October 5, 2024

ಇದೊಂದು ಅಪರೂಪದ ಅಂಗನವಾಡಿ ಕೇಂದ್ರ. ಯಾವ ನರ್ಸರಿ ಶಾಲೆಗಳಿಗೂ ಕಮ್ಮಿಯಿಲ್ಲದಂತೆ ನಳನಳಿಸುತ್ತಿದೆ. ಅಂಗನವಾಡಿ ಕೇಂದ್ರದ ಸುತ್ತ ಸುಂದರವಾದ ಉದ್ಯಾನವನ, ಕೈತೋಟ, ಗೋಡೆಗಳಿಗೆ ಆಕರ್ಷಕ ಚಿತ್ರವಿನ್ಯಾಸ, ಮಕ್ಕಳಿಗೆ ಆಟವಾಡಲು ಅನೇಕ ಪರಿಕರಗಳು..

ಹೌದು, ಇಂತಹುದೊಂದು ಮಾದರಿ ಅಂಗನವಾಡಿ ಕೇಂದ್ರ ಕಂಡುಬರುವುದು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಮರ್ಕಲ್ ಗ್ರಾಮದಲ್ಲಿ.

ಮೊನ್ನೆ ನಡೆದ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಈ ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ರೀಮತಿ ವನಜಾಕ್ಷಿ ಯವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸ್ಥಳೀಯ ನಿಡುವಾಳೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗ್ರಾ.ಪಂ. ಸದಸ್ಯ ಸಚಿನ್ ಮರ್ಕಲ್ ಅವರು ಸ್ವತಃ ಅಂಗನವಾಡಿ ಶಿಕ್ಷಕಿ ವನಜಾಕ್ಷಿಯವರ ಪುತ್ರ. ಸಚಿನ್ ಅವರ ಪ್ರೋತ್ಸಾಹ ಮತ್ತು ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಆಸಕ್ತಿಯಿಂದ ಮರ್ಕಲ್ ಅಂಗನವಾಡಿ ಕೇಂದ್ರ ಜಿಲ್ಲೆಯಲ್ಲಿಯೇ ಒಂದು ಮಾದರಿ ಅಂಗನವಾಡಿಯಾಗಿ ಗುರುತಿಸಿಕೊಂಡಿದೆ.

ನರೇಗಾ ಯೋಜನೆಯ ಅನುದಾನ ಬಳಿಸಿಕೊಂಡು ಅಂಗನವಾಡಿ ಕೇಂದ್ರಕ್ಕೆ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಉದ್ಯಾನವನದಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ ಅಳವಡಿಸಲಾಗಿದೆ. ಪೌಷ್ಟಿಕ ತರಕಾರಿಗಳನ್ನು ಬೆಳೆಯಲಾಗಿದೆ. ನಳನಳಿಸುವ ಹೂತೋಟ ನಿರ್ಮಿಸಲಾಗಿದೆ.

ಸ್ವಚ್ಚವಾದ ಅಡುಗೆಮನೆ, ಶೌಚಾಲಯ, ಮಕ್ಕಳು ಮಲಗುವ ಜಾಗಕ್ಕೆ ಫ್ಯಾನ್ ಅಳವಡಿಕೆ, ಮಕ್ಕಳನ್ನು ಆಕರ್ಷಿಸಲು ನೆಲಕ್ಕೆ ತ್ರೀಡಿ ವಿನ್ಯಾಸದ ಟೈಲ್ಸ್ ಅವಳಡಿಸಲಾಗಿದೆ. ಗೋಡೆಗಳಿಗೆ ಪ್ರಾಣಿಪಕ್ಷಿಗಳ ಚಿತ್ರ ಬಿಡಿಸಲಾಗಿದೆ. ದಾನಿಗಳ ನೆರವಿನಿಂದ ಉತ್ತಮ ಪೀಠೋಪಕರಣಗಳನ್ನು ಒದಗಿಸಲಾಗಿದೆ.

ಹೀಗೆ ಮರ್ಕಲ್ ಅಂಗನವಾಡಿ ಸುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಈ ಅಂಗನವಾಡಿಗೆ ಕಳುಹಿಸುತ್ತಿದ್ದಾರೆ.

ಇಲ್ಲಿನ ಮಕ್ಕಳಿಗೆ ಶಿಕ್ಷಕಿ ವನಜಾಕ್ಷಿ ಉತ್ತಮ ಸಂಸ್ಕಾರ, ನೀತಿಪಾಠಗಳನ್ನು ಕಲಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ