October 5, 2024

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ನಡೆ ದಿನದಿಂದ ದಿನಕ್ಕೆ ನಿಗೂಢವಾಗಿ ಸಾಗುತ್ತಿದೆ. ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿ ವಿಚಾರದಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿವೆ.

ಹಾಲಿ ಕ್ಷೇತ್ರದಲ್ಲಿ ಶಾಸಕ ಸ್ಥಾನವನ್ನು ಹೊಂದಿರುವ ಬಿ.ಜೆ.ಪಿ. ಪಕ್ಷ ಗೊಂದಲದ ಗೂಡಾಗಿದೆ.

ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಪರ ಮತ್ತು ವಿರುದ್ಧ ಗುಂಪುಗಳು ಸೃಷ್ಟಿಯಾಗಿವೆ. ಕುಮಾರಸ್ವಾಮಿಯವರು ಬಿ.ಜೆ.ಪಿ. ಪಕ್ಷದಲ್ಲಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೊಂದಿಗೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಆದರೆ ಅವರ ವಿರೋಧಿ ಬಣ ಅವರಿಗೆ ಟಿಕೆಟ್ ನೀಡಬಾರದು ಎಂದು ಪ್ರಬಲವಾಗಿ ಒತ್ತಾಯಿಸುತ್ತಿದೆ.

ಕ್ಷೇತ್ರದಲ್ಲಿ ಈ ಬಾರಿ ಐದಾರು ಮಂದಿ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ಟಿಕೆಟ್ ಪಡೆಯಲು ಲಾಭಿ ನಡೆಸುತ್ತಿದ್ದಾರೆ.

2008ರಿಂದಲೂ ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಜೆ.ಪಿ.ಯಿಂದ ಕುಮಾರಸ್ವಾಮಿಯವರಿಗೆ ಪರ್ಯಾಯವಾಗಿ ಕೇಳಿಬರುತ್ತಿದ್ದ ಹೆಸರು ದೀಪಕ್ ದೊಡ್ಡಯ್ಯನವರದ್ದು. ದೀಪಕ್ ದೊಡ್ಡಯ್ಯ  ಇಲ್ಲಿ ಬಿ.ಜೆ.ಪಿ.ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದ ತುಂಬಾ ಸುತ್ತಾಡುತ್ತಿದ್ದಾರೆ. ಬಹಳಷ್ಟು ಜನಸಂಪರ್ಕ, ಕ್ಷೇತ್ರ ಪರಿಚಯ ಮಾಡಿಕೊಂಡಿರುವ ಅವರು ಬಿ.ಜೆ.ಪಿ.ಯಲ್ಲಿ ಕುಮಾರಸ್ವಾಮಿಯವರಿಗೆ ಟಿಕೆಟ್ ವಿಚಾರದಲ್ಲಿ ಸ್ಪರ್ಧೆ ನೀಡುತ್ತಾ ಬಂದಿದ್ದರು.

ಆದರೆ ಈ ಬಾರಿ ಅನೇಕ ಮಂದಿ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬೇಡಿಕೆ ಇಡುತ್ತಿದ್ದಾರೆ.

ಡಾ.ಶಿವಪ್ರಸಾದ್, ವಿಜಯಕುಮಾರ್, ಸುಜಿತ್, ಜಯಪಾಲ್, ಸುಷ್ಮಾ ಹೀಗೆ ಸಾಲು ಸಾಲು ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ತಮ್ಮದೇ ಬೆಂಬಲಿಗರ ಜೊತೆ ಸೇರಿ ಪ್ರವಾಸದಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ಬಿ.ಜೆ.ಪಿ. ವಲಯದಲ್ಲಿ ಕೇಳಿಬರುತ್ತಿದ್ದ ಹೆಸರು ಅದು ನರೇಂದ್ರ ಅವರದ್ದು. ನರೇಂದ್ರ ಜಿ ಎಂದೇ ಸಂಘಪರಿವಾರ ಹಾಗೂ ಬಿ.ಜೆ.ಪಿ. ವಲಯದಲ್ಲಿ ಗುರುತಿಸಿಕೊಂಡಿರುವ ನರೇಂದ್ರ ಅವರು ತಾವು ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ನೌಕರಿಗೆ ಸ್ವಯಂ ನಿವೃತ್ತಿ ಪಡೆದು ಇದೀಗ ನೇರವಾಗಿ ಬಿ.ಜೆ.ಪಿ.ಪಕ್ಷವನ್ನು ಸೇರಿದ್ದಾರೆ.  ಚಿಕ್ಕಮಗಳೂರು ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರನ್ನಾಗಿಯೂ ಅವರನ್ನು ನೇಮಕ ಮಾಡಲಾಗಿದೆ.

ಚಿಕ್ಕಮಗಳೂರು ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ಲೈಬ್ರರಿಯನ್ ಆಗಿದ್ದ ನರೇಂದ್ರ ಈಗ್ಗೆ ಒಂದೆರಡು ವರ್ಷಗಳಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಕಟ್ಟಾ ಆರ್.ಎಸ್.ಎಸ್. ಸ್ವಯಂ ಸೇವಕರಾಗಿ ಸಂಘದ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅವರು ಆರ್.ಎಸ್.ಎಸ್. ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಪರ್ಕ ಹೊಂದಿದ್ದಾರೆ.

ಅವರನ್ನು ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಪಕ್ಷದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಂದು ವಲಯದಲ್ಲಿ ಕಸರತ್ತು ನಡೆಸುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿದ್ದವು. ಇದೀಗ ಅವರು ಉತ್ತಮ ಸಂಬಳ ಬರುತ್ತಿದ್ದ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಬಿ.ಜೆ.ಪಿ. ಪಕ್ಷವನ್ನು ಸೇರಿದ್ದಾರೆ. ನರೇಂದ್ರ ಅವರ ಈ ನಡೆ ಈಗ ಮೂಡಿಗೆರೆ ಕ್ಷೇತ್ರದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬಿ.ಜೆ.ಪಿ. ಮೂಡಿಗೆರೆ ಯಲ್ಲಿ ಯಾರಿಗೇ ಮಣೆಹಾಕುತ್ತದೆ. ಹಾಲಿ ಶಾಸಕ ಕುಮಾರಸ್ವಾಮಿಯವರಿಗೆ ಮನ್ನಣೆ ನೀಡುತ್ತದಾ ? ಅಥವಾ ಹೊಸ ಮುಖವನ್ನು ಕಣಕ್ಕಿಳಿಸುತ್ತದಾ ? ಎಂಬುದರ ಮೇಲೆ ಕ್ಷೇತ್ರದ ಒಟ್ಟಾರೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಬಿ.ಜೆ.ಪಿ ವರಿಷ್ಟರಿಗೆ ಬಿಸಿ ತುಪ್ಪವಾಗಿರುವ ಮೂಡಿಗೆರೆ ಕ್ಷೇತ್ರದಲ್ಲಿ ರಾಜಕೀಯ ದಿನದಿಂದ ದಿನಕ್ಕೆ ನಿಗೂಢವಾಗಿ ಸಾಗುತ್ತಿದೆ. ರಾಜಕೀಯ ಪಕ್ಷಗಳ ನಡೆಯ ಬಗ್ಗೆ ಮತದಾರರು ಸಹ ಬಹು ಕುತೂಹಲದಿಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ