October 5, 2024

ಐಪಿಎಲ್ ಮಾದರಿಯಲ್ಲಿ ಅಮೇರಿಕಾದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ನ್ಯೂಯಾರ್ಕ್ ತಂಡಕ್ಕೆ  ನಾಸ್ತುಶ್ ಕೆಂಜಿಗೆ (Nosthush Kenjige) ಆಯ್ಕೆಯಾಗಿದ್ಧಾರೆ.

ಅಮೇರಿಕಾದ ಮೇಜರ್ ಲೀಗ್ ಟಿ-20 ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಸೆಣಸಲಿವೆ. ಅದರಲ್ಲಿ ನ್ಯೂಯಾರ್ಕ್ ತಂಡವನ್ನು ನಮ್ಮ ಭಾರತ ಮೂಲದ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಪಡೆದುಕೊಂಡಿದೆ.

ಈಗಾಗಲೆ 6 ತಂಡಗಳು ಅಮೇರಿಕಾದ ತಲಾ 9 ಆಟಗಾರರನ್ನು ಆಯ್ಕೆಮಾಡಿವೆ. ಉಳಿದ ಸ್ಥಾನಗಳಿಗೆ ಇತರೆ ಅಂತರಾಷ್ಟ್ರೀಯ ತಂಡಗಳ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. 2023 ರ ಜುಲೈ 13ರಿಂದ ಅಮೇರಿಕಾದ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದೆ.

ಎತ್ತಣ ಅಮೇರಿಕಾ, ಎತ್ತಣ ಕ್ರಿಕೆಟ್, ಎತ್ತಣ ಕೆಂಜಿಗೆ !! ನಿಜಕ್ಕೂ ಆಶ್ಚರ್ಯವಾಗಬಹುದಲ್ಲ. ಹೌದು ಅಮೇರಿಕಾದ ಹೆಸರು ಕ್ರಿಕೆಟ್ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆಯಷ್ಟೇ. ಆದರೆ ಇತ್ತೀಚಿನ ದಿನಗಳಲ್ಲಿ ಅಮೇರಿಕಾ ಕ್ರಿಕೆಟ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಟಿ-20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳಿಗೆ ಆಯ್ಕೆಯಾಗಿ, ಮುಖ್ಯ ಭೂಮಿಕೆಗೆ ಬರಲು ಸೆಣಸಾಡುತ್ತಿದೆ. ಅಮೇರಿಕಾ ರಾಷ್ಟ್ರೀಯ ತಂಡ ಕ್ರಿಕೆಟ್ ನಲ್ಲಿ ಮಾಡುತ್ತಿರುವ ಸಾಧನೆಯ ಹಿಂದೆ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಲದ ಯುವ ಉದಯೋನ್ಮುಖ ಆಟಗಾರ ನಾಸ್ತುಶ್ ಕೆಂಜಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಅಮೇರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿರುವ ನಾಸ್ತುಶ್ ಕೆಂಜಿಗೆ ಅಮೇರಿಕಾ ಕ್ರಿಕೆಟ್‍ಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದೀಗ ಭಾರತದ ಐ.ಪಿ.ಎಲ್. ಮಾದರಿಯಲ್ಲಿ ಅಮೇರಿಕಾದ ಆಯೋಜಿಸುತ್ತಿರುವ ಎಂ.ಎಲ್.ಜಿ(ಮೇಜರ್ ಲೀಗ್ ಕ್ರಿಕೆಟ್) ಪಂದ್ಯಾವಳಿಯಲ್ಲಿ ನಾಸ್ತುಶ್ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ನ್ಯೂಯಾರ್ಕ್ ತಂಡದ ಒಡೆತನವನ್ನು ಪ್ರತಿಷ್ಠಿತ ಐ.ಪಿ.ಎಲ್. ಪ್ರಾಂಚೈಸಿ ಮುಂಬೈ ಇಂಡಿಯನ್ಸ್ ಪಡೆದುಕೊಂಡಿದೆ.

ನಾಸ್ತುಶ್ ನಮ್ಮ ಭಾರತ ಮೂಲದವರು ಅದರಲ್ಲೂ ನಮ್ಮ ಚಿಕ್ಕಮಗಳೂರು ಜಿಲ್ಲೆಯವರು ಎಂಬುದು ವಿಶೇಷ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಸಾಹಿತಿಗಳಾದ ಪ್ರದೀಪ್ ಕೆಂಜಿಗೆ ಮತ್ತು ಶ್ರೀಮತಿ ಶೃತಿಕೀರ್ತಿ ದಂಪತಿಗಳ ಪುತ್ರ.

ಅಮೇರಿಕಾದಲ್ಲಿ ನೆಲೆಸಿರುವ ನಾಸ್ತುಶ್ ಕ್ರಿಕೆಟ್ ಎಡೆಗೆ ಆಸಕ್ತಿ ಹೊಂದಿ, ಸತತ ಪರಿಶ್ರಮದಿಂದ  ಸಾಧನೆ ಮಾಡುತ್ತಾ ಪ್ರಸ್ತುತ ಯುಎಸ್‍ಎ(ಅಮೇರಿಕಾ) ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ. ಅಮೇರಿಕಾ ತಂಡವನ್ನು ಕಳೆದ 5 ವರ್ಷಗಳಿಂದ ಸತತವಾಗಿ ಪ್ರತಿನಿಧಿಸುತ್ತಿರುವ ನಾಸ್ತುಶ್ ತಂಡದ ಪ್ರಮುಖ ಅಲ್ರೌಂಡರ್ ಆಟಗಾರರಾಗಿದ್ದಾರೆ.

ಎಡಗೈ ಮಧ್ಯಮವೇಗದ ಬೌಲರ್ ಆಗಿರುವ ನಾಸ್ತುಶ್ ಪ್ರಸ್ತುತ ಅಮೇರಿಕಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಜೊತೆಗೆ ಬ್ಯಾಟಿಂಗ್ ನಲ್ಲಿಯೂ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ.

32 ರ ಹರೆಯದ ನಾಸ್ತುಶ್ 2019 ರಲ್ಲಿ ಯು.ಎ.ಇ. ವಿರುದ್ಧ ಶಾರ್ಜಾದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣ ಮಾಡಿದ್ದು ಇದುವರೆಗೂ ಹಲವಾರು ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಅಮೇರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ.

ಇತ್ತೀಚೆಗೆ ಅಮೇರಿಕಾ ತಂಡ ಬೆಂಗಳೂರಿನಲ್ಲಿ ವಿಶೇಷ ತರಬೇತಿಗಾಗಿ ಆಗಮಿಸಿತ್ತು. ಆಗ ಅಮೇರಿಕಾ ತಂಡ ಮತ್ತು ಕರ್ನಾಟಕ ತಂಡಗಳ ನಡುವೆ ನಡೆದ ಟಿ-20 ಪಂದ್ಯದಲ್ಲಿ ನಾಸ್ತುಶ್ ಐದು ವಿಕೆಟ್ ಪಡೆದು ಗಮನ ಸೆಳೆದಿದ್ದರು.

ಪ್ರಸ್ತುತ ನಾಸ್ತುಶ್ ಟಿ-20 ವಿಶ್ವಕಪ್ ಕ್ವಾಲೀಪಯರ್ ಪಂದ್ಯಾವಳಿಗಳಲ್ಲಿ ಅಮೇರಿಕಾವನ್ನು ಪ್ರತಿನಿಧಿಸಿ ಆಟವಾಡುತ್ತಿದ್ದಾರೆ. ನಾಸ್ತುಶ್ ಅಮೇರಿಕಾದಲ್ಲಿ ನಾಶ್ ಕೆಂಜಿಗೆ (Nosh Kenjige) ಎಂದೇ ಪ್ರಸಿದ್ಧರಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಪುಟ್ಟ ಗ್ರಾಮ ‘ಕೆಂಜಿಗೆ’ ಹೆಸರು ನಾಸ್ತುಶ್ ಮೂಲಕ ಅಮೇರಿಕಾದಲ್ಲಿ ರಾರಾಜಿಸುತ್ತಿದೆ.

ನಮ್ಮ ಜಿಲ್ಲೆಯ ಯುವ ಕ್ರಿಕೆಟರ್ ಅಮೇರಿಕಾದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು ಮತ್ತು ಅವರ ಹೆಸರಿನೊಂದಿಗೆ ತನ್ನ ಹುಟ್ಟೂರು ಕೆಂಜಿಗೆ ಹೆಸರನ್ನು ಸೇರಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ