October 5, 2024

ಕಾಫಿ ಕಣದ ಕಾಂಪೌಂಡ್ ಒಳಗೆ ಬಂದಿದ್ದ ಮರಿಯಾನೆ ಹೊರಹೋಗಲು ತಡಬಡಾಯಿಸಿ ಅಂಗಳದಲ್ಲಿ ಸುತ್ತುಹೊಡೆಯುತ್ತಿದ್ದ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿ ವೈರಲ್ ಆಗಿದೆ.

ಕಾಡಾನೆಗಳ ತಂಡದಿಂದ ಬೇರ್ಪಟ್ಟಿರುವ ಮರಿಯಾನೆಯೊಂದು ಕಳೆದ ಎರಡುಮೂರು ದಿನಗಳಿಂದ ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ, ನಂದೀಪುರ, ಇಂದ್ರವಳ್ಳಿ, ಕಮ್ಮರಗೋಡು, ಚಂದ್ರಾಪುರ ಆಸುಪಾಸಿನಲ್ಲಿ ಸುತ್ತುಹೊಡೆಯುತ್ತಿತ್ತು.

ಸಕಲೇಶಪುರ, ಅರೇಹಳ್ಳಿ ಕಡೆಯಿಂದ ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟಿದ್ದ ಮರಿಯಾನೆ ದಿಕ್ಕುತೋಚದೆ ಮನಬಂದತೆ ಸುತ್ತುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಆನೆ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಮರಿಯಾನೆಯ ಜಾಡು ಹಿಡಿದು ಇಂದು ಮೂಡಿಗೆರೆ ಅರಣ್ಯ ವಲಯದಿಂದ ಚೀಕನಹಳ್ಳಿ ಮೂಲಕ ಅರೇಹಳ್ಳಿ ಕಡೆಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿಯಿಡೀ ಎಲ್ಲೆಂದರಲ್ಲಿ ಸುತ್ತಿದ್ದ ಮರಿಯಾನೆ ಇಂದು ಮಧ್ಯಾಹ್ನ ನಂದೀಪುರ ಗ್ರಾಮದ ಕಾಫಿ ಬೆಳೆಗಾರ ಗಿರೀಶ್ ಎಂಬುವವರ ಮನೆಯಂಗಳಕ್ಕೆ ಬಂದಿತ್ತು. ಕಾಫಿ ಕಣದ ಕಾಂಪೌಂಡ್ ಒಳಗೆ ಬಂದಿದ್ದ ಮರಿಯಾನೆ ಹೊರಹೋಗಲು ತಡಬಡಾಯಿಸಿ ಅಂಗಳದಲ್ಲಿ ಸುತ್ತುಹೊಡೆಯುತ್ತಿದ್ದ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿ ವೈರಲ್ ಆಗಿದೆ.

ಈ ಸಂಬಂಧ ಮಾಹಿತಿ ನೀಡಿದ ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಅವರು ಕಳೆದ ಎರಡು ದಿನದಿಂದ ಮರಿಯಾನೆಯೊಂದು ಕಸ್ಕೇಬೈಲ್ ಭಾಗದಿಂದ ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಸುತ್ತುತ್ತಿತ್ತು. ಇಂದ್ರವಳ್ಳಿ ವರೆಗೆ ಹೋಗಿತ್ತು. ಎತ್ತಸಾಗುವುದು ಎಂಬ ಗೊತ್ತುಗುರಿಯಿಲ್ಲದೇ ತಬ್ಬಿಬ್ಬಾಗಿತ್ತು. ನಿನ್ನೆವರೆಗೆ ಪಾದಯಾತ್ರಿಗಳ ಸಂಖ್ಯೆ ಜಾಸ್ತಿ ಇದ್ದುದ್ದರಿಂದ ಇಂದು ಆನೆಯನ್ನು ಮೂಡಿಗೆರೆ ವಲಯದಿಂದ ಆಚೆ ತಲುಪಿಸಲಾಗಿದೆ. ಅದು ಮತ್ತೆ ಮರಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದಿದ್ದಾರೆ.

ಸಾರ್ವಜನಿಕರು ಒಂದೇ ಆನೆಯಲ್ಲ ಎರಡುಮೂರು ಆನೆಗಳು ಸುತ್ತುತ್ತಿವೆ ಎನ್ನುತ್ತಾರೆ. ಆದರೆ ಅರಣ್ಯ ಇಲಾಖೆ ಯವರು ಒಂದೇ ಮರಿಯಾನೆ ಈ ಭಾಗಕ್ಕೆ ಬಂದಿದ್ದು ಅದನ್ನು ಯಶಸ್ವಿಯಾಗಿ ಮೂಡಿಗೆರೆ ಅರಣ್ಯ ಪ್ರದೇಶದಿಂದ ಹೊರಗೆ ಕಳುಹಿಸಲಾಗಿದೆ ಎನ್ನುತ್ತಾರೆ. ಏನೇ ಆಗಲಿ ಸಾರ್ವಜನಿಕರು ತಿರುಗುವಾಗ ಆದಷ್ಟು ಜಾಗ್ರತೆಯಿಂದ ಇರುವುದು ಕ್ಷೇಮ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ