October 5, 2024

ನಾಲ್ಕು ದಿನಗಳ ಮೂಡಿಗೆರೆ ತಾಲ್ಲೂಕು ಉತ್ಸವಕ್ಕೆ ನಿನ್ನೆ ಅದ್ದೂರಿ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಮೆರವಣಿಗೆ ನಂತರ ಹೊಯ್ಸಳ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ,ಕೋವಿಡ್ ಸಂಕಷ್ಟ ಸಮಯ ತಲುಪಿದ ಮೇಲೆ ಮನೋರಂಜನೆಗೆ ಹಿನ್ನಡೆಯಾಗಿತ್ತು. ಹಾಗಾಗಿ ಮೂಡಿಗೆರೆ ತಾಲೂಕಿನ ಜನತೆಗೆ ಮನೋರಂಜನೆ ಮೂಡಿಸುವ ದೃಷ್ಟಿಯಿಂದ ಮೂಡಿಗೆರೆ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವ ಜನರ ಉತ್ಸವವೆಂದು ಹೇಳಿದರು.

ಕೋವಿಡ್ ಸೇರಿದಂತೆ ಅತಿವೃಷ್ಟಿಯಿಂದ ಕಂಗಾಲಾಗಿದ್ದ ಜನರಿಗೆ ಈ ಸಂಕಟದಿಂದ ಹೊರ ಬರುವ ದೃಷ್ಟಿಯಿಂದ ಪಕ್ಷಾತೀತವಾಗಿ ಮೂಡಿಗೆರೆ ಉತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗಿದೆ. ಇದು ಕೇವಲ ಉತ್ಸವ ಮಾತ್ರವಲ್ಲ. ಇಲ್ಲಿನ ಪ್ರವಾಸೋಧ್ಯಮಕ್ಕೆ ಪೂರಕವಾಗಿದೆ. ಅಲ್ಲದೇ ಜನರಲ್ಲಿ ಸಾಮರಸ್ಯ ಮನೋಭಾವನೆ ಉಂಟಾಗುವ ವಾತಾವರಣ ಉಂಟಾಗುತ್ತದೆ. ಹಾಗಾಗಿ ತಾಲೂಕಿನ ಜನತೆ ಉತ್ಸದಲ್ಲಿ ಪಾಲ್ಗೊಳ್ಳುವ ಮೂಲಕ ಮೆರಗು ಸವಿಯಬೇಕೆಂದು ಮನವಿ ಮಾಡಿದರು.

ಅಧ್ಯಕ್ಷೆ ವಹಿಸಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜೀವನದ ಪ್ರಮುಖ ಅಂಗವೇ ಸಾಂಸ್ಕøತಿಕ. ಹಾಗಾಗಿ ಮನೋರಂಜನೆ ಜತೆಗೆ ಮಲೆನಾಡಿನ ಗ್ರಾಮೀಣ ಭಾಗದ ಅಡುಗೆ, ತೊಡುಗೆ, ಜಾನಪದ ಕಲೆ, ಸಂಸ್ಕøತಿ ಅನಾವರಣಗೊಳಿಸುವ ಉದ್ದೇಶದಿಂದ ಮೂಡಿಗೆರೆ ಉತ್ಸವವನ್ನು ಜಾತ್ರೆ ರೀತಿಯಲ್ಲಿ ನಡೆಸಲಾಗುತ್ತಿದೆ. ಟೀಕೆ ಮಾಡುವುದು ಇದ್ದೇ ಇರುತ್ತದೆ. ಎಷ್ಟೇ ಕಷ್ಟವಿದ್ದರೂ ಹಬ್ಬಗಳು ಬಂದಾಗ ಎಲ್ಲರೂ ಆಚರಣೆ ಮಾಡುವುದನ್ನು ಬಿಡುವುದಿಲ್ಲ.. ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರನ್ನೂ ಬೆಸುಗೆಯಾಗಿ ಒಗ್ಗೂಡಿಸುತ್ತದೆ. ಇದಕ್ಕೆ ಮೆರವಣಿಗೆಯಲ್ಲಿ ಎಲ್ಲಾ ಧರ್ಮದ ಜನರು ಪಾಲ್ಗೊಂಡಿರುವುದೇ ಸಾಕ್ಷಿಯಾಗಿತ್ತು. ತಾಲೂಕಿನ ಜನತೆ 4 ದಿನ ಎಲ್ಲಾ ನೋವನ್ನು ಮರೆತು ಉತ್ಸವ ಸಂಭ್ರಮಿಸಬೇಕೆಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ, ಸಮಿತಿಯ ಗೌರವ ಸಲಹೆಗಾರ ಜಿ.ಬಿ. ಧರ್ಮಪಾಲ್, ಸಮಿತಿ ಕಾರ್ಯಾಧ್ಯಕ್ಷ ಜೆ.ಎಸ್.ರಘು, ಪ್ರಧಾನ ಸಂಚಾಲಕ ಪ್ರಸನ್ನ ಗೌಡಹಳ್ಳಿ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕಸಾಪ ಅಧ್ಯಕ್ಷ ಶಾಂತಕುಮಾರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಕೆ.ವೆಂಕಟೇಶ್, ಅನುಕುಮಾರ್, ಸುಧೀರ್, ಹಂಜಾ, ಮನೋಜ್, ಸಿ.ಎಂ.ಗೀತಾ, ಎಚ್.ಪಿ.ರಮೇಶ್, ಹೆಚ್.ಜೆ. ಸಂದರ್ಶ, ಮಂಜುನಾಥ್, ಚಂದ್ರಶೇಖರ್, ತಹಸೀಲ್ದಾರ್ ಪಿ. ತಿಪ್ಪೇಸ್ವಾಮಿ, ತಾ.ಪಂ. ಕಾರ್ಯನಿರ್ವಹಣ ಅಧಿಕಾರಿ ಹರ್ಷಕುಮಾರ್, ಬಿ.ಇ.ಓ. ಹೇಮಂತ್ ರಾಜ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಸಿ.ಡಿ.ಪಿ.ಓ ವೀರಭದ್ರೇಗೌಡ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಮ್ಮೇಳನದ ಅಂಗವಾಗಿ ಮೂಡಿಗೆರೆ ಪಟ್ಟಣದಲ್ಲಿ ಭವ್ಯವಾದ ಸಾಂಸ್ಕøತಿಕ ಮೆರವಣಿಗೆ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದ ನಂತರ ಸ್ಥಳೀಯ ಕಲಾ ತಂಡಗಳಿಂದ ಆಕರ್ಷಕ ಸಾಂಸ್ಕøತಿಕ ಪ್ರದರ್ಶನ ಏರ್ಪಡಿಸಲಾಗಿತ್ತು.

ಹೆಲಿಟೂರಿಸಂ ಮೂಲಕ ಪಟ್ಟಣದ ಸುತ್ತಮುತ್ತಲ ಪ್ರದೇಶಗಳನ್ನು ಹೆಲಿಕಾಪ್ಟರ್ ಮೂಲಕ ಸುತ್ತಲು ಅವಕಾಶವಿತ್ತು. ಆಹಾರ ಮೇಳದಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಸವಿಯಲು ಅವಕಾಶವಿತ್ತು.

ನಾಲ್ಕು ದಿನದ ಉತ್ಸವದಲ್ಲಿ ಮೊದಲನೇ ದಿನವೇ ಸಾವಿರಾರು ಜನರು ಉತ್ಸಹದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇಂದು ಸಂಜೆ 6ಗಂಟೆಯಿಂದ ಉಡುಪಿಯ ಭಾರ್ಗವಿ ಕಲಾ ತಂಡದಿಂದ ಸಾಂಸ್ಕøತಿಕ ಪ್ರದರ್ಶನ ಏರ್ಪಡಿಸಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ