October 5, 2024

ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಲು ಚುನಾವಣಾ ಆಯೋಗ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲಿ ಅಕ್ರಮ ನಡೆದರೂ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ಕೆ.ಎನ್.ರಮೇಶ್ ಹೇಳಿದರು.

ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಪ್ಲೇಯಿಂಗ್ ಸ್ಕಾಡ್, ಪೊಲೀಸ್ ಸಿಬ್ಬಂದಿ ವರ್ಗಕ್ಕೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಹಣ ಸೇರಿದಂತೆ ಸುಮಾರು 11 ಕೋಟಿಯಷ್ಟು ಮದ್ಯ, ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಚೆಕ್ ಪೋಸ್ಟ್‍ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ತಮ್ಮ ಕಚೇರಿಯಲ್ಲಿಯೇ ಗಮನಿಸುವ ಕಾರ್ಯ ನಡೆದಿದೆ. ಮೊಬೈಲ್‍ನಲ್ಲಿ ಸಿ.ವಿಜಿಲ್ ಎಂಬ ಆಪ್ ಡೌನ್‍ಲೋಡ್ ಮಾಡಿಕೊಂಡು ಚುನಾವಣೆ ಅಕ್ರಮ ಬಗ್ಗೆ ದೂರು ನೀಡಬಹುದು. ಅಲ್ಲದೇ ವೀಕ್ಷಕರ ಬಳಿಯೂ ದೂರು ನೀಡಬಹುದು. ದೂರು ನೀಡಿದ ವ್ಯಕ್ತಿ ಪರಿಚಯ ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ 170653 ಮತದಾರರಿದ್ದಾರೆ. ಈ ಬಾರಿ 2519 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 5152 ಮಂದಿಗೆ ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿದೆ. 209 ಪೋಲಿಂಗ್ ಸ್ಟೇಷನ್, 231 ಮತಗಟ್ಟೆಯಿದೆ ಎಂದ ಅವರು, ಅಭ್ಯರ್ಥಿ ಮೇಲೆ ಕ್ರಿಮಿನಲ್ ಪ್ರಕರಣವಿದ್ದರೆ 3 ಬಾರಿ ಪತ್ರಿಕೆಯಲ್ಲಿ ಪ್ರಕಟಣೆ ಮಾಡಬೇಕು. ಚುನಾವಣೆ ಖರ್ಚಿನ ಬಗ್ಗೆ ವೀಡಿಯೋ, ಮಾಧ್ಯಮಗಳ ವರದಿ ಗಮನಿಸಿ ಅಭ್ಯರ್ಥಿಗೆ ಖರ್ಚು ನಮೂದಿಸಲಾಗುವುದು ಎಂದು ಹೇಳಿದರು.

ಎಸ್‍ಪಿ ಉಮಾ ಪ್ರಶಾಂತ್ ಮಾಡನಾಡಿ, ಸಾಮಾಜಿಕ ಜಾಲಾ ತಾಣದಲ್ಲೂ ಕೂಡ ಅಕ್ರಮದ ಬಗ್ಗೆ ಮಾಹಿತಿ ಬರುತ್ತಿರುತ್ತದೆ. ಅದನ್ನೂ ಗಮನಿಸಿ ಮೂಡಿಗೆರೆಯಲ್ಲಿ 2 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಒಟ್ಟು 17 ಸೂಕ್ಷ್ಮ ಪ್ರದೇಶವಿದ್ದು, ಮತದಾರರು ನಿರ್ಭಯವಾಗಿ ಮತ ಚಲಾಯಿಸಲು ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನದ ಹಕ್ಕು ಚಲಾಯಿಸಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪಟ್ಟಣದ ಬಸ್ ನಿಲ್ದಾಣದ ಎದುರು ವಿಕಲಚೇತನರು, ಅಂಗನವಾಡಿ ಕಾರ್ಯಕರ್ತಯರು ಹಾಗೂ ಆಯೋಗದ ಅಧಿಕಾರಿಗಳಿಂದ ಚುನಾವಣೆಯಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ನೀಡಿದರು. ಬೀದಿ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿ.ಪಂ. ಸಿಇಒ ಪ್ರಭು, ಉಪ ವಿಭಾಗಾಧಿಕಾರಿ ಎಚ್.ಡಿ.ರಾಜೇಶ್ , ತಹಸೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ.ಇಒ ಹರ್ಷಕುಮಾರ್, ಸಿಪಿಐ ಸೋಮೇಗೌಡ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ