October 5, 2024

ಇದೊಂದು ವಿಚಿತ್ರ ಪ್ರಕರಣ, ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ ಆರು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿವೆ.

ಕಳೆದ ಹತ್ತುದಿನಗಳ ಅವಧಿಯಲ್ಲಿ ಉಗ್ಗೇಹಳ್ಳಿಯ ಸಂದೀಪ್ ಎನ್ನುವವರಿಗೆ ಸೇರಿದ ನಾಲ್ಕು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿವೆ. ಹಾಗೆಯೇ ಅವರ ಕೊಟ್ಟಿಗೆಗೆ ಬಂದಿದ್ದ ಬೇರೆ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಹಾಗೆಯೇ ಪಕ್ಕದ ಹಂತೂರು ಗ್ರಾಮದಲ್ಲಿ ಒಂದು ಜಾನುವಾರು ಸಾವನ್ನಪ್ಪಿದೆ.

ಸಂದೀಪ್ ಅವರದು ಉಗ್ಗೇಹಳ್ಳಿ ಗ್ರಾಮದ ಇತರೆ ಮನೆಗಳಿಂದ ತುಸುದೂರವಿರುವ ಒಂಟಿ ಮನೆ. ಅವರ ದನದ ಕೊಟ್ಟಿಗೆ ಮನೆಯಿಂದ ದೂರದಲ್ಲಿ ತೋಟದ ಸಮೀಪ ಇತ್ತು. ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ದನಗಳು ಈಗ್ಗೆ ಹದಿನೈದು ದಿನಗಳ ಹಿಂದೆ ಕಾಣೆಯಾಗಿದ್ದವು. ನಂತರ ಅವು ಸಮೀಪದ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅದಾಗಿ ಹತ್ತುದಿನಗಳ ಅವಧಿಯಲ್ಲಿ ಮತ್ತೆ ನಾಲ್ಕು ದನಗಳು ಅದೇ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದವು. ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು ಹೊರಗೆ ಅಟ್ಟಿಕೊಂಡು ಹೋಗಿ ಮರವೊಂದಕ್ಕೆ ಕಟ್ಟಿ ಹಾಕಿ ಸಾಯಿಸಿದ ಸ್ಥಿತಿಯಲ್ಲಿ ಜಾನುವಾರುಗಳ ಶವ ಪತ್ತೆಯಾಗಿದೆ. ಈ ಬಗ್ಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಕ್ತ ತನಿಖೆಯಾಗಲಿ :

ಇಲ್ಲಿ ಸಾವನ್ನಪ್ಪಿರುವ ಜಾನುವಾರುಗಳು ಹೇಗೆ ಮೃತಪಟ್ಟವು ? ಎಂಬುದನ್ನು ಸೂಕ್ತವಾಗಿ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಬೇಕಾಗಿದೆ. ಸಾವನ್ನಪ್ಪಿರುವ ಎಲ್ಲಾ ಗೋವುಗಳು ಒಂದೇ ಪ್ರದೇಶದಲ್ಲಿ ಕಂಡುಬಂದಿವೆ. ಎಲ್ಲಾ ಜಾನುವಾರುಗಳು ಕುತ್ತಿಗೆಯ ಭಾಗದಲ್ಲಿ ಗಾಯಗೊಂಡು ಮೃತಪಟ್ಟಿವೆ. ಇದು ಗುಂಡೇಟಿನ ಕೃತ್ಯವೇ ? ಕಾಡುಪ್ರಾಣಿಗಳ ದಾಳಿಯಿಂದ ಆಗಿರುವ ಸಾವೇ ? ಒಂದು ವೇಳೆ ಗುಂಡೇಟಿನಿಂದ ಆಗಿದ್ದರೆ ಅಷ್ಟು ಗೋವುಗಳನ್ನು ಕೊಂದವರು ಯಾರು ? ಜಾನುವಾರುಗಳನ್ನು ಕೊಲ್ಲಲು ಕಾರಣವೇನು ? ಈ ಭಾಗದಲ್ಲಿ ಇತ್ತೀಚೆಗೆ ಚಿರತೆಯೊಂದು ಸಂಚರಿಸಿ ಸಮೀಪದ ಹಾಲೂರು ಗ್ರಾಮದಲ್ಲಿ ಜಾನುವಾರುಗಳನ್ನು ಸಾಯಿಸಿತ್ತು. ಹಂತೂರು ಗ್ರಾಮದಲ್ಲಿ ಜಾನುವಾರೊಂದರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.

ಉಗ್ಗೇಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಮೂಡಿಗೆರೆ ಪಶುವೈದ್ಯರಾದ ಮನು ಅವರು ಇದು ಮೇಲ್ನೋಟಕ್ಕೆ ಗುಂಡೇಟಿನಿಂದ ಸಾವನ್ನಪ್ಪಿವೆ ಎಂದು ವರದಿ ನೀಡಿದ್ದಾರೆ.

ಆದರೆ ಈ ವಿಚಾರದಲ್ಲಿ ಸಮಗ್ರವಾದ ತನಿಖೆ ಆಗಬೇಕು. ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡು ಕಷ್ಟದಿಂದ ಬದುಕು ನಡೆಸುತ್ತಿರುವ ಸಂದೀಪ್ ಅವರು ಸಾಕಿದ್ದ ಜಾನುವಾರುಗಳೆಲ್ಲ ಹತ್ತು ದಿನಗಳ ಅವಧಿಯಲ್ಲಿ ಸಾವನ್ನಪ್ಪಿವೆ. ಇದರಿಂದ ಅವರಿಗೆ ತುಂಬಾ ನಷ್ಟವಾಗಿದೆ. ಈ ರೀತಿ ಜಾನುವಾರುಗಳು ವಿಚಿತ್ರವಾದ ಸನ್ನಿವೇಶದಲ್ಲಿ ಸಾವನ್ನಪ್ಪಿರುವುದು ಗ್ರಾಮದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಈ ವಿಚಾರವನ್ನು ಸಂಬಂಧಿಸಿದ ಇಲಾಖೆಗಳು ಕೂಲಂಕುಷವಾಗಿ ತನಿಖೆ ನಡೆಸಿ ಜಾನುವಾರುಗಳ ಸಾವಿಗೆ ನಿಖರ ಕಾರಣವನ್ನು ಕಂಡುಹಿಡಿಯಬೇಕಾಗಿದೆ. ಸರ್ಕಾರ ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ