October 5, 2024

ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಯಾವುದೇ ಕೆಲಸ ಆಗುತ್ತಿಲ್ಲ. ಇದನ್ನು ಪ್ರಶ್ನಿಸಿ ಮಾ.13ರಂದು ಜಿಲ್ಲಾಧಿಕಾರಿ ಕಚೇರಿ ಅಂಗಳದಲ್ಲಿ ಏಕಾಂಗಿಯಾಗಿ ವಾಸ್ತವ್ಯ ಹೂಡಲಾಗುವುದು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್‍ಗೌಡ ಹೇಳಿದರು.

ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ 2021ರಲ್ಲಿ ಸುತೋಲೆ ಹೊರಡಿಸಿ ಡಿಸಿ ಹಾಗೂ ಎಸಿ ಕಂದಾಯ ನ್ಯಾಯಾಲಯದಲ್ಲಿ ಆಸಕ್ತಿ ವಹಿಸಿ ಶಾಸನಬದ್ದ ತೀರ್ಪನ್ನು 6 ತಿಂಗಳಲ್ಲಿ ನೀಡಲು ವಿಫಲರಾಗಿರುವುದನ್ನು ಪ್ರಸ್ತಾಪಿಸಿದೆ. ಆದರೆ ಅಧಿಕಾರಿಗಳು ಸರಕಾರದ ಸುತ್ತೋಲೆ ಕಡ್ಡಾಯವಾಗಿ ಪಾಲಿಸಲು ಭೂ ಕಂದಾಯ ಕಾಯಿದೆಯಲ್ಲಿ ತಿಳಿಸಿಲ್ಲ ಎಂದು ಸಮಜಾಯಿಷಿ ನೀಡಿ ಸುತ್ತೋಲೆಯನ್ನು ಬುಟ್ಟಿಗೆ ಹಾಕಿದ್ದಾರೆ. ಇದರಿಂದ ರೈತರ ಸಮಸ್ಯೆ ಕೂಡ ಕಸದ ಬುಟ್ಟಿಗೆ ಹಾಕಿದಂತಾಗಿದೆ ಎಂದು ದೂರಿದರು.

ಕಳೆದ ತಿಂಗಳು ಕಂದಾಯ ಸಚಿವ ಆರ.ಅಶೋಕ್ ಅವರು ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ರೈತರಿಂದ ಕಂದಾಯ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿದ್ದಾರೆ. ಆದರೆ ಇದೂವರೆಗೆ ರೈತರ ಮನವಿಗೆ ಅಧಿಕಾರಿಗಳಿಂದಾಗಲಿ ಹಾಗೂ ಸರಕಾರದಿಂದಾಗಲಿ ಯಾವುದೇ ಉತ್ತರ ಬಂದಿಲ್ಲ. ಕಂದಾಯ ಇಲಾಖೆ ಸರಿಯಿದ್ದರೆ ರೈತರ ಸಮಸ್ಯೆ ಸಂಪೂರ್ಣ ಬಗೆಹರಿದಂತೆ. ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಕೊಟ್ಟರೆ ಒಂದೊಂದು ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ. ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.

ಈ ಬಗ್ಗೆ ಅವರಿಂದಲೇ ಸ್ಪಷ್ಟ ಉತ್ತರ ಪಡೆಯಲು ತಾನು ಏಕಾಂಗಿಯಾಗಿ ಡಿಸಿ ಅಂಗಳದಲ್ಲಿ ಅನಿರ್ಧಿಷ್ಟಾವದಿ ವಾಸ್ತವ್ಯ ನಡೆಸಲಿದ್ದೇನೆಂದು ತಿಳಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಉಪಾಧ್ಯಕ್ಷ ಚಂದ್ರೇಗೌಡ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ