October 5, 2024

ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಮಹಿಳೆಯರ ಪಾತ್ರ ಮುಖ್ಯವಾಗಿದೆ. ಹಾಗಾಗಿ ತಮ್ಮ ಮಕ್ಕಳು ಹಿರಿಯರಿಗೆ, ಸಮಾಜ ಹಾಗೂ ದೇಶವನ್ನು ಪ್ರೀತಿಸುವಂತಹ ಮನೋಭಾವ ಮೂಡಿಸುವ ಕೆಲಸ ಮಾಡಬೇಕೆಂದು ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಸಿದ್ಧಾರ್ಥ ಹೇಳಿದರು.

ಅವರು ಶನಿವಾರ ಮೂಡಿಗೆರೆ  ಪಟ್ಟಣದ ರೈತಭವನದಲ್ಲಿ ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉನ್ನತ ಅಧಿಕಾರಿಗಳು, ಶ್ರೀಮಂತ ವರ್ಗದ ಜನರೇ ಇಂದು ಪೋಷಕರನ್ನು ಅನಾಥಶ್ರಮಕ್ಕೆ ಬಿಡುತ್ತಿದ್ದಾರೆ. ಇದು ನಮ್ಮ ದೇಶದ ಸಂಸ್ಕøತಿಯಲ್ಲ. ಪೋಷಕರು ತಮ್ಮ ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಸಂಸ್ಕಾರ ತುಂಬುವ ಕೆಲಸ ಮಾಡಬೇಕೆಂದ ಅವರು, ಹಿಂದೆ ಪ್ರತಿಭಾವಂತ ಮಹಿಳೆಯರು ಮುಖ್ಯವಾಹಿನಿಗೆ ಬರಲು ಪೂರಕ ವಾತಾವರಣ ಇರಲಿಲ್ಲ. ಈಗ ಕಾಲ ಬದಲಾಗಿದೆ. ಮಹಿಳೆಯರಿಗೆ ಶಕ್ತಿ ತುಂಬಿದರೆ ಕುಟುಂಬ ಹಾಗೂ ಸಮಾಜವನ್ನು ಉತ್ತಮ ಕಡೆಗೆ ಕೊಂಡೊಯ್ಯುತ್ತಾರೆಂಬ ಭಾವನೆ ಎಲ್ಲರಲ್ಲೂ ಮೂಡಿದೆ. ತಮ್ಮ ಪ್ರತಿಭೆ ಸಾಮಥ್ರ್ಯ ಬಳಸಿಕೊಂಡು ಮಹಿಳೆಯರು ಪ್ರಗತಿ ಹೊಂದಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನೃತ್ಯ ಕಲಾವಿದೆ ಸೌಮ್ಯಶ್ರೀ, ರಾಷ್ಷ್ರೀಯ ಕ್ರೀಡಾಪಟು ಎಚ್.ಎಂ.ಸುನಂದಾ ರಘುನಾಥ್, ಸಮಾಜ ಸೇವಕಿ ವೇದಾವತಮ್ಮ, ಸಾಹಿತಿ ರಶ್ಮೀ ರಜಿತ್ ಸಿದ್ರುಬನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ ವಹಿಸಿದ್ದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್, ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ಪೂರ್ಣೇಶ್ವರಿ ಲಕ್ಷ್ಮಣ್‍ಗೌಡ, ಉಪಾಧ್ಯಕ್ಷೆ ಸುಮಾ ಚಂದ್ರಶೇಖರ್, ಕಾರ್ಯದರ್ಶಿ ವಿದ್ಯಾರಾಜು, ಖಜಾಂಚಿ ಮಧುರಾ ಜಯಂತ್, ಸಹ ಕಾರ್ಯದರ್ಶಿ ವನ ಜಗದೀಶ್, ಸಂಚಾಲಕರಾದ ಮಮತಾ ಸತೀಶ್ ಹಳೇಕೋಟೆ, ನಿರ್ದೇಶಕರಾದ ಸುಕನ್ಯಾ ಉಮೇಶ್, ಅನಿತಾ ರಮೇಶ್, ಮಮತಾ ಸತೀಶ್ ಕಡಿದಾಳು, ಮನವಿ ಜಯರಾಂ, ರೂಪಾ ಸೋಮಶೇಖರ್, ಮಧುರಾ ಕವೀಶ್, ಸಂಚಿತಾ ಪ್ರದೀಪ್ ಮತ್ತಿತರರಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ