October 5, 2024

ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕ್ಯೂ ಆರ್ ಕೋಡ್ ನಿಯಮದಿಂದ ಸಾರಿಗೆ ವಾಹನ ಚಾಲಕರು ಮತ್ತು ಮಾಲೀಕರ ಜೇಬಿಗೆ ಬರೆ ಎಳೆದಂತಾಗಿದೆ.
ಈ ನಿಯಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಮೂಡಿಗೆರೆ ಸಾರಿಗೆ ವಾಹನಗಳ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.  ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ನಂತರ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಎಂ.ಹೆಚ್. ಅಮರನಾಥ್ ಮಾತನಾಡಿ ರಾಜ್ಯ ಸರಕಾರ ರೆಟ್ರೋ ರೆಫ್ಲೆಕ್ಟಿವ್ ಟ್ಯಾಪ್ ಅಂಡ್ ರಿಯರ್ ಮಾರ್ಕಿಂಗ್ ಪ್ಲೇಟ್ ಅಳವಡಿಕೆ ಮಾಡಬೇಕೆಂದು ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಆದೇಶ ಹೊರಡಿಸಿದ್ದರಿಂದ ಬಡ ಸಾರಿಗೆ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ. ಈ ಹೊಸ ಯೋಜನೆ ಜಾರಿಯನ್ನು ಸರಕಾರ ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಕ್ಯೂಆರ್ ಕೋಡ್ ಅಳವಡಿಕೆಯ ಉಪಯೋಗವಾಗರೂ ಏನೆಂಬುದನ್ನು ಸರಕಾರ ವಿವರಣೆ ಕೊಡಬೇಕು. ಇದು ಅವೈಜ್ಞಾನಿಕ ನಿಯಮ. ಕ್ಯೊಆರ್ ಕೋಡ್ ಪ್ಲೇಟ್ ಅಳವಡಿಕೆಗೆ ಸಣ್ಣ ವಾಹನಕ್ಕೆ ಕನಿಷ್ಟ 2.ಸಾವಿರ, ದೊಡ್ಡ ವಾಹನಕ್ಕೆ ಕನಿಷ್ಟ 9ಸಾವಿರ ರೂ ಯಾಕೆ ಬೇಕು? ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಾವು ಬಹಿರಂಗ ಚರ್ಚೆಗೆ ಸಿದ್ದವಿದ್ದೇವೆ ಎಂದು ಸವಾಲು ಹಾಕಿದ ಅವರು, ಇದೊಂದು ಹಣ ಮಾಡುವ ಹಗಲು ದರೋಡೆ ಎಂದು ದೂರಿದರು.

ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ಪ್ರಕಾಶ್ ಮಾತನಾಡಿ, ಕೋವಿಡ್ ಸಂಕಷ್ಟ ಎದುರಿಸಿ ಈಗ ಸಾಮಾನ್ಯ ಸ್ಥಿತಿಗೆ ತಲುಪುತ್ತಿರುವ ಸಾರಿಗೆ ವಾಹನ ಮಾಲೀಕರು ಈಗ ಸರಕಾರದ ಹೊಸ ನೀತಿಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಸಾರಿಗೆ ವಾಹನಗಳ ಯೋಗ್ಯತಾ ಪತ್ರ ನವೀಕರಣ ಹಾಗೂ ವಾಹನಗಳ ಪರಿವೀಕ್ಷಣೆಗೆ ಶುಲ್ಕ ಪಾವತಿಸಿದರೆ ಸಾಕಿತ್ತು. ವಾಹನ ಸ್ಥಿತಿ ಗತಿ ನೋಡಿ ಯೋಗ್ಯತಾ ಪತ್ರ ನೀಡಲಾಗುತ್ತಿತ್ತು. ಆದರೆ ಈಗ ಹೊಸ ನೀತಿಯಿಂದ ದುಪ್ಪಟ್ಟು ಹಣ ನೀಡಿ ಯೋಗ್ಯತಾ ಪತ್ರ ನವೀಕರಣಕ್ಕೆ ಕ್ಯೂಆರ್‍ಕೋಡ್ ಪ್ಲೇಟ್ ಅಳವಡಿಸಿಬೇಕಾಗಿದೆ. ಇಂತಹ ಅವೈಜ್ಞಾನಿಕ ನಿಯಮ ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕೆಟಿಡಿಒ ಕಾರ್ಯಕಾರಿ ಮಂಡಳಿ ಸದಸ್ಯ ಸುರೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್, ನಗರ ಅಧ್ಯಕ್ಷ ಮಹಮ್ಮದ್ ಹನೀಫ್, ಸ್ವಾಭಿಮಾನಿ ಸಂಘದ ಅಧ್ಯಕ್ಷ ಗಿರೀಶ್, ಲಾರಿ ಚಾಲಕರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಆಶಿಕ್, ಪಿಕಪ್ ಸ್ಟಾಂಡ್ ಉಪಾಧ್ಯಕ್ಷ ಹರಿಯಣ್ಣ, ಜೈಭಾರತ್ ಗೂಡ್ಸ್ ಆಟೋ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ಟಿಪ್ಪು, ಕಾಫಿನಾಡು ಟ್ಯಾಕ್ಸಿ ಸಂಘದ ಅಧ್ಯಕ್ಷ ದಿನೇಶ್ ಮತ್ತಿತರರಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ