October 5, 2024

ಮೂಡಿಗೆರೆ ಸಾಮಾಜಿಕ ಸೇವಾ ಸಮಿತಿಯ ವತಿಯಿಂದ ಮೂಡಿಗೆರೆ ಸಮೀಪದ ಬಿದರಹಳ್ಳಿ ನೀರ್`ಗಂಡಿ ಎಸ್.ಎಲ್.ಆರ್ ಕಾಫಿ ಕ್ಯೂರಿಂಗ್ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪಾದಯಾತ್ರಿಗಳಿಗೆ ಊಟೋಪಚಾರ ನೆರವೇರಿಸಲಾಯಿತು.

ಸತತ ಏಳು ವರ್ಷದಿಂದ ಸಮಿತಿಯು ಈ ಸೇವೆಯಲ್ಲಿ ನಿರತವಾಗಿದೆ.  ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಭಕ್ತಾದಿಗಳ ಅನುಕೂಲಕ್ಕಾಗಿ ಭಕ್ತಾದಿಗಳಿಗೆ ತಂಗಲು-ವಿಶ್ರಾಂತಿ ಪಡೆಯಲು ಮತ್ತು ಊಟ-ಕಾಫಿ-ತಿಂಡಿ ವ್ಯವಸ್ಥೆ ಮತ್ತು ಆಯುರ್ವೇದ ತೈಲ ಮಸಾಜ್, ವೈದ್ಯಕೀಯ ಸೇವೆ, ಶೌಚಾಲಯ ವ್ಯವಸ್ಥೆಯನ್ನು ಮಾಡುತ್ತಾ ಬರುತ್ತಿದೆ.

ಈ ವರ್ಷ ಸುಮಾರು‌ 50 ಸಾವಿರಕ್ಕೂ ಅಧಿಕ ಮಂದಿ
ಭಕ್ತರು ಸಮಿತಿ ಒದಗಿಸಿದ್ದ ಸೇವೆಯ ಅನುಕೂಲ ಪಡೆದು ಸಮಿತಿಯ ಸದಸ್ಯರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ಈ ಸೇವೆ ಸುಮಾರು ಐದು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಕೆ.ವೆಂಕಟೇಶ್ ಮತ್ತು ಸಮಿತಿಯ ಎಲ್ಲಾ ಸದಸ್ಯರು, ಸ್ವಯಂಸೇವಕರು, ಆರೋಗ್ಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳು ಈ ಸೇವೆಯಲ್ಲಿ ಕೈಜೋಡಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ