October 5, 2024

ನಮ್ಮ ಆಸುಪಾಸಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಅದರ ನಿರ್ವಹಣೆ ನಮ್ಮ ಹೊಣೆಗಾರಿಕೆ ಎಂಬ ಮನೋಭಾವನೆ ಎಲ್ಲರಿಗೂ ಬರಬೇಕು.ಗ್ರಾಮಾಭಿವೃದ್ಧಿ ಯೋಜನೆಯು ಅದೇ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕಳಸ ಕೆಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ನಮ್ಮ ಸ್ವಸಹಾಯ ಸಂಘಗಳ ಸದಸ್ಯರು ಚಿಕ್ಕಮಗಳೂರು ಜಿಲ್ಲೆಯಲ್ಲಿ 150 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ ಎಂದು ಸಂತಸದಿಂದ ಹೇಳಿದರು.

ಸ್ವಹಾಯ ಸಂಘಗಳ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿ ಆಗಿದ್ದಾರೆ.ಮಹಿಳೆಯರು ಸಂಸಾರದ ನಿರ್ವಹಣೆಯಲ್ಲಿ ಪುರುಷರಿಗಿಂತ ಮುಂದೆ ಇದ್ದಾರೆ.ಗ್ರಾಮಗಳಲ್ಲಿ ಯಾವುದೇ ಆಪತ್ತು ಕಂಡುವಬಂದರೂ ನಮ್ಮ ಶೌರ್ಯ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಕೆಲಸ ಮಾಡುತ್ತಿವೆ ಎಂಬುದು ಹೆಮ್ಮೆ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯುತರಾಗಿ ಸಂಘಗಳ ಆರೋಗ್ಯ ಗಮನಿಸಬೇಕು.ನಿಯಮಿತವಾಗಿ ಸಭೆ ನಡೆಸಿ ಉಳಿತಾಯ ಮಾಡುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದ ಬಳಿಕ ಮಾತನಾಡಿದ ಹೊರನಾಡಿನ ಜಿ.ಭೀಮೇಶ್ವರ ಜೋಷಿ, ಹೆಗ್ಗಡೆಯವರು ಸಮಾಜದಲ್ಲಿ ಬದಲಾವಣೆ ತರುವ ತುಡಿತದಿಂದ ಕೆಲಸ ಮಾಡುತ್ತಿದ್ದಾರೆ.ಎಲ್ಲ ಕ್ಷೇತ್ರದಲ್ಲೂ ಸುಧಾರಣೆ ತರುವ ಅವರ ಯತ್ನಕ್ಕೆ ಫಲವೂ ಸಿಗುತ್ತಿದೆ.ಲಕ್ಷಾಂತರ ಕುಟುಂಬಗಳಿಗೆ ಅವರು ಆಸರೆಯೂ ಆಗಿದ್ದಾರೆ. ಹೆಗ್ಗಡೆಯವರ ಕಲ್ಪನೆಯಲ್ಲಿ ಎಲ್ಲರ ಬದುಕು ಹಸನಾಗುತ್ತಿದೆ.ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸದೃಡರಾಗಿ ಮಹಿಳೆಯರು ಇಂದು ಸಮಾಜದ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.ಇಂದು ಒಕ್ಕೂಟಗಳ ಪದಗ್ರಹಣ ನಡೆದಿದೆ ಕೇವಲ ಅಧಿಕಾರದ ಆಸೆಯಿಂದ ಅಧಿಕಾರ ಸ್ವೀಕಾರ ಮಾಡಿಕೊಳ್ಳದೆ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ, ನಮಗೆ ಸಂಸ್ಕಾರ, ಸಂಸ್ಕ್ರತಿ ಕಲಿಸಿ, ಸಮಾಜದಲ್ಲಿ ನಾವು ಯಾವ ರೀತಿ ಇರಬೇಕು ಅನ್ನುವುದನ್ನು ಕಲಿಸಿಕೊಟ್ಟು ಇಂದು ಗ್ರಾಮದ ಪಂಚಾಯಿತಿ ಅಧ್ಯಕ್ಷೆ ಆಗಿಯೂ ನನ್ನ ಕರ್ತವ್ಯದಲ್ಲಿ ಯಾವುದೇ ಒಂದು ಕಪ್ಪು ಚುಕ್ಕಿ ಬರದಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಇದಕ್ಕೆ ಗ್ರಾಮಾಭಿವೃದ್ಧಿ ಯೋಜನೆಯೇ ಮುಖ್ಯ ಕಾರಣವಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಮಂಗಲ ಯೋಜನೆಯಲ್ಲಿ 4 ವಿಶೇಷ ಚೇತನರಿಗೆ ಗಾಲಿಖುರ್ಚಿ, ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಸುರಕ್ಷತಾ ಸಲಕರಣೆ ಹಾಗೂ ಬೋವಿಪಾಲಿನ ಮಹಿಳೆ ಜಯಂತಿ ಅವರಿಗೆ ವಾತ್ಸಲ್ಯ ಮನೆಯ ಪತ್ರ ಹಸ್ತಾಂತರ ಮಾಡಲಾಯಿತು.

ಸತ್ಯನಾರಾಣ ಪೂಜೆಯನ್ನು ವೇದ ಬ್ರಹ್ಮ ಶ್ರೀ ಪ್ರಸನ್ನಭಟ್ ಅವರ ಪುರೋಹಿತ್ಯ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನಡೆದವು.ನಂತರ ಡಾ| ವೀರೇಂದ್ರ ಹೆಗ್ಗಡೆ ಅವರು ಕಳಸ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ನಂತರ ಅವರನ್ನು ಅಲಕೃಂತ ವಾಹನದಲ್ಲಿ ಕುಳ್ಳಿರಿಸಿ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಮತ್ತು ಕಾರ್ಯಕರ್ತರು ಅವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆತಂದರು. ಹೆಗ್ಗಡೆಯವರು ಕುಳಿತಿದ್ದ ಅಲಂಕೃತ ವಾಹನದ ಮುಂದೆ 1008 ಮಹಿಳೆಯರು ಪೂರ್ಣಕುಂಬ ಕಳಸ ಹಿಡಿದು ಸಾಗಿದರು. ಚಂಡೆವಾದ್ಯ ಮೆರವಣಿಗೆಗೆ ಕಳೆ ನೀಡಿತ್ತು.ದಾರಿಯುದ್ದಕ್ಕೂ ವರ್ತಕರು, ಸಾರ್ವಜನಿಕರು, ಶಾಲಾ ಮಕ್ಕಳು ವೀರೇಂದ್ರ ಹೆಗ್ಗಡೆಯವರಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಕಾರ್ಯಕ್ರಮದ ನಂತರ ವಿವಿಧ ಒಕ್ಕೂಟಗಳ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಹೆಚ್.ಮಂಜುನಾಥ್, ಸಮಿತಿಯ ಅಧ್ಯಕ್ಷ ಕೀರ್ತಿ ಜೈನ್, ಪ್ರಕಾಶ್, ಪ್ರಾದೇಶಿಕ ನಿರ್ದೇಶಕಿ ಗೀತಾ, ಯೋಜನಾಧಿಕಾರಿ ಶಿವಾನಂದ, ಕಳಸ ಮೇಲ್ವಿಚಾರಕ ಬಿ.ಎಸ್.ಶಿವರಾಜ್, ಶೌರ್ಯ ವಿಪತ್ತು ತಂಡದ ಮಾಸ್ಟರ್ ಬಿ.ಕೆ. ಮಹೇಶ್, ಕಾಪ್ಟನ್ ಅಜಿತ್ ಇದ್ದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಎಪ್ಪತ್ತೈದು: ದಣಿವರಿಯದ ಕರ್ಮಯೋಗಿ-ಬೆರಗುಮೂಡಿಸುವ ಸಾಮಾಜಿಕ ಕಾರ್ಯಗಳು

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ