October 5, 2024

ಟರ್ಕಿ ಮತ್ತು ಸಿರಿಯಾ ಭಾಗದಲ್ಲಿ ಭೂಕಂಪನವಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅತಿಹೆಚ್ಚು ಜೀವಹಾನಿಯಾಗಿದ್ದ ಟರ್ಕಿಯಲ್ಲಿ ಭೂಕಂಪನ ಆಗಿ 12 ದಿನಗಳ ನಂತರವೂ ವ್ಯಕ್ತಿಯೊಬ್ಬರು ಪವಾಡಸದೃಶರಾಗಿ ಬದುಕುಳಿದಿದ್ದಾರೆ. ಭೂಕಂಪನ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ತಂಡವು ನಿನ್ನೆ 45 ವರ್ಷದ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಅವಶೇಷಗಳಿಡಿಯಿಂದ ಹೊರತೆಗೆದಿದೆ.

ಮೊನ್ನೆ 11 ದಿನವೂ ಬದುಕಿಳಿದಿದ್ದ ಮೂವರನ್ನು ರಕ್ಷಿಸಲಾಗಿತ್ತು. ಹೀಗೆ ಟರ್ಕಿಯಿಂದ ದಿನದಿಂದ ದಿನಕ್ಕೆ ಪವಾಡಸದೃಶವಾಗಿ ಬದುಕಿಬರುತ್ತಿರುವ ಸುದ್ದಿಗಳು ಬರುತ್ತಲೇ ಇವೆ.

ಈ ನಡುವೆ ಟರ್ಕಿ ಭೂಕಂಪನದಲ್ಲಿ ಕಣ್ಮರೆಯಾಗಿದ್ದ ಘಾನಾದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನ್ ಅಟ್ಸು ಮೃತದೇಹ ನಿನ್ನೆ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದೆ.

ಭೂಕಂಪನದಿಂದಾಗಿ ಅಧಿಕೃತ ಮಾಹಿತಿಯ ಪ್ರಕಾರವೇ ಸುಮಾರು 45 ಸಾವಿರ ಜನರು ಜೀವಕಳೆದುಕೊಂಡಿದ್ದಾರೆ. ಸಾವಿನ ಲೆಕ್ಕಾಚಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ