October 5, 2024

ಅಡಿಕೆಯ ಎಲೆಚುಕ್ಕೆ ರೋಗವನ್ನು ಪೋಷಕಾಂಶಗಳ ಬಳಕೆಯ ಜೊತೆಗೆ ಶಿಲೀಂಧ್ರ ನಾಶಕಗಳ ಸಿಂಪಡನೆಯಿಂದ ಮತ್ತು ಸೂಕ್ಷ್ಮಾಣು ಲೇಪಿತ ಸಾವಯವ ಗೊಬ್ಬರ ಬಳಕೆಯಿಂದ ಹತೋಟಿಗೆ ತಂದು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು ಎಂದು ಸಸ್ಯಶಾಸ್ತ್ರ ವಿಜ್ಞಾನಿ ಡಾ. ಶಿವುಪ್ರಸಾದ್ ಎಸ್. ಆರ್. ಅವರು ಮಾಹಿತಿ ನೀಡಿರುತ್ತಾರೆ.

ಎಲೆಚುಕ್ಕಿ ರೋಗದ ಕುರಿತು ತಮ್ಮದೇ ಆದ ವಿಧಾನದಲ್ಲಿ ಸಂಶೋಧನೆಯಲ್ಲಿ ನಿರತರಾಗಿರುವ ಡಾ. ಶಿವಪ್ರಸಾದ್ ಅವರು ಮೂಡಿಗೆರೆ ಸಮೀಪದ ಹಾರ್ಲಗದ್ದೆಯಲ್ಲಿ ಅರವಿಂದಗೌಡ ಎಂಬುವವರ ತೋಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾವು ಸಂಶೋಧನೆ ಮೂಲಕ ಪ್ರಾಯೋಗಿಕವಾಗಿ ಕಂಡುಕೊಂಡಿರುವ ಪರಿಹಾರ ಮಾರ್ಗಗಳ ಬಗ್ಗೆ ವಿವರಿಸಿದರು.

ಪ್ರಸ್ತುತ ಮಲೆನಾಡಿನಲ್ಲಿ ಎಲೆಚುಕ್ಕೆ ರೋಗವು ಉಲ್ಬಣವಾಗುತ್ತಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕಳಸ ತಾಲ್ಲೂಕಿನ ಎರಡು ಕಡೆ, ಹಾಗೂ ಮೂಡಿಗೆರೆ ತಾಲ್ಲೂಕಿನ ಹಾರ್ಲಗದ್ದೆ ಮತ್ತು ನಡುವಿನ ಮಾಡ್ಕಲ್ ಗ್ರಾಮಗಳ ತೋಟದಲ್ಲಿ ಎರಡು ಪ್ರತ್ಯೇಕ ವಿಧಾನಗಳಲ್ಲಿ ಪ್ರಯೋಗ ನಡೆಸಲಾಗಿತ್ತು.

ಈ ರೋಗಕ್ಕೆ ಕಾರಣವಾಗುವ ಶಿಲೀಂಧ್ರಗಳಾದ (Gloeosporioides and Phyllosticta Aracae) ಗಳ ಮೇಲೆ ಪ್ರಯೋಗ ಕೈಗೊಳ್ಳಲಾಗಿತ್ತು.
ಈ ಎರಡೂ ವಿಧಾನದಿಂದಲೂ ಎಲೆಚುಕ್ಕಿ ರೋಗದ ಹತೋಟಿ ಆಗಿರುವುದು ಕಂಡುಬಂದಿದೆ.

ಸಿಂಪರಣೆಯ ಮೊದಲು

ಮೊದಲನೆಯದಾಗಿ ಕಾರ್ಬೆಂಡೇಜಿಮ್, ಮ್ಯಂಕೋಜೆಬ್, ನ್ಯೂಟ್ರಿಗೊಲ್ಡ್ ಮಿಶ್ರಣವನ್ನು ಸಿಂಪರಣೆ ಮಾಡಲಾಗಿತ್ತು.

ಎರಡನೇ ಪ್ರಯೋಗದಲ್ಲಿ ಪ್ರೋಪಿನೋಕೊನೆಸಾಲ್ ಮತ್ತು ನ್ಯೂಟ್ರಿಗೊಲ್ಡ್ ಮಿಶ್ರಣವನ್ನು ಸಿಂಪರಣೆ ಮಾಡಲಾಗಿತ್ತು.

ಸಿಂಪರಣೆಯ ನಂತರ

ಈ ಎರಡೂ ವಿಧಾನದಲ್ಲಿಯೂ ಉತ್ತಮ ಫಲಿತಾಂಶ ಕಂಡುಬಂದಿದೆ. ಒಂದು ತಿಂಗಳ ನಂತರ ಸುಳಿಎಲೆಯು ಉದ್ದವಾಗಿ, ಗಾಢ ಹಸಿರಿನಿಂದ ಯಾವುದೇ ಎಲೆಚುಕ್ಕೆ ರೋಗದ ಲಕ್ಷಣಗಳು ಗೋಚರಿಸದೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುತ್ತದೆ.

ಸಿಂಪರಣೆಯ ಮೊದಲು

ಅಡಿಕೆಯ ಹಿಂಗಾರು ಆರೋಗ್ಯಕರವಾಗಿ ಬೆಳೆದು ನಳನಳಿಸುತ್ತಿರುತ್ತದೆ. ಹೊಸ ಎಲೆಗಳಿಗೆ ರೋಗ ಹಬ್ಬುವುದು ನಿಂತಿರುತ್ತದೆ.

ತಾವು ಪ್ರಾಯೋಗಿಕವಾಗಿ ಕಂಡುಕೊಂಡಿರುವ ವಿಚಾರವನ್ನು ನಿರ್ದೇಶಕರು, ಸಿ. ಪಿ. ಸಿ. ಆರ್. ಐ. ಕಾಸರಗೋಡು ಮತ್ತು ಸಂಶೋಧನಾ ನಿರ್ದೇಶಕರು ತೋಟಗಾರಿಕಾ ಮತ್ತು ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ ಇವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಡಾ. ಶಿವಪ್ರಸಾದ್ ಅವರು ಸಸ್ಯಶಾಸ್ತ್ರ ವಿಜ್ಞಾನಿಯಾಗಿದ್ದು, ಜೊತೆಗೆ ಭದ್ರ ಇಕೋ ಕನ್ಸರ್ವೇಟೀವ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಿವಪ್ರಸಾದ್ ಅವರು ಈಗಾಗಲೆ ಮೂಡಿಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅರಣ್ಯವಾಸಿಗಳ ಪರವಾಗಿ ತಮ್ಮದೇ ವಿಧಾನದಿಂದ ಕೆಲಸ ಮಾಡುತ್ತಿದ್ದಾರೆ. ಕಾಡಾನೆ ನಿಯಂತ್ರಣದ ಬಗ್ಗೆಯೂ ವೈಜ್ಞಾನಿಕ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿರುತ್ತಾರೆ.

ಇದೀಗ ಅವರು ಅಡಿಕೆಗೆ ಮಾರಕವಾಗುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣದ ಬಗ್ಗೆ ಕೈಗೊಂಡಿರುವ ಸಂಶೋಧನೆಯ ವಿಚಾರವನ್ನು ಸಂಬಂಧಿಸಿದ ಸರ್ಕಾರಿ ಸಂಶೋಧನಾ ಕೇಂದ್ರಗಳು ಪರಿಶೀಲನೆ ನಡೆಸಿ ಚರ್ಚೆಗಳನ್ನು ನಡೆಸಿ ಅದನ್ನು ರೈತರಿಗೆ ತಲುಪಿಸುವ ಬಗ್ಗೆ ತಮ್ಮ ಭರವಸೆ ವ್ಯಕ್ತಪಡಿಸಿದ್ದಾರೆ.

ಡಾ. ಶಿವಪ್ರಸಾದ್ ಅವರ

ಸಂಪರ್ಕಕ್ಕೆ : 99458 23473

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ