ ಟಿಕೇಟ್ ನೀಡಿದೆ. ಹೈ ಕಮಾಂಡ್ ನಿರ್ಧಾರದಂತೆ ದೀಪಕ್ ದೊಡ್ಡಯ್ಯ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಸಿದ್ಧವಾಗಿದ್ದಾರೆಂದು ಹೇಳಿದರು.

ಕುಮಾರಸ್ವಾಮಿ ಈಗ ದಲಿತರ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಅವರು ಶಾಸಕರಾಗಿದ್ದಾಗ ಎಂದಿಗೂ ದಲಿತರ ಏಳಿಗೆಗೆ ಕೆಲಸ ಮಾಡಿಲ್ಲ. ಜಾತಿರಾಜಕೀಯ ಮಾಡಿ ದಲಿತರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಮೂಡಿಗೆರೆ ಕ್ಷೇತ್ರದಲ್ಲಿ ದಲಿತರು ಪ್ರಜ್ಞಾವಂತರಿದ್ದಾರೆ. ಅವರು ಸರಿತಪ್ಪುಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಮೂಡಿಗೆರೆಯಲ್ಲಿ ದಲಿತರು ಮಾತ್ರ ಚುನಾವಣೆ ನಿಲ್ಲಲು ಸಾಧ್ಯ. ದೀಪಕ್ ದೊಡ್ಡಯ್ಯ ಸಹ ದಲಿತರೆ. ಅವರೊಬ್ಬರಿಗೆ ಅವಕಾಶ ಸಿಗಬೇಕು ಎಂಬುದು ಸ್ವಾರ್ಥವಾಗುತ್ತದೆ. ಮೂರು ಬಾರಿ ಶಾಸಕರಾಗಿದ್ದ ಅವರು ಮತ್ತೊಬ್ಬ ದಲಿತರಿಗೆ ಅವಕಾಶ ಸಿಕ್ಕಾಗ ಅವರ ಪರವಾಗಿ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಪಕ್ಷವನ್ನೇ ತ್ಯಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.

1999 ರಲ್ಲಿ ಅವರು ಕಾಂಗ್ರೇಸ್ ನಿಂದ ಬಂದಾಗ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಸೋತರು ಸಹ ಕೈಬಿಡದೇ ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿತು. ಆದರೆ ಅವರು ಪಕ್ಷದ ಯಾವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳದೇ ತಮ್ಮದೇ ಗುಂಪು ಕಟ್ಟಿಕೊಂಡು ರಾಜಕೀಯ ಮಾಡಿದರು. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಬೇರೆಯವರ ಮೇಲೆ ಆರೋಪ ಮಾಡುತ್ತಾ ಕಾಲಾಹರಣ ಮಾಡಿದ್ದಾರೆ. ಇಂದು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಈಗ ಹೊಸ ಹುರುಪಿನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪಕ್ಷದಿಂದ ಯಾರೂ ಹೊರಹೋಗದಂತೆ ಮನವೊಲಿಸುವ ಕೆಲಸ ಮಾಡಲಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ, ಬಿಜೆಪಿ ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್.ರಘು, ಆಲ್ದೂರು ಮಂಡಲ ಅಧ್ಯಕ್ಷ ದಿನೇಶ್ ಮುಗುಳುವಳ್ಳಿ, ಎಂ.ಆರ್.ಜಗದೀಶ್,  ಕೆ.ಸಿ.ರತನ್, ಅನುಕುಮಾರ್, ಮನೋಜ್ ಹಳೆಕೋಟೆ, ಪಂಚಾಕ್ಷರಿ, ವಿನೋಧ್ ಕಣಚೂರು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ