October 5, 2024

ರಂಜಾನ್ ಹಬ್ಬದ ಅಂಗವಾಗಿ ಮೂಡಿಗೆರೆ ಬ್ಯಾರಿ ಒಕ್ಕೂಟದಿಂದ ತಾಲ್ಲೂಕಿನ ವಿವಿಧ ಮಸೀದಿಗಳಿಗೆ ಕರ್ಜೂರ ವಿತರಣೆ ಮಾಡಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಅವರು ತಮ್ಮ ಒಕ್ಕೂಟದ ಸದಸ್ಯರೊಂದಿಗೆ ತೆರಳಿ ಮಸೀದಿಗಳಿಗೆ ಕರ್ಜೂರದ ಪೊಟ್ಟಣಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಮ್ಮದ್ ಅವರು ಮುಸ್ಲೀಂ ಸಮುದಾಯದ ಅತ್ಯುತ್ತಮ ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿಯೊಬ್ಬರು ವ್ರತವನ್ನು ಆಚರಿಸಿ, ಧಾನ-ಧರ್ಮವನ್ನು ನೀಡುವುದರ ಮೂಲಕ ನಾಡಿನ ಮತ್ತು ನಾಡಿನಲ್ಲಿರುವ ಸಮಸ್ತ ಜನರ ಸರ್ವತೋಮುಖ ಅಭಿವೃದ್ಧಿ, ಐಶ್ವರ್ಯ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣಕ್ಕಾಗಿ ತಿಂಗಳ ಮೂವತ್ತು ದಿನಗಳ ವೃತಾಚರಣೆ ಮಾಡಿ ದೇವರ ಮೊರೆ ಹೋಗುತ್ತಾರೆ. ಪವಿತ್ರ ರಂಜಾನ್ ಮಾಸದಲ್ಲಿ ಧಾನ-ಧರ್ಮ ಸೇರಿದಂತೆ ಸತ್ಕಾರ್ಯಗಳನ್ನು ಮಾಡಿದರೆ ರಂಜಾನ್ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಮೂಡಿಗೆರೆ ಬ್ಯಾರಿ ಒಕ್ಕೂಟವು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಯಾವುದೇ ಜಾತಿ ಧರ್ಮದ ಭಿನ್ನತೆಯಿಲ್ಲದೇ ಸಮಾಜದಲ್ಲಿ ನೊಂದವರ ಪರವಾಗಿ ಸದಾ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಹಾಗೆಯೇ ಸಮಾಜದಲ್ಲಿ ಸೌಹಾರ್ದತೆಯನ್ನು ಸಾರಲು ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ