October 5, 2024

ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರಿಗೆ ಇಂದು ಕೊಂಚ ನಿರಾಳತೆ ಸಿಕ್ಕಿದೆ.

ಹೂವಪ್ಪಗೌಡ ಎಂಬುವವರು ಶಾಸಕ ಕುಮಾರಸ್ವಾಮಿಯವರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಫೆಬ್ರುವರಿ 13ರಂದು ತನ್ನ ತೀರ್ಪಿನಲ್ಲಿ ಕುಮಾರಸ್ವಾಮಿಯವರಿಗೆ ಶಿಕ್ಷೆ ವಿಧಿಸಿತ್ತು. ಒಟ್ಟು 8 ಚೆಕ್ ಬೌನ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿಯವರಿ ತಲಾ 6 ತಿಂಗಳಂತೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 30 ದಿನಗಳ ಒಳಗಾಗಿ ಹೂವಪ್ಪಗೌಡರಿಗೆ 1 ಕೋಟಿ 38 ಲಕ್ಷದ 65 ಸಾವಿರ ಹಣವನ್ನು ಮರುಪಾವತಿ ಮಾಡಬೇಕು ಇಲ್ಲದೇ ಇದ್ದರೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತು.

ಆದರೆ 30 ದಿನಗಳ ಒಳಗೆ ಕುಮಾರಸ್ವಾಮಿಯವರಿಂದ ಯಾವುದೇ ಉತ್ತರ ಬಾರದೇ ಇದ್ದಾಗ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಇದೀಗ ಜಾಮೀನುರಹಿತ ಬಂಧನ ವಾರಂಟ್ ವಿರುದ್ಧ ಕುಮಾರಸ್ವಾಮಿಯವರು ತಮ್ಮ ವಕೀಲರ ಮೂಲಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಅವರ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್ ಗೆ ತಡೆ ನೀಡಿದೆ.

ತೀರ್ಪಿನಲ್ಲಿ ನೀಡಿರುವ ಮೊತ್ತದಲ್ಲಿ ಶೇಕಡ 20 ರಷ್ಟು ಮೊತ್ತವನ್ನು 60 ದಿನಗಳ ಒಳಗಾಗಿ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂಬ ಷರತ್ತಿನೊಂದಿಗೆ ರೂ. 50,000-00 ಮೊತ್ತದ ವೈಯುಕ್ತಿಕ ಬಾಂಡ್ ಮೇಲೆ ಕುಮಾರಸ್ವಾಮಿಯರಿಗೆ ನ್ಯಾಯಾಲಯ ಬಂಧನ ವಾರಂಟ್ ನಿಂದ ವಿನಾಯಿತಿ ನೀಡಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ