October 5, 2024

ಕೃಷಿಕ ಪತ್ರಿಕೆ ಸಂಪಾದಕ ಅಚ್ಚನಹಳ್ಳಿ ಸುಚೇತನ ಅವರು ರಚಿಸಿರುವ ಕಾಳುಮೆಣಸಿನ ಕರ್ಮಯೋಗಿ- ಡಾ. ವೇಣುಗೋಪಾಲ್ ಕೃತಿ ಲೋಕಾರ್ಪಣೆಗೊಂಡಿದೆ.

ಭಾನುವಾರ ಚಿಕ್ಕಮಗಳೂರು ಎ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕೃತಿಯನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಅವರು ಬಿಡುಗಡೆ ಮಾಡಿದರು. ಎ.ಐ.ಟಿ. ಕಾಲೇಜು ಪ್ರಾಂಶುಪಾಲರಾದ ಡಾ. ಸುಬ್ಬರಾಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ವೇಣುಗೋಪಾಲ್, ಡಾ. ಅಂಕೇಗೌಡ, ಡಾ. ಹೇಮ್ಲಾನಾಯಕ್, ಕೃಷಿಕ ಪತ್ರಿಕೆ ಪ್ರಕಾಶಕ ದಿನೇಶ್ ದೇವರುಂದ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆಯ ನಂತರ ಡಾ. ವೇಣುಗೋಪಾಲ್ ಅವರು ಕಾಳುಮೆಣಸು ವೈಜ್ಞಾನಿಕ ಕೃಷಿಯ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು.

ಈ ಕೃತಿಯು ಕೃಷಿ ತಜ್ಞ, ಕಾಳುಮೆಣಸಿನ ಮಾಂತ್ರಿಕ ಎಂದೇ ಹೆಸರು ಮಾಡಿರುವ, ಸಂಶೋಧಕರಾದ ಡಾ. ವೇಣುಗೋಪಾಲ್ ಅವರ ವ್ಯಕ್ತಿಪರಿಚಯ ಮತ್ತು ಅವರು ಕಾಳುಮೆಣಸು ಬೆಳೆಯಲ್ಲಿ ಕೈಗೊಂಡ ವಿಶಿಷ್ಟ ಪ್ರಯೋಗಗಳು ಜೊತೆಗೆ ಸಂಬಾರ ಬೆಳೆಗಳ ವೈಜ್ಞಾನಿಕ ಕೃಷಿ ಮಾರ್ಗದರ್ಶನವನ್ನು ಒಳಗೊಂಡಿದೆ.

202 ಪುಟಗಳ ಈ ಕೃತಿಯು ಆಕರ್ಷಕ ವಿನ್ಯಾಸದಲ್ಲಿ ಮುದ್ರಣವಾಗಿದ್ದು ಕಾಳುಮೆಣಸು ಕೃಷಿಯ ಬಗ್ಗೆ ಸಮಗ್ರವಾದ ಮತ್ತು ವೈಜ್ಞಾನಿಕವಾದ ಮಾಹಿತಿಗಳ ಹೂರಣವನ್ನು ಹೊಂದಿದೆ.
ಈ ಹಿಂದೆ ಕಪ್ಪುಬಂಗಾರ, ವೈರಸ್ ಎಂಬ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದ ಅಚ್ಚನಹಳ್ಳಿ ಸುಚೇತನ ಅವರು ಇದೀಗ ಮತ್ತೊಂದು ವಿಶಿಷ್ಟ ಕೃತಿಯನ್ನು ಕೃಷಿಕ ಸಮುದಾಯಕ್ಕೆ ನೀಡಿದ್ದಾರೆ.

“ಕಾಳುಮೆಣಸಿನ ಕರ್ಮಯೋಗಿ- ಡಾ. ವೇಣುಗೋಪಾಲ್”    ಕೃತಿಗಾಗಿ ಸಂಪರ್ಕಿಸಿ : 9482330176, 8277062933

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ