October 5, 2024

ಜೇಸಿಐ ಸಂಸ್ಥೆ ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಎಲ್ಲರಲ್ಲೂ ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ ಎಂದು ಜೇಸಿಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಜಿತೇಂದರ್ ಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು  ಸೋಮವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಮೂಡಿಗೆರೆ ಜೇಸಿಐ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಬಹು ಘಟಕಗಳ ಭೇಟಿ ಸಭೆಯಲ್ಲಿ ಮಾತನಾಡಿದರು.

ಜೇಸಿಐ ಸಂಸ್ಥೆಯಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಜನರ ಮೂಲಭೂತ ಅವಶ್ಯಕತೆ ಪರಿಹರಿಸುವಂತಹ ಜನಪರವಾದ ಕಾರ್ಯಕ್ರಮಗಳನ್ನು, ವಿದ್ಯಾರ್ಥಿ ಯುವಜನರಿಗೆ ತರಬೇತಿ ನೀಡುವ ಕಾರ್ಯವನ್ನು   ಹಿಂದಿನಿಂದಲೂ ರೂಪಿಸಿಕೊಂಡು ಬರುತ್ತಿದ್ದರಿಂದ ಇದೀಗ ಸಂಸ್ಥೆ ದೊಡ್ಡಮಟ್ಟದಲ್ಲಿ ಹೆಸರು ಗಳಿಸಿದೆ. ಅಲ್ಲದೇ ಸಾರ್ವಜನಿಕರಲ್ಲಿ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಹೀಗೆ ಮುಂದೆಯೂ ಉತ್ತಮ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಶ್ರಮಿಸಬೇಕು. ಮುಖ್ಯವಾಗಿ ಸಮಾಜದಲ್ಲಿ ನವ ನಾಯಕರಾಗಿ ಹೊರ ಹೊಮ್ಮಲು ಜೇಸಿ ಸಂಸ್ಥೆ ಒಂದು ಉತ್ತಮ ವೇದಿಕೆಯಾಗಿದೆ. ಹಾಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಜೇಸಿಐ ಸಂಸ್ಥೆಗೆ ಕರೆ ತರಬೇಕೆಂದು ಮನವಿ ಮಾಡಿದರು.

ಜೇಸಿಐ ವಲಯ ಅಧ್ಯಕ್ಷೆ ಯಶಸ್ವಿನಿ, ಎಸ್.ಎಂ.ಎ. ಉಪಾಧ್ಯಕ್ಷ ಹೆಚ್.ಕೆ. ಯೋಗೇಶ್, ಮೂಡಿಗೆರೆ ಜೇಸಿಐ ಅಧ್ಯಕ್ಷೆ ಸವಿತಾ ರವಿ, ಕಾರ್ಯದರ್ಶಿ ಪ್ರದೀಪ್ ಕುನ್ನಹಳ್ಳಿ, ನಿಕಟಪೂರ್ವ ಅಧ್ಯಕ್ಷೆ ವಿದ್ಯಾರಾಜು, ಲೇಡಿ ಜೇಸಿ ಅಧ್ಯಕ್ಷೆ ಕವಿತಾ ಸಂತೋಷ್, ಕಾರ್ಯದರ್ಶಿ ರೇಖಾ ನಾಗರಾಜು, ಗೋಣಿಬೀಡು ಹೊಯ್ಸಳ ಜೇಸಿಐ ಅಧ್ಯಕ್ಷ ಚಂದ್ರಶೇಖರ್, ಬಣಕಲ್ ವಿಸ್ಮಯ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಸಂಸ್ಥೆಯ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ